Home
ಸುದ್ದಿಜಾಲ

600ರೂ.ಒಳಗಿನ ಅತ್ಯುತ್ತಮ ರೀಚಾರ್ಜ್‌ ಪ್ಲ್ಯಾನ್‌ಗಳು: ನಿತ್ಯವೂ 5GB ವರೆಗೆ ಡೇಟಾ ಸೌಲಭ್ಯ!

ನಾವು ಬಳಕೆ ಮಾಡುವ ಸ್ಮಾರ್ಟ್‌ಫೋನ್‌ ಜೀವಂತವಾಗಿರಬೇಕು ಎಂದರೆ ಇಂಟರ್ನೆಟ್‌ ಅತ್ಯಗತ್ಯ. ಇಂಟರ್ನೆಟ್‌ ಇಲ್ಲದ ಸ್ಮಾರ್ಟ್‌ಫೋನ್‌ ಇಂದಿನ ದಿನಗಳಲ್ಲಿ ಏತಕ್ಕೂ ಬೇಡ ಎಂಬಂತೆ ಆಗುತ್ತದೆ. ಈ ನಡುವೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ವಿವಿಧ ರೀಚಾರ್ಜ್‌ ಪ್ಲ್ಯಾನ್‌ ಘೋಷಣೆ ಮಾಡಿದ್ದು, ಈ ಮೂಲಕ ಬಳಕೆದಾರರು ಸಾಕಷ್ಟು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಈ ಕೆಲವು ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ದಿನವೂ ನೀವು 5GB ಡೇಟಾ ಬಳಕೆ ಮಾಡಬಹುದು.

ಹೌದು, ವಿವಿಧ ರೀಚಾರ್ಜ್‌ ಪ್ಲ್ಯಾನ್‌ನಂತೆ 600ರೂ.ಗಳ ಒಳಗಿನ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಭಾರೀ ಸೌಲಭ್ಯ ಪಡೆದುಕೊಳ್ಳಬಹುದು. ಅದರಲ್ಲೂ ಒಂದು ಟೆಲಿಕಾಂ ಸಂಸ್ಥೆಯಂತೂ ನಿತ್ಯವೂ 5GBಡೇಟಾ ಸೌಲಭ್ಯ ನೀಡುತ್ತಿದೆ. ಅದೂ ಸಹ 84 ದಿನಗಳ ಮಾನ್ಯತೆಯೊಂದಿಗೆ. ಇದರೊಂದಿಗೆ ಉಚಿತ ಕರೆ ಸೌಲಭ್ಯ ಮತ್ತು ಇನ್ನೂ ಹೆಚ್ಚಿನ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ,ವಿ,ಜಿಒಯೋ ಹಾಗೂ ಬಿಎಸ್‌ಎನ್‌ಎಲ್‌ ಬಳಕೆದಾರರು ಈ ದರದ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ದಿನವೂ 5GB ಪಡೆದುಕೊಳ್ಳಬಹುದಾಗಿದೆ. ಬನ್ನಿ ಅವುಗಳ ವಿವರ ತಿಳಿಯೋಣ.

600ರೂ.ಒಳಗಿನ ಅತ್ಯುತ್ತಮ ರೀಚಾರ್ಜ್‌ ಪ್ಲ್ಯಾನ್‌ಗಳು: ನಿತ್ಯವೂ 5GB ವರೆಗೆ ಡೇಟಾ..

ಬಿಎಸ್‌ಎನ್‌ಎಲ್‌ನ 599ರೂ.ಪ್ಲ್ಯಾನ್‌ : 600ರೂ.ಗಳ ಒಳಗೆ ಲಭ್ಯ ಇರುವ ಪ್ರಮುಖ ಪ್ಲ್ಯಾನ್ ಇದಾಗಿದ್ದು. ಇದು 84 ದಿನಗಳ ಮಾನ್ಯತೆಯೊಂದಿಗೆ ನಿಮಗೆ ದಿನವೂ 5GBಡೇಟಾ ಸೌಲಭ್ಯ ಕಲ್ಪಿಸಲಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಹಾಗೂ 100 ಎಸ್ಎಮ್‌ಎಸ್ ಆಯ್ಕೆ ಈ ಪ್ಲ್ಯಾನ್‌ನಲ್ಲಿ ಇದ್ದು, ಇದಿಷ್ಟೇ ಅಲ್ಲದೆ ಮಧ್ಯಾಹ್ನ 12 ರಿಂದ ಬೆಳಗ್ಗೆ 5ರವರೆಗೆ ಅನಿಯಮಿತ ಉಚಿತ ಡೇಟಾ ಸೌಲಭ್ಯಲಭ್ಯ ಇರಲಿದೆ. ಇದರೊಂದಿಗೆ ಕೆಲವು ಉಚಿತ ಸೌಲಭ್ಯ ಸಹ ಪಡೆಯಬಹುದು.

