Home
ಸುದ್ದಿಜಾಲ

15,000ರೂ.ಗಳ ಆಸುಪಾಸಿನಲ್ಲಿ ಲಭ್ಯ ಈ ಅತ್ಯುತ್ತಮ ಫೋನ್‌ಗಳಿವು: ಲಿಸ್ಟ್‌ ಗಮನಿಸಿ!

ಸ್ಮಾರ್ಟ್‌ಫೋನ್‌ಗಳು ವಿವಿಧ ಫೀಚರ್ಸ್‌ ಆಯ್ಕೆ ಪಡೆದಿರುವಂತೆ ವಿವಿಧ ರೀತಿಯ ಬೆಲೆ ಹೊಂದಿರುತ್ತವೆ. ಕೆಲವು ಸ್ಮಾರ್ಟ್‌ಫೋನ್‌ಗಳು ಕೈಗೆಟಕುವ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಸಹ ಹೊಂದಿದ್ದು, ಈ ಮೂಲಕ ಅಗತ್ಯಕ್ಕೆ ತಕ್ಕಂತೆ ಗ್ರಾಹಕರು ಮಾರುಕಟ್ಟೆಯಲ್ಲಿ ಈ ಫೋನ್‌ಗಳನ್ನು ಖರೀದಿ ಮಾಡಬಹುದು. ಅದರಲ್ಲೂ ನೀವೇನಾದರೂ 15,000ರೂ.ಗಳ ಒಳಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದರೆ ಇಲ್ಲಿದೆ ವಿವರ.

ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ವಿವಿಧ ರೀತಿಯ ಫೀಚರ್ಸ್‌ನೊಂದಿಗೆ ಬಳಕೆದಾರರಿಗೆ ಹಲವಾರು ರೀತಿಯ ಸೌಲಭ್ಯ ಕಲ್ಪಿಸಿಕೊಟ್ಟಿವೆ. ಈ ನಡುವೆ ಸ್ಯಾಮ್‌ಸಂಗ್‌, ಪೊಕೊ, ಐಕ್ಯೂ ಸೇರಿದಂತೆ ಹಲವು ಕಂಪೆನಿಯ ಫೋನ್‌ಗಳು ಈ ಬೆಲೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಅದರಂತೆ ನೀವೇನಾದರೂ 15,000ರೂ. ಒಳಗೆ ಯಾವ ಫೋನ್‌ ಖರೀದಿ ಮಾಡಬೇಕು ಎಂಬ ಆಲೋಚನೆಯಲ್ಲಿದ್ದರೆ ಇಲ್ಲಿದೆ ನೋಡಿ ಲಿಸ್ಟ್‌.

15,000ರೂ.ಗಳ ಆಸುಪಾಸಿನಲ್ಲಿ ಲಭ್ಯ ಈ ಅತ್ಯುತ್ತಮ ಫೋನ್‌ಗಳಿವು: ಲಿಸ್ಟ್‌ ಗಮನಿಸಿ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G: ಈ ವಿಶೇಷ ಸ್ಮಾರ್ಟ್‌ಫೋನ್‌ 15,000ರೂ. ಗಳ ಬೆಲೆ ಹೊಂದಿದ್ದು, ಇದು ಈ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಫೋನ್‌ ಆಗಿದೆ. ಹಾಗೆಯೇ 90Hz ರಿಫ್ರೆಶ್‌ ಆಯ್ಕೆಯ ಎಲ್‌ಸಿಡಿ ಡಿಸ್‌ಪ್ಲೇ FHD+ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದ್ದು, ಎಕ್ಸಿನೋಸ್ 1330 SoC ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಇದು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸಿದ ಆಂತರಿಕ ಚಿಪ್ ಆಗಿದೆ. ಇದರೊಂದಿಗೆ 6,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಪೊಕೊ M4 5G: ಈ ಸ್ಮಾರ್ಟ್‌ಫೋನ್‌ ಸಹ 15,000ರೂ. ಗಳ ಆಸುಪಾಸಿನಲ್ಲಿ ಲಭ್ಯವಾಗಲಿದ್ದು, ಈ ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ IPS ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ನಿಂದ ಕಾರ್ಯನಿಹಿಸಲಿದ್ದು, ಫೋಟೋಗಳು ಮತ್ತು ವಿಡಿಯೋ ಸೆರೆಹಿಡಿಯಲು 50MP ಸೆನ್ಸರ್‌ ಆಯ್ಕೆಯ ಜೊತೆಗೆ ಟ್ರಿಪಲ್-ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

15,000ರೂ.ಗಳ ಆಸುಪಾಸಿನಲ್ಲಿ ಲಭ್ಯ ಈ ಅತ್ಯುತ್ತಮ ಫೋನ್‌ಗಳಿವು: ಲಿಸ್ಟ್‌ ಗಮನಿಸಿ!

ಐಕ್ಯೂ Z6 ಲೈಟ್ 5G: ಈ ಸ್ಮಾರ್ಟ್‌ಫೋನ್‌ ಸಹ 15,000 ರೂ.ಒಳಗೆ ಲಭ್ಯ ಇರುವ ಅತ್ಯುತ್ತಮ ಫೋನ್‌ಗಳ ಸಾಲಿನಲ್ಲಿದೆ. ಇದು 120Hz ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಸ್ನಾಪ್‌ಡ್ರಾಗನ್ 4 ಜನ್ 1 SoC ನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 50MP ಸೆನ್ಸರ್‌ನ ಪ್ರಮುಖ ಕ್ಯಾಮೆರಾದೊಂದಿಗೆ ಡ್ಯುಯಲ್-ರಿಯರ್ ಕ್ಯಾಮೆರಾ ರಚನೆ ಇದರಲ್ಲಿದ್ದು,
5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 18W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

ಮೊಟೊ G13: ಈ ಫೋನ್ 15,000ರೂ.ಗಳ ಒಳಗೆ ಲಭ್ಯವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಹೊಂದಿದೆ. ಅದರಂತೆ ಈ ಫೋನ್‌ 6.5 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೀಡಿಯಾಟೆಕ್ MT6769Z ಹಿಲಿಯೊ G85 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50MP ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 20W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

15,000ರೂ.ಗಳ ಆಸುಪಾಸಿನಲ್ಲಿ ಲಭ್ಯ ಈ ಅತ್ಯುತ್ತಮ ಫೋನ್‌ಗಳಿವು: ಲಿಸ್ಟ್‌ ಗಮನಿಸಿ!

ರಿಯಲ್‌ಮಿ 10: ಈ ಸ್ಮಾರ್ಟ್‌ಫೋನ್‌ ಸಹ 15,000ರೂ. ಗಳ ಆಸುಪಾಸಿನಲ್ಲಿ ಲಭ್ಯವಾಗಲಿದೆ. ಇದು ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೀಡಿಯಾಟೆಕ್ MT8781 ಹಿಲಿಯೋ G99 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, 50 MP ಪ್ರಮುಖ ಕ್ಯಾಮೆರಾ ಆಯ್ಕೆಯೊಂದಿಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 33W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

Best Mobiles in India

English summary
If you are like to buy smartphone under Rs 15,000 here is the list. in the list Samsung, poco, Realme and many companies phone get huge discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+