Home
ಸುದ್ದಿಜಾಲ

Best smartphone: ಭಾರತದಲ್ಲಿ 12 ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು! ಭಾರೀ ಬೇಡಿಕೆ..

ಸ್ಮಾರ್ಟ್‌ಫೋನ್‌ಗಳ (smartphone) ವಿಭಾಗದಲ್ಲಿ ಭಾರತದಲ್ಲಿ ಅತ್ಯುತ್ತಮವಾದ ಬಜೆಟ್‌ ಬೆಲೆಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಜೆಟ್‌ ಬೆಲೆಯ ಫೋನ್‌ಗಳಲ್ಲೂ ಸಹ ಪ್ರೀಮಿಯಂ ಅನುಭವವನ್ನು ಪಡೆಯಬಹುದಾಗಿದೆ.

ಹೌದು, ಹೆಚ್ಚಾಗುತ್ತಿರುವ ಸ್ಪರ್ಧೆ ನಡುವೆ ಬ್ರ್ಯಾಂಡ್‌ಗಳು ಭಿನ್ನ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಈ ವಿಭಾಗದಲ್ಲಿ ಬಜೆಟ್‌ ಬೆಲೆಯ ಫೋನ್‌ಗಳಿಗೆ ಬಹು ಬೇಡಿಕೆ ಇದ್ದು, ನೀವು ಏನಾದರೂ 12,000 ರೂ.ಒಳಗೆ ಲಭ್ಯ ಇರುವ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಮುಂದಾಗಿದ್ರೆ ಅದರಲ್ಲೂ ಆಫರ್ ಬೆಲೆಗೆ ಲಭ್ಯ ಇರುವ ಅಗ್ಗದ ದರದ ಫೋನ್‌ ಬೇಕು ಎಂದರೆ ಇಲ್ಲಿದೆ ನೋಡಿ ಲಿಸ್ಟ್‌.

ಭಾರತದಲ್ಲಿ 12 ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಶಿಯೋಮಿ ರೆಡ್ಮಿ 12 5G: ಈ ಸ್ಮಾರ್ಟ್‌ಫೋನ್‌ (Xiaomi Redmi 12 5G) ಅನ್ನು ನೀವು 11,999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಬಲ ಹಾಗೂ 4 GB RAM ಆಯ್ಕೆ ಮತ್ತು 6.79 ಇಂಚಿನ 396 PPI, IPS LCD ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ 50 MP + 2 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾವನ್ನು ಈ ಫೋನ್‌ನಲ್ಲಿ ನೋಡಬಹುದಾಗಿದೆ.

ಮೊಟೊ G34 : ಈ ಸ್ಮಾರ್ಟ್‌ಫೋನ್‌ (Moto G34) ನಿಮಗೆ 12,099 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ಸಾಮರ್ಥ್ಯ ಹಾಗೂ 4 GB RAM ಆಯ್ಕೆ ಪಡೆದಿದ್ದು, 6.5 ಇಂಚಿನ 270 PPI, IPS LCD ಡಿಸ್‌ಪ್ಲೇ ಮತ್ತು 120 Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ 50 MP + 2 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಭಾರತದಲ್ಲಿ 12 ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಪೊಕೊ M6 ಪ್ರೊ 5G: ಈ ಫೋನ್‌ (Poco M6 Pro 5G) ಅನ್‌ಲೈನ್‌ನಲ್ಲಿ 11,299 ರೂ.ಗಳ ಬೆಲೆಗೆ ಲಭ್ಯ ಇದೆ. ಅದರಂತೆ ಈ ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM ನೊಂದಿಗೆ ಉತ್ತಮ ಎನಿಸಿದೆ. ಇದರ ಜೊತೆಗೆ 6.79 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 90 Hz ರಿಫ್ರೆಶ್ ರೇಟ್‌ ಬೆಂಬಲ ಪಡೆದಿದೆ. ಇದರೊಂದಿಗೆ 50 MP + 2 MP ಡ್ಯುಯಲ್ ರಿಯರ್‌ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾ ಹೊಂದಿದೆ.

ಶಿಯೋಮಿ ರೆಡ್ಮಿ 13C 5G: ಈ ಫೋನ್‌ (Xiaomi Redmi 13C 5G) ಅನ್ನು ಕೇವಲ 10,980 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM ಬೆಂಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಇದರೊಂದಿಗೆ 6.74 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 90 Hz ರಿಫ್ರೆಶ್ ರೇಟ್‌ ಪಡೆದಿದೆ. ಹಾಗೆಯೇ 50 MP + 0.08 MP ಡ್ಯುಯಲ್ ರಿಯರ್‌ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಭಾರತದಲ್ಲಿ 12 ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಇನ್ಫಿನಿಕ್ಸ್ ನೋಟ್ 11: ಈ ಸ್ಮಾರ್ಟ್‌ಫೋನ್‌ (Infinix Note 11) ಅನ್ನು ನೀವು 12,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಮೀಡಿಯಾ ಟೆಕ್ ಹಿಲಿಯೊ G88 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 4 GB RAM ಹೊಂದಿದೆ. ಅಲ್ಲದೆ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಮತ್ತು 50 MP + 2 MP ನೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಭಾರತದಲ್ಲಿ 12 ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ರಿಯಲ್‌ಮಿ 50A ಪ್ರೈಮ್ : ಈ ಫೋನ್ (Realme 50A Prime) ಕೇವಲ 7,999 ರೂ. ಗಳ ಬೆಲೆಯಲ್ಲಿ ಲಭ್ಯ ಇದೆ. ಈ ಫೋನ್ ಯುನಿಸೊಕ್ T612 ಪ್ರೊಸೆಸರ್‌ ಬಲ ಪಡೆದಿದ್ದು, 4 GB RAM ನೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ 6.6 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ 50 MP + 2 MP + 0.3 MP ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಹಾಗೂ 8 MP ಸೆಲ್ಫಿ ಕ್ಯಾಮರಾ ಹೊಂದಿದೆ.

Best Mobiles in India

English summary
best smartphone are always in high demand. According, here are the details of the best phones available under 12 thousand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+