Home
ಸುದ್ದಿಜಾಲ

ಇಂತಹ ರಫ್‌ ಆಂಡ್‌ ಟಫ್‌ ಫೋನ್‌ ಇದ್ರೆ, ಫೋನ್‌ ಬಿದ್ರೂ ಏನಾಗಲ್ಲ!..ಈ ಲಿಸ್ಟ್‌ ನೋಡಿ!

ದೇಶಿಯ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಹೊಸ ಫೋನ್‌ ಖರೀದಿಸುವ ಜನರು ಸಹಜವಾಗಿ ಜನಪ್ರಿಯ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಬಜೆಟ್‌ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳತ್ತ ಗಮನ ನೀಡುತ್ತಾರೆ.

ಇಂತಹ ರಫ್‌ ಆಂಡ್‌ ಟಫ್‌ ಫೋನ್‌ ಇದ್ರೆ, ಫೋನ್‌ ಬಿದ್ರೂ ಏನಾಗಲ್ಲ!ಈ ಲಿಸ್ಟ್‌ ನೋಡಿ!

ಅಲ್ಲದೇ ಬಹುತೇಕ ಜನರು ಅವರ ಬಳಕೆ ಹಾಗೂ ಜಿವನಶೈಲಿಗೆ ಸರಿಹೊಂದುವ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ. ವಿಶೇಷ ಅಂದ್ರೆ, ಬಜೆಟ್‌ ದರದಲ್ಲಿ ಕೆಲವು ರಫ್‌ ಆಂಡ್‌ ಟಫ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಹೌದು, ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳನ್ನು ಹೊರತಾಗಿ ಇತರೆ ಕೆಲವು ಮೊಬೈಲ್‌ ಸಂಸ್ಥೆಗಳು ಕೆಲವು ಆಕರ್ಷಕ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆ ಪೈಕಿ ಕೆಲವು ಸ್ಮಾರ್ಟ್‌ಫೋನ್‌ಗಳು ರಫ್‌ ಆಂಡ್‌ ಟಫ್‌ (Rough and Tough) ರಚನೆ ಪಡೆದಿದ್ದು, ರಗಡ್‌ ಲುಕ್‌ನಲ್ಲಿವೆ. ಫೋನ್‌ ಹೆಚ್ಚು ವರ್ಷ ಬಾಳಿಕೆ ಬರಲಿ ಎಂದು ಬಯಸುವ ಗ್ರಾಹಕರಿಗೆ ಇಂತಹ ಫೋನ್‌ಗಳು ಗಮನ ಸೆಳೆಯುತ್ತವೆ.

ಇಂತಹ ರಫ್‌ ಆಂಡ್‌ ಟಫ್‌ ಫೋನ್‌ ಇದ್ರೆ, ಫೋನ್‌ ಬಿದ್ರೂ ಏನಾಗಲ್ಲ!ಈ ಲಿಸ್ಟ್‌ ನೋಡಿ!

ರಫ್‌ ಆಂಡ್‌ ಟಫ್‌ ಸ್ಮಾರ್ಟ್‌ಫೋನ್‌ಗಳು ಬಾಹ್ಯವಾಗಿ ಕಠಿಣ ರಚನೆಯನ್ನು ಪಡೆದಿದ್ದರೂ, ಇವು ಇತರೆ ಸ್ಮಾರ್ಟ್‌ಫೋನ್‌ಗಳಂತೆ ಅತ್ಯುತ್ತಮ ಡಿಸ್‌ಪ್ಲೇ, ವೇಗದ ಪ್ರೊಸೆಸರ್‌, ಬೆಸ್ಟ್ ಕ್ಯಾಮೆರಾ ಆಯ್ಕೆ ಹಾಗೂ ಬಿಗ್ ಬ್ಯಾಟರಿ ಆಯ್ಕೆಗಳನ್ನು ಒಳಗೊಂಡಿವೆ. ಹಾಗಾದರೆ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಕೆಲವು ಬೆಸ್ಟ್‌ ರಫ್‌ ಆಂಡ್‌ ಟಫ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂತಹ ರಫ್‌ ಆಂಡ್‌ ಟಫ್‌ ಫೋನ್‌ ಇದ್ರೆ, ಫೋನ್‌ ಬಿದ್ರೂ ಏನಾಗಲ್ಲ!ಈ ಲಿಸ್ಟ್‌ ನೋಡಿ!

Ulefone Armor 7 ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ ರಫ್‌ ಆಂಡ್‌ ಟಫ್‌ ಡಿಸೈನ್‌ ಪಡೆದಿದ್ದು, ಜೊತೆಗೆ ಉತ್ತಮ ಫೀಚರ್ಸ್‌ ಆಯ್ಕೆ ಹೊಂದಿದೆ. ಈ ಫೋನ್ 6.3 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P90 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಇದರೊಂದಿಗೆ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇಂತಹ ರಫ್‌ ಆಂಡ್‌ ಟಫ್‌ ಫೋನ್‌ ಇದ್ರೆ, ಫೋನ್‌ ಬಿದ್ರೂ ಏನಾಗಲ್ಲ!ಈ ಲಿಸ್ಟ್‌ ನೋಡಿ!

Doogee S95 Pro ಸ್ಮಾರ್ಟ್‌ಫೋನ್‌

ಇದು ಸಹ ರಫ್‌ ಆಂಡ್‌ ಟಫ್‌ ಡಿಸೈನ್‌ ಪಡೆದಿದೆ. ಅಲ್ಲದೇ ಈ ಫೋನ್ 6.3 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P90 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ 5,1500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 24W ವೈರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಜೊತೆಗೆ ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇಂತಹ ರಫ್‌ ಆಂಡ್‌ ಟಫ್‌ ಫೋನ್‌ ಇದ್ರೆ, ಫೋನ್‌ ಬಿದ್ರೂ ಏನಾಗಲ್ಲ!ಈ ಲಿಸ್ಟ್‌ ನೋಡಿ!

Blackview BV9500 ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ ರಗಡ್‌ ಲುಕ್‌ ಜೊತೆಗೆ 10000 mAh ಸಾಮರ್ಥ್ಯದ ಜಬರ್ದಸ್ತ್‌ ಬ್ಯಾಟರಿ ಬ್ಯಾಕ್‌ಅಪ್‌ ಸಹ ಪಡೆದಿದೆ. ಈ ಫೋನ್ 5.7 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P23 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಫೋನ್‌ ವೈರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಜೊತೆಗೆ ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇಂತಹ ರಫ್‌ ಆಂಡ್‌ ಟಫ್‌ ಫೋನ್‌ ಇದ್ರೆ, ಫೋನ್‌ ಬಿದ್ರೂ ಏನಾಗಲ್ಲ!ಈ ಲಿಸ್ಟ್‌ ನೋಡಿ!

Ulefone Armor 3T ಸ್ಮಾರ್ಟ್‌ಫೋನ್‌

ಈ ರಫ್‌ ಆಂಡ್‌ ಟಫ್‌ ಸ್ಮಾರ್ಟ್‌ಫೋನ್ 5.7 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P23 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಸಿಂಗಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಅದು 21 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಫೋನ್‌ 10300mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಜೊತೆಗೆ ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

Best Mobiles in India

English summary
Here's Few Best Rough and Tough Smartphones You Can Buy in India; know more details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+