Home
ಸುದ್ದಿಜಾಲ

ಹೊಸ ರೆಡ್ಮಿ ಮೊಬೈಲ್‌ ಖರೀದಿ ಮಾಡಬೇಕೆ?..ಹಾಗಿದ್ರೆ, ಇವೇ ಬೆಸ್ಟ್‌ ಫೋನ್‌ಗಳು!

ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ರೆಡ್ಮಿ ಸಂಸ್ಥೆಯು ಜನಪ್ರಿಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅಗ್ಗದ ಬೆಲೆಯಿಂದ ಹೈ ಎಂಡ್ ಬೆಲೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ರೆಡ್ಮಿ ಕಂಪನಿಯು ಗ್ರಾಹಕರನ್ನು ಆಕರ್ಷಿಸಿದೆ. ಇದರಲ್ಲಿಯೂ ರೆಡ್ಮಿ ನೋಟ್ ಸರಣಿಯ ಫೋನ್‌ಗಳು ಹಾಗೂ ರೆಡ್ಮಿ K ಸರಣಿಯ ಫೋನ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಹೌದು, ರೆಡ್ಮಿ ಸಂಸ್ಥೆಯ ಬಹುತೇಕ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚಿನ ಕೆಲವು ಫೋನ್‌ಗಳು ಅತ್ಯುತ್ತಮ ಡಿಮ್ಯಾಂಡ್‌ ಪಡೆದಿವೆ. ನೀವೇನಾದರೂ ಇದೀಗ ಹೊಸದಾಗಿ ರೆಡ್ಮಿ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಯೋಚನೆ ಮಾಡಿದ್ರೆ, ಈ ಲೇಖನದಲ್ಲಿ ನೀಡಿರುವ ಕೆಲವು ಅತ್ಯುತ್ತಮ ರೆಡ್ಮಿ ಫೋನ್‌ಗಳ ಬಗ್ಗೆ ಒಮ್ಮೆ ಗಮನಿಸಿ. ಮುಂದೆ ಓದಿರಿ.

ಹೊಸ ರೆಡ್ಮಿ ಮೊಬೈಲ್‌ ಖರೀದಿ ಮಾಡಬೇಕೆ?..ಹಾಗಿದ್ರೆ, ಇವೇ ಬೆಸ್ಟ್‌ ಫೋನ್‌ಗಳು!

ರೆಡ್ಮಿ ನೋಟ್‌ 12 5G : ರೆಡ್ಮಿ ನೋಟ್‌ 12 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹಾಗೆಯೇ 4GB + 128GB, 4GB RAM + 128GB ಮತ್ತು 6GB RAM + 128GB ಇಂಟರ್‌ ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಆಗಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಹೊಸ ರೆಡ್ಮಿ ಮೊಬೈಲ್‌ ಖರೀದಿ ಮಾಡಬೇಕೆ?..ಹಾಗಿದ್ರೆ, ಇವೇ ಬೆಸ್ಟ್‌ ಫೋನ್‌ಗಳು!

ಶಿಯೋಮಿ 11T ಪ್ರೊ 5G : ಈ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಬಲವನ್ನು ಪಡೆದಿದೆ.

ಹಾಗೆಯೇ 8GB + 128GB, 8GB + 256GB ಮತ್ತು 12GB + 256GB ಸಾಮರ್ಥ್ಯದ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಹೊಸ ರೆಡ್ಮಿ ಮೊಬೈಲ್‌ ಖರೀದಿ ಮಾಡಬೇಕೆ?..ಹಾಗಿದ್ರೆ, ಇವೇ ಬೆಸ್ಟ್‌ ಫೋನ್‌ಗಳು!

ರೆಡ್ಮಿ ನೋಟ್ 10S : ಈ ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ AMOLED ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ರೆಡ್ಮಿ K50i : ಈ ಫೋನ್‌ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಫೋನ್ 20.5:9 ರಚನೆಯನ್ನು ಹೊಂದಿದ್ದು, ಜೊತೆಗೆ 144Hz ರಿಫ್ರೇಶ್‌ ರೇಟ್‌ ಅನ್ನು ಒಳಗೊಂಡಿದೆ. ಹಾಗೆಯೇ ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಪಡೆದಿದೆ.

ಇದರೊಂದಿಗೆ ಈ ಫೋನ್ 8GB + 256GB ಮತ್ತು 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಹಾಗೆಯೇ 5,080mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದಿದೆ.

Best Mobiles in India

English summary
If You Are Looking to Buy New Redmi Phone, Check out this Best Selling Redmi Mobiles in India 2023 list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+