Home
ಸುದ್ದಿಜಾಲ

ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ 32 ಇಂಚಿನ 5 ಸ್ಮಾರ್ಟ್‌ಟಿವಿಗಳು!

ಸದ್ಯ ಸ್ಮಾರ್ಟ್‌ ಟಿವಿಗಳ ಅಬ್ಬರ ಜೋರಾಗಿದ್ದು, ಮೊಬೈಲ್ ಕಂಪನಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ನೂತನ ಮಾಡೆಲ್‌ಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಬಹುತೇಕ ಕಂಪನಿಗಳು ಬಜೆಟ್‌ ಪ್ರೈಸ್‌ನಿಂದ, ದುಬಾರಿ ಬೆಲೆಯ ವರೆಗೂ ಭಿನ್ನ ಸ್ಮಾರ್ಟ್‌ ಟಿವಿಗಳು ಮಾಡೆಲ್‌ಗಳ ಆಯ್ಕೆಯನ್ನು ಹೊಂದಿವೆ. ಆದರೆ ಆಕರ್ಷಕ ಫೀಚರ್ಸ್‌ಗಳೊಂದಿಗೆ ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವ ಸ್ಮಾರ್ಟ್‌ ಟಿವಿಗಳು ಹೆಚ್ಚಾಗಿ ಗ್ರಾಹಕರು ಗಮನ ಸೆಳೆಯುತ್ತವೆ.

ಪ್ಲಾಟ್‌ಫಾರ್ಮ್

ಹೌದು, ಪ್ರಮುಖ ಕಂಪನಿಗಳು ಸಹ ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ ಟಿವಿ ಮಾಡೆಲ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ಪರಿಚಯಿಸಿವೆ. ಕೆಲವು ಸ್ಮಾರ್ಟ್‌ ಟಿವಿಗಳು ಆನ್‌ಲೈನ್‌ ಪ್ಲಾಟ್‌ಫಾರ್ಮ್ ನಲ್ಲಿ ಮಾತ್ರ ಲಭ್ಯವಿದ್ದು, ಇನ್ನು ಕೆಲವು ಮಾಡೆಲ್‌ಗಳು ಆಫ್‌ಲೈನ್‌ನಲ್ಲಿ ಸಿಗುತ್ತವೆ. ಬಜೆಟ್‌ ದರದ ಆರಂಭಿಕ 32 ಇಂಚಿನ ಗಾತ್ರದ ಸ್ಮಾರ್ಟ್‌ ಟಿವಿಗಳಿಗೆ ಡಿಮ್ಯಾಂಡ್ ಹೆಚ್ಚು. ಸುಮಾರು 20,000ರೂ. ಪ್ರೈಸ್‌ಟ್ಯಾಗ್‌ ಒಳಗೆ ಲಭ್ಯವಿರುವ 32 ಇಂಚಿನ ಐದು ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಥಾಮ್ಸನ್ 32PATH0011BL 32 ಇಂಚಿನ

ಥಾಮ್ಸನ್ 32PATH0011BL 32 ಇಂಚಿನ

ಥಾಮ್ಸನ್ ಸಂಸ್ಥೆಯ 32PATH0011BL ಮಾಡೆಲ್ ಸ್ಮಾರ್ಟ್‌ ಟಿವಿಯು 32 ಇಂಚಿನ ಸ್ಕ್ರೀನ್‌ ಹೊಂದಿದೆ.ಇನ್ನು ಈ ಟಿವಿಯು 1366x768 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ವಾಯಿಸ್‌ ಕಂಟ್ರೋಲ್ ಆಯ್ಕೆ ಪಡೆದಿದೆ. ಮೂರು ಹೆಚ್‌ಡಿಎಮ್‌ಐ ಪೋರ್ಟ್‌ ಆಯ್ಕೆಯನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯ ದರವು 12,999ರೂ. ಆಗಿದೆ.

ರಿಯಲ್‌ಮಿ LED ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ

ರಿಯಲ್‌ಮಿ LED ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ

ರಿಯಲ್‌ಮಿ ಸಂಸ್ಥೆಯು ಈ ಟಿವಿಯು ಆ ಪೈಕಿ 32 ಇಂಚಿನ ಗಾತ್ರವನ್ನು ಪಡೆದಿದೆ. ಹಾಗೆಯೇ 1366 × 768 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ ಟಿವಿ 9 ಸಾಫ್ಟ್‌ವೇರ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಟಿವಿಯು ಕ್ವಾಡ್-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್, ಡಾಲ್ಬಿ ಆಡಿಯೋ ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಗೂಗಲ್ ಅಸಿಸ್ಟೆಂಟ್, ಕ್ರೋಮ್‌ಕಾಸ್ಟ್ ಮತ್ತು ಪ್ಲೇ ಸ್ಟೋರ್‌ಗೆ ಬೆಂಬಲವನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿ ಬೆಲೆಯು 13,999ರೂ. ಆಗಿದೆ.