ವಿ ಟೆಲಿಕಾಂನ 599ರೂ. ಪ್ಲ್ಯಾನ್‌: ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ನೀವು 70 ದಿನಗಳ ಮಾನ್ಯತೆ ಪಡೆಬಹುದಾಗಿದ್ದು, ದಿನವೂ 1.5GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಇದ್ದು, ಯೋಜನೆಯು ಡೇಟಾ ಡಿಲೈಟ್‌ಗಳು, ವೀಕೆಂಡ್ ರೋಲ್‌ಓವರ್ ಮತ್ತು ಬಿಂಜ್ ಆಲ್ ನೈಟ್ ಆಫರ್ ಸೇರಿದಂತೆ ವಿವಿಧ ಪ್ರಯೋಜನಗಳನ್ನು ನೀಡಲಿದೆ.

ಏರ್‌ಟೆಲ್‌ನ 599 ರೂ.ಗಳ ಪ್ಲ್ಯಾನ್‌: ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಬಳಕೆದಾರರು 28 ದಿನಗಳ ಮಾನ್ಯತೆಯೊಂದಿಗೆ 3GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ದಿನವೂ 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಸಹ ಈ ಪ್ಲ್ಯಾನ್‌ನಲ್ಲಿದೆ. ಇನ್ನು ಗ್ರಾಹಕರು 1 ವರ್ಷಕ್ಕೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ ಉಚಿತ ಚಂದಾದಾರಿಕೆ ಪಡೆದುಕೊಳ್ಳಬಹುದಾಗಿದೆ.

600ರೂ.ಒಳಗಿನ ಅತ್ಯುತ್ತಮ ರೀಚಾರ್ಜ್‌ ಪ್ಲ್ಯಾನ್‌ಗಳು: ನಿತ್ಯವೂ 5GB ವರೆಗೆ ಡೇಟಾ..

ಜಿಯೋದ 599ರೂ. ಪ್ಲ್ಯಾನ್‌: ಈ ರೀಚಾರ್ಜ್‌ ಪ್ಲ್ಯಾನ್ ಮೂಲಕ ಗ್ರಾಹಕರು ದಿನವೂ 1.5GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, 70 ದಿನಗಳ ಮಾನ್ಯತೆ ಇದರಲ್ಲಿದೆ. ಹಾಗೆಯೇ ಅನಿಯಮಿತ ಕರೆ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್‌ ಆಯ್ಕೆ ಸಹ ಇದ್ದು, ಇದರೊಂದಿಗೆ ಬಳಕೆದಾರರು ಜಿಯೋ ಸಿನಿಮಾ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಜಿಯೋ 799ರೂ.ಗಳ ಪ್ಲ್ಯಾನ್‌ಗಳಲ್ಲಿ 5GB ಡೇಟಾ ಸೌಲಭ್ಯ ಕಲ್ಪಿಸಿಕೊಟ್ಟಿದ್ದು, ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ.

600ರೂ.ಒಳಗಿನ ಅತ್ಯುತ್ತಮ ರೀಚಾರ್ಜ್‌ ಪ್ಲ್ಯಾನ್‌ಗಳು: ನಿತ್ಯವೂ 5GB ವರೆಗೆ ಡೇಟಾ..

ಇಲ್ಲಿ ನೀಡಲಾದ ಎಲ್ಲಾ ರೀಚಾರ್ಜ್‌ ಪ್ಲ್ಯಾನ್‌ಗಳು ಬೆಸ್ಟ್‌ ಎನಿಸಿದರೂ ಸಹ ಹಲವು ಭಿನ್ನತೆಯನ್ನು ಕಾಣಬಹುದು.ಆದರೆ, ಜಿಯೋ ಹಾಗೂ ವಿ ಟೆಲಿಕಾಂ ಪ್ಲ್ಯಾನ್‌ಗಳಲ್ಲಿ ಸಾಮಿಪ್ಯ ಕಂಡುಬಂದಿದ್ದು, ಉಳಿದ ರೀಚಾರ್ಜ್‌ ಅಂದರೆ ಬಿಎಸ್‌ಎನ್‌ಎಲ್‌ ಮಾತ್ರ ಅತ್ಯಧಿಕ ಡೇಟಾ ಸೌಲಭ್ಯವನ್ನು ನೀಡಲಿದೆ. ಆದರೆ, ಇದು 3G ಇಂಟರ್ನೆಟ್‌ ಆಗಿದೆ. ಉಳಿದ ಏರ್‌ಟೆಲ್‌ ಹಾಗೂ ಜಿಯೋ ಬಳಕೆದಾರರು 5G ವ್ಯಾಪ್ತಿಯಲ್ಲಿ ಇದ್ದರೆ 5G ನೆಟ್‌ಸೇವೆಯನ್ನು ಪಡೆದುಕೊಳ್ಳಬಹುದು.

Best Mobiles in India

English summary
In the recharge plan below Rs.600, customers can get huge benefits and BSNL will provide 5GB data facility. That too with 84 days validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+