10,000 ರೂ.ಒಳಗಿನ ಸ್ಮಾರ್ಟ್‌ಟಿವಿ ಖರೀದಿಸುತ್ತಿದ್ದೀರಾ? ಇಲ್ಲಿದೆ ಲಿಸ್ಟ್!
ಸ್ಮಾರ್ಟ್‌ಟಿವಿ ವಿಭಾಗದಲ್ಲಿ ಕೈಗೆಟಕುವ ದರದಿಂದ ಹಿಡಿದ ದುಬಾರಿ ಬೆಲೆಯ ಸ್ಮಾರ್ಟ್‌ಟಿವಿಗಳು ಲಭ್ಯ ಇವೆ. ಅದರಂತೆ ಭಾರತದಲ್ಲಿ ಅದರಲ್ಲೂ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಟಿವಿಗಳಿಗೆ ಭಾರೀ ಬೇಡಿಕೆ ಇದ್ದು, ನೀವೇನಾದರೂ ಈ ವೇಳೆ 10,000ರೂ. ಒಳಗಿನ ಸ್ಮಾರ್ಟ್‌ಟಿವಿ ಖರೀದಿಗೆ ಮುಂದಾಗಿದ್ದರೆ ಇಲ್ಲಿದೆ ಲಿಸ್ಟ್.
ಹೌದು, ಸ್ಮಾರ್ಟ್‌ಟಿವಿಗಳಲ್ಲಿ ಹಲವಾರು ಪ್ರಮುಖ ಬ್ರ್ಯಾಂಡ್‌ನ ಟಿವಿಗಳು ಲಭ್ಯವಾಗುತ್ತಿದ್ದು, ಇದರಲ್ಲಿ ಇನ್ಫಿನಿಕ್ಸ್, ಥಾಮ್ಸನ್, ಕೊಡಕ್, ಬ್ಲೂಪಂಕ್ಟ್ ಸೇರಿದಂತೆ ಇನ್ನಿತರೆ ಪ್ರಮುಖ ಕಂಪೆನಿಯ ಸ್ಮಾರ್ಟ್‌ಟಿವಿಗಳು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ಇ-ಕಾಮರ್ಸ್ ಸೈಟ್ ಮೂಲಕ ಆಫರ್ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಟಿವಿಗಳು ಪ್ರಮುಖ ಫೀಚರ್ಸ್ ಹಾಗೂ ನಿಖರ ಬೆಲೆ ಬಗ್ಗೆ ತಿಳಿಯೋಣ.

ಇನ್ಫಿನಿಕ್ಸ್ 32Y1 : ಇನ್ಫಿನಿಕ್ಸ್ 32Y1 ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಇದು 60 Hz ರಿಫ್ರೆಶ್ ರೇಟ್ ನೀಡಲಿದೆ. ಹಾಗೆಯೇ 1366 x 768 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇನ್ನುಳಿದಂತೆ ಇದು 250 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹೊಂದಿದ್ದು, ಕ್ವಾಡ್‌ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಸ್ಮಾರ್ಟ್‌ಟಿವಿಯನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 8,499 ರೂ.ಗಳಿಗೆ ಖರೀದಿ ಮಾಡಬಹುದು.
ಆಡ್ಸನ್ A-3210S : ಆಡ್ಸನ್ A-3210S ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್ ಹಾಗೂ 1366 x 768 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯನ್ನು ಫ್ಲಿಪ್‌ಕಾರ್ಟ್ ಸೇರಿದಂತೆ ಇತರೆ ಪ್ರಮುಖ ಕಾಮರ್ಸ್ ಸೈಟ್ ಮೂಲಕ 7,890 ರೂ. ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಡೈನೋರಾ DY-LD32H4S: ಡೈನೋರಾ DY-LD32H4S ಸ್ಮಾರ್ಟ್‌ಟಿವಿ ಸಹ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಇದು 60 Hz ರಿಫ್ರೆಶ್ ರೇಟ್ 1366 x 768 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 250 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 8,299 ರೂ.ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದು.
ಥಾಮ್ಸನ್ 32ALPHA007BL: ಥಾಮ್ಸನ್ 32ALPHA007BL ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಡಿಸ್‌ಪ್ಲೇ ಜೊತೆಗೆ 60 Hz ರಿಫ್ರೆಶ್ ರೇಟ್ ಹಾಗೂ 1366 x 768 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದ್ದು, 400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹೊಂದಿದೆ. ಇದನ್ನು ಸಹ ಫ್ಲಿಪ್‌ಕಾರ್ಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಸೈಟ್ ಮೂಲಕ 8,499 ರೂ. ಗಳ ದರದಲ್ಲಿ ಖರೀದಿ ಮಾಡಬಹುದು.

ಕೊಡಾಕ್ 32HDX7XPRO: ಕೊಡಾಕ್ 32HDX7XPRO ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್ ಹಾಗೂ 1366 x 768 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದ್ದು ಇದನ್ನು ನೀವು ಅಮೆಜಾನ್ ಮೂಲಕ 9,490 ರೂ. ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ.
ಇಫಾಲ್ಕನ್ 32F53 : ಇಫಾಲ್ಕನ್ 32F53 ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಇದು 60 Hz ರಿಫ್ರೆಶ್ ರೇಟ್ ಹಾಗೂ 1366 x 768 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ 220 ನಿಟ್ಸ್ ಬ್ರೈಟ್‌ನೆಸ್ ಅನ್ನು ಇದು ನೀಡಲಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಮೂಲಕ 9,499 ರೂ. ಗಳ ಆಫರ್ ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