ಮಿ ಎಲ್‌ಇಡಿ ಟಿವಿ 4A Pro

ಮಿ ಎಲ್‌ಇಡಿ ಟಿವಿ 4A Pro

ಶಿಯೋಮಿ ಸಂಸ್ಥೆಯ ಮಿ ಎಲ್ಇಡಿ ಟಿವಿ 4 ಎ ಪ್ರೊ ಸ್ಮಾರ್ಟ್‌ಟಿವಿಯು 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಟಿವಿಯು 1GB RAM ಮತ್ತು 8GB ಆಂತರಿಕ ಸಂಗ್ರಹಣೆಯೊಂದಿಗೆ ಅಮ್ಲೊಜಿಕ್ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್ ಟಿವಿ 9 ಆಧಾರಿತ ಪ್ಯಾಚ್‌ವಾಲ್ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಟಿವಿಯು 20W ಆಡಿಯೊ ಔಟ್‌ಪುಟ್ ಸೌಲಭ್ಯ ಹೊಂದಿದೆ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯ ಬೆಲೆ 13,499 ರೂ. ಆಗಿದೆ.

ನೋಕಿಯಾ 32TAHDN 32 ಇಂಚಿನ ಸ್ಮಾರ್ಟ್‌ಟಿವಿ

ನೋಕಿಯಾ 32TAHDN 32 ಇಂಚಿನ ಸ್ಮಾರ್ಟ್‌ಟಿವಿ

ನೋಕಿಯಾ ಸಂಸ್ಥೆಯ ಈ ಮಾಡೆಲ್ ಟಿವಿಯು 32 ಇಂಚಿನ ಹೆಚ್‌ಡಿ ರೆಡಿ ಎಲ್ಇಡಿ ಆಗಿದೆ. ಈ ಟಿವಿಯು 1366x768 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ವಾಯಿಸ್‌ ಕಂಟ್ರೋಲ್ ಆಯ್ಕೆ, ವೈಫೈ, ಇಂಟರ್ನೆಟ್ ಸೌಲಭ್ಯ ಪಡೆದಿದೆ. ಎರಡು ಯುಎಸ್‌ಬಿ ಪೋರ್ಟ್‌, ಹೆಚ್‌ಡಿಎಮ್‌ಐ ಪೋರ್ಟ್‌ ಆಯ್ಕೆಯನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯ ದರವು 13,499 ರೂ. ಆಗಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ನ ಮಾಡೆಲ್‌ ನಂಬರ್ UA32TE40FAKXXL ಟಿವಿಯು 32 ಇಂಚಿನ ಎಲ್‌ಇಡಿ ಸ್ಮಾರ್ಟ್ ಟಿವಿಯು ಹೆಚ್‌ಡಿ ರೆಡಿ ಮಾದರಿಯ ಡಿಸ್‌ಪ್ಲೇ ಹೊಂದಿದೆ. ಈ ಟಿವಿಯು 1366x768 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 20W ಔಟ್‌ಪುಟ್‌ ಸೌಂಡ್‌ ವ್ಯವಸ್ಥೆ ಹೊಂದಿದೆ. ಓಟಿಟಿ ಆಪ್‌ಗಳ ಸೌಲಭ್ಯ ಸಹ ಒಳಗೊಂಡಿದೆ. ವಾಯಿಸ್‌ ಕಂಟ್ರೋಲ್ ಆಯ್ಕೆ, ವೈಫೈ, ಇಂಟರ್ನೆಟ್ ಸೌಲಭ್ಯ ಪಡೆದಿದೆ. ಯುಎಸ್‌ಬಿ ಪೋರ್ಟ್‌, ಹೆಚ್‌ಡಿಎಮ್‌ಐ ಪೋರ್ಟ್‌ ಆಯ್ಕೆಯನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯ ದರವು 15,499ರೂ. ಆಗಿದೆ.

Best Mobiles in India

English summary
Smart TV under 20000 is the right budget. feature-packed HD screens, good sound, connectivity options, etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+