Home
ಸುದ್ದಿಜಾಲ

ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?

ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಬೆರಳಿಗೆ ಧರಿಸಿಕೊಳ್ಳುವ ಉಂಗುರಗಳಿಗೆ ವಿಶೇಷವಾದ ಸ್ಥಾನ ಇದೆ. ಅದರಲ್ಲೂ ರಾಶಿ ಹಾಗೂ ಇನ್ನಿತರೆ ವಿಷಯಗಳ ಆಧಾರದ ಮೇಲೆ ಉಂಗುರುಗಳನ್ನು ಧರಿಸಲಾಗುತ್ತದೆ. ಆದರೆ ಈ ಉಂಗುರಗಳನ್ನು ಖರೀದಿ ಮಾಡಬೇಕು ಎಂದರೆ ಮೊದಲು ನಮ್ಮ ಕೈ ಬೆರಳಿನ ಸೈಜ್‌ ಎಷ್ಟಿದೆ ಎಂದು ತಿಳಿದುಕೊಳ್ಳಲೇ ಬೇಕಿದೆ. ಇದಕ್ಕಾಗಿ ಸಣ್ಣ ದಾರದಲ್ಲೋ ಅಥವಾ ಬೇರೆ ಇನ್ಯಾವುದೋ ಟೂಲ್ಸ್‌ ಬಳಕೆ ಮಾಡಿಕೊಂಡು ಪತ್ತೆಮಾಡಬೇಕು. ಆದರೆ, ಇನ್ಮುಂದೆ ಈ ತೊಂದರೆ ಇರುವುದಿಲ್ಲ.

ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?

ಹೌದು, ತಂತ್ರಜ್ಞಾನ ಇಂದು ಎಲ್ಲಾ ವಲಯದಲ್ಲೂ ವಿಶೇಷ ರೀತಿಯಲ್ಲಿ ಬಳಕೆಯಾಗುತ್ತಿದೆ. ಅದರಲ್ಲೂ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಬಳಕೆ ಮಾಡಿಕೊಂಡು ಹಲವಾರು ಕೆಲಸಗಳನ್ನು ಸುಲಭ ಮಾಡಿಕೊಂಡಿರಬಹುದು. ಹಾಗೆಯೇ ಆಭರಣಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಬಹುದಾಗಿದ್ದು, ನೀವು ರೀತಿ ಉಂಗುರ ಖರೀದಿಸುವ ಸಮಯದಲ್ಲಿ ನಿಮ್ಮ ಕೈ ಬೆರಳು ಎಷ್ಟು ಗಾತ್ರ ಹೊಂದಿದೆ ಎಂದು ತಿಳಿದುಕೊಳ್ಳಲು ಕೆಲವು ಆಪ್‌ಗಳನ್ನು ಬಳಕೆ ಮಾಡಬಹುದಾಗಿದೆ. ಹಾಗಿದ್ರೆ ಯಾವೆಲ್ಲಾ ಆಪ್‌ಗಳು ಹೇಗೆ ಕೆಲಸ ಮಾಡಲಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ರಿಂಗ್‌ ಸೈಜರ್‌ ಬೈ ಜಾಸನ್ ವಿಧರ್ಸ್
ಆಂಡ್ರಾಯ್ಡ್ ಬಳಕೆದಾರರು ನಿಮ್ಮ ರಿಂಗ್‌ ಸೈಜ್‌ ಪತ್ತೆ ಮಾಡಲು ಈ ಆಪ್‌ ಬಳಕೆ ಮಾಡಬಹುದಾಗಿದೆ. ಈ ಆಪ್‌ನಲ್ಲಿ ವ್ಯಾಸ ಹಾಗೂ ಸುತ್ತಳತೆಯ ವಿವರ ನೀಡುವ ಆಯ್ಕೆ ನೀಡಲಾಗಿದ್ದು, ಸುಲಭವಾಗಿ ನಿಮ್ಮ ಬೆರಳಿನ ಸೈಜ್‌ ಕಂಡುಕೊಳ್ಳಬಹುದು. ಇನ್ನು ಈ ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1M+ ಇನ್‌ಸ್ಟಾಲ್‌ ಆಗಿದ್ದು, 4.3 ರೇಟಿಂಗ್‌ ಪಡೆದುಕೊಂಡಿದೆ.

ರಿಂಗ್ ಸೈಜ್‌ ಫೈಂಡರ್‌
ಪ್ರಪಂಚದಾದ್ಯಂತ ಈ ಆಪ್‌ ಅನ್ನು ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಉಂಗುರದ ಗಾತ್ರವನ್ನು ಸುಲಭವಾಗಿ ಹಾಗೂ ನಿಖರವಾಗಿ ಪತ್ತೆ ಮಾಡಬಹುದಾಗಿದ್ದು, ಅಳತೆ ಪ್ರಕ್ರಿಯೆಯನ್ನು ಮೂರು ರೀತಿಯಲ್ಲಿ ಮಾಡಬಹುದಾಗಿದೆ. ಹಾಗೆಯೇ ಮೆಟ್ರಿಕ್ ಮಾನದಂಡದಲ್ಲಿ ಅಥವಾ ಇಂಚುಗಳಲ್ಲಿ ನಿಮ್ಮ ಉಂಗುರದ ಸೈಜ್‌ ಅನ್ನು ಕಂಡುಕೊಳ್ಳಬಹುದಾಗಿದೆ. ಇನ್ನು ಈ ಆಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 100K+ ಇನ್‌ಸ್ಟಾಲ್‌ ಆಗಿದ್ದು, 4.1 ರೇಟಿಂಗ್ ಪಡೆದುಕೊಂಡಿದೆ.

ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?

ರಿಂಗ್ ಸೈಜರ್ ಆಪ್‌-ಮೆಸರ್‌ ಯುವರ್‌
ಮೆಸರ್‌ ಯುವರ್‌ ಆಪ್‌ ಸಹ ವಿಶೇಷವಾದ ಸೌಲಭ್ಯ ನೀಡಲಿದ್ದು, ಇದರಲ್ಲೂ ಸಹ ಬೆರಳಿನ ಗಾತ್ರವನ್ನು ನಿರ್ಧರಿಸಲು ಮೂರು ಮಾರ್ಗ ನೀಡಲಾಗಿದೆ. ಈಗಾಗಲೇ ಬಳಕೆ ಮಾಡುತ್ತಿರುವ ಉಂಗುರವನ್ನು ಅಳೆಯುವ ಮೂಲಕ, ನಿಮ್ಮ ಬೆರಳನ್ನು ಅಳೆಯುವ ಮೂಲಕ ಹಾಗೂ ಬೆರಳಿನ ಗಾತ್ರವನ್ನು ಅಂತರರಾಷ್ಟ್ರೀಯ ಗಾತ್ರದಿಂದ ಪರಿವರ್ತಿಸುವ ಮೂಲಕ. ಅಂದರೆ ಗಾತ್ರ ಅಳೆಯುವ ವಿಚಾರದಲ್ಲಿ ಕೆಲವು ದೇಶಗಳು ವಿವಿಧ ಮಾನದಂಡವನ್ನು ಅನುಸರಿಸುತ್ತವೆ. ಅದೆಲ್ಲಕ್ಕೂ ಈ ಆಪ್‌ ಸಹಾಯವಾಗಲಿದೆ. ಇನ್ನು ಈ ಆಪ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಲಭ್ಯ. ಸದ್ಯಕ್ಕೆ ಇದು 4.4
ರೇಟಿಂಗ್‌ನೊಂದಿಗೆ 100K+ ಇನ್‌ಸ್ಟಾಲ್‌ ಆಗಿದೆ.

ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?

ರಿಂಗ್‌ ಫಿಂಗ್
ರಿಂಗ್‌ ಫಿಂಗ್ ಆಪ್‌ ಬೆರಳಿನ ಗಾತ್ರವನ್ನು ಸುಲಭವಾಗಿ ಪತ್ತೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಅನೇಕ ಘಟಕಗಳನ್ನು ಬೆಂಬಲಿಸುವ ಇದು, ಗಾತ್ರ ಪರಿವರ್ತನೆ ಚಾರ್ಟ್ ಅನ್ನು ಹೊಂದಿದೆ. ಜೊತೆಗೆ ಡಾರ್ಕ್ ಥೀಮ್ ಆಯ್ಕೆ ಇರುವುದು ಇನ್ನಷ್ಟು ವಿಶೇಷ. ಈ ಆಪ್‌ ಮೂಲಕ ಯುರೋಪ್, ಜಪಾನ್ ಮತ್ತು ಚೀನಾ, ಯುಎಸ್ಎ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್‌ ದೇಶದಲ್ಲಿ ಬಳಕೆ ಮಾಡುವ ಗಾತ್ರದ ವಿವರವನ್ನು ಒದಗಿಸುತ್ತದೆ. ಈ ಆಪ್‌ 10K+ ಇನ್‌ಸ್ಟಾಲ್‌ ಆಗಿದ್ದು, 3+ ರೇಟಿಂಗ್‌ ಹೊಂದಿದೆ.

ರಿಂಗ್‌ ಸೈಜರ್‌ ಬೈ ಸ್ಟೈಲೆಕ್ಸ್ ಜ್ಯುವೆಲರಿ
ಬಹಳಷ್ಟು ಮಂದಿ ಈಗ ಆನ್‌ಲೈನ್‌ನಲ್ಲೇ ಆಭರಣಗಳನ್ನು ಖರೀದಿ ಮಾಡುತ್ತಿರುವುದರಿಂದ ಈ ಆಪ್‌ ಸಹಕಾರಿಯಾಗಿದೆ. ಈ ಆಪ್‌ ನಿಮಗೆ 3 ಹಂತಗಳಲ್ಲಿ ನಿಮ್ಮ ನಿಖರವಾದ ರಿಂಗ್ ಗಾತ್ರವನ್ನು ಪತ್ತೆ ಮಾಡಲು ಅನುಕೂಲ ಮಾಡಿಕೊಡಲಿದ್ದು, 10K+ ಇನ್‌ಸ್ಟಾಲ್‌ ಆಗಿದೆ.

Best Mobiles in India

English summary
Best Ring Size Measure Apps for Android and iOS. you can use the apps for find the exact size of your finger. details are in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+