Home
ಸುದ್ದಿಜಾಲ

Smart TVs: ವಿಶೇಷ ಫೀಚರ್ಸ್‌ ಆಯ್ಕೆಯ 10000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು!

ಸ್ಮಾರ್ಟ್‌ಟಿವಿಗಳನ್ನು (Smart TVs) ಇಂದು ಸಾಕಷ್ಟು ಮನೆಗಳಲ್ಲಿ ಕಾಣಬಹುದು. ಈ ಟಿವಿಗಳು ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಅನುಭವ ನೀಡುತ್ತಿದ್ದು, ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಸ್ಮಾರ್ಟ್‌ಟಿವಿಗಳು ಸಹ ಬಳಕೆದಾರರಿಗೆ ಉತ್ತಮ ಮನರಂಜನೆ ನೀಡುತ್ತವೆ.

ಹೌದು, ಸ್ಮಾರ್ಟ್‌ಟಿವಿ ವಿಭಾಗದಲ್ಲಿ ಸಾಕಷ್ಟು ಟಿವಿಗಳನ್ನು ಕಾಣಬಹುದಾಗಿದ್ದು, ಈ ಟಿವಿಗಳು ತಮ್ಮದೇ ಆದ ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ಉತ್ತಮ ಮನರಂಜನೆ ಪಡೆಯಲು ಅನುಕೂಲ ಮಾಡಿಕೊಡುತ್ತವೆ. ಈ ವೇಳೆ ನೀವು ಏನಾದರೂ ಹತ್ತು ಸಾವಿರ ಒಳಗೆ ಲಭ್ಯ ಇರುವ ಹಾಗೂ ವಿಶೇಷ ಫೀಚರ್ಸ್‌ ಇರುವ ಸ್ಮಾರ್ಟ್‌ಟಿವಿ ಸರ್ಚ್‌ ಮಾಡುತ್ತಿದ್ದರೆ ನಿಮಗೆ ಈ ಲೇಖನ ಉಪಯೋಗ ಆಗಲಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಸ್ಮಾರ್ಟ್‌ಟಿಗಳು ಈ ಬೆಲೆ ವಿಭಾಗದಲ್ಲಿ ಉತ್ತಮ ಎನಿಸಿವೆ ನೋಡೋಣ.

ವಿಶೇಷ ಫೀಚರ್ಸ್‌ ಆಯ್ಕೆಯ 10000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು!..

ಥಾಮ್ಸನ್ FA ಸರಣಿ 32RT1022 (81 cm) ಎಲ್‌ಸಿಡಿ ಹೆಚ್‌ಡಿ ರೆಡಿ ಟಿವಿ: ಈ ಸ್ಮಾರ್ಟ್‌ಟಿವಿಯನ್ನು 9,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಟಿವಿ 32 ಇಂಚಿನ ಎಲ್‌ಇಡಿ 60 Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, 1366x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರ ಜೊತೆಗೆ 2 ಯುಎಸ್‌ಬಿ ಪೋರ್ಟ್‌ಗಳು, 3 ಹೆಚ್‌ಡಿಎಮ್‌ಐ ಪೋರ್ಟ್‌ ಅನ್ನು ನೋಡಬಹುದಾಗಿದೆ.

ಇನ್ಫಿನಿಕ್ಸ್ 32Y1 3 (81 cm) ಎಲ್‌ಇಡಿ ಹೆಚ್‌ಡಿ ರೆಡಿ ಟಿವಿ: ಈ ಸ್ಮಾರ್ಟ್‌ಟಿವಿ ನಿಮಗೆ 8,999 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು 32 ಇಂಚಿನ ಎಲ್‌ಇಡಿ 60 Hz ರಿಫ್ರೆಶ್‌ ರೇಟ್‌ ಡಿಸ್‌ಪ್ಲೇ ಹೊಂದಿದ್ದು, 1366x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆಯಲಿದೆ. ಇದರ ಜೊತೆಗೆ ಈ ಟಿವಿ ಸಹ 2 ಯುಎಸ್‌ಬಿ ಪೋರ್ಟ್‌ಗಳು, 3 ಹೆಚ್‌ಡಿಎಮ್‌ಐ ಪೋರ್ಟ್‌ಗಳನ್ನು ಹೊಂದಿದೆ.

ವಿಶೇಷ ಫೀಚರ್ಸ್‌ ಆಯ್ಕೆಯ 10000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು!..

ಕೆವಿನ್ K56U912 (81 cm) ಎಲ್‌ಇಡಿ ಹೆಚ್‌ಡಿ ರೆಡಿ ಟಿವಿ: ಈ ಸ್ಮಾರ್ಟ್‌ಟಿವಿ ನಿಮಗೆ ಕೇವಲ 6,499 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು 32 ಇಂಚಿನ ಎಲ್‌ಇಡಿ 60 Hz ರಿಫ್ರೆಶ್‌ ರೇಟ್‌ ಬೆಂಬಲದ ಡಿಸ್‌ಪ್ಲೇ ಹೊಂದಿದ್ದು, 1366x768 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 2 ಯುಎಸ್‌ಬಿ ಪೋರ್ಟ್‌ಗಳು, 2 ಹೆಚ್‌ಡಿಎಮ್‌ಐ ಪೋರ್ಟ್‌ ಆಯ್ಕೆ ಪಡೆದಿದ್ದು, ಬಜೆಟ್‌ ಬೆಲೆಯಲ್ಲಿ ಉತ್ತಮ ಟಿವಿ ಎನಿಸಿಕೊಂಡಿದೆ.

ಮೊಟೊರೊಲಾ 32HDGDMBSXP (81 cm) ಎಲ್‌ಇಡಿ ಹೆಚ್‌ಡಿ ರೆಡಿ ಟಿವಿ: ಈ ಸ್ಮಾರ್ಟ್‌ಟಿವಿಯನ್ನು 9,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 32 ಇಂಚಿನ ಎಲ್‌ಇಡಿ 60 Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, 1366x768 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 2 ಯುಎಸ್‌ಬಿ ಪೋರ್ಟ್‌ಗಳು, 3 ಹೆಚ್‌ಡಿಎಮ್‌ಐ ಫೋರ್ಟ್‌ ಅನ್ನು ಕಾಣಬಹುದಾಗಿದೆ.

ವಿಶೇಷ ಫೀಚರ್ಸ್‌ ಆಯ್ಕೆಯ 10000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು!..

ಮಾರ್ಕ್ಯೂ 32HDCDQEE1B (81 cm) ಎಲ್‌ಇಡಿ ಹೆಚ್‌ಡಿ ರೆಡಿ ಟಿವಿ: ಈ ಸ್ಮಾರ್ಟ್‌ಟಿವಿ 7,799 ರೂ.ಗಳ ಆಫರ್ ಬೆಲೆ ಹೊಂದಿದ್ದು, ಇದು 32 ಇಂಚಿನ ಎಲ್‌ಇಡಿ 60 Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಪಡೆದಿದೆ. ಇದರೊಂದಿಗೆ 1366x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 2 ಯುಎಸ್‌ಬಿ ಪೋರ್ಟ್‌ಗಳು, 2 ಹೆಚ್‌ಡಿಎಮ್‌ಐ ಪೋರ್ಟ್‌ಗಳನ್ನು ಹೊಂದಿದ್ದು, ಉತ್ತಮ ಎನಿಸಿದೆ.

FOXSKY 32FSELS-PRO (81 cm) ಎಲ್‌ಇಡಿ ಹೆಚ್‌ಡಿ ರೆಡಿ ಟಿವಿ: ಈ ಸ್ಮಾರ್ಟ್‌ಟಿವಿ 7,999 ರೂ.ಗಳ ಬೆಲೆ ಹೊಂದಿದೆ. ಇದು 32 ಇಂಚಿನ ಎಲ್‌ಇಡಿ 60 Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, 1366x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರ ಜೊತೆಗೆ 2 ಯುಎಸ್‌ಬಿ ಪೋರ್ಟ್‌ಗಳು, 1 ಹೆಚ್‌ಡಿಎಮ್‌ಐ ಪೋರ್ಟ್ ಅನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಕಾಣಬಹುದಾಗಿದೆ.

Best Mobiles in India

English summary
A lot of TVs can be found in the Smart TV category, these TVs facilitate better entertainment with their own selection of special features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+