15,000ರೂ. ಒಳಗೆ ಲಭ್ಯವಿರುವ ಉತ್ತಮ ಕಾರ್ಯಕ್ಷಮತೆಯ ಫೋನ್‌ಗಳಿವು!
ಸ್ಮಾರ್ಟ್‌ಫೋನ್‌ಗಳು ಇಂದು ನಮ್ಮೆಲ್ಲರ ಅಗತ್ಯ ಡಿವೈಸ್‌ಗಳಾಗಿವೆ. ಅದರಂತೆ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ವಿವಿಧ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ನಡುವೆ ನೀವೇನಾದರೂ ಕೈಗೆಟಕುವ ದರದಲ್ಲಿ ಫೋನ್ ಖರೀದಿ ಮಾಡಬೇಕು ಎಂದುಕೊಂಡರೆ ಇಲ್ಲಿದೆ ಲಿಸ್ಟ್.
ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ವಿವಿಧ ಫೀಚರ್ಸ್ ಇರುವ ಫೋನ್‌ಗಳಿದ್ದು, ಅದರಲ್ಲಿ ನೀವು 15,000ರೂ. ಗಳ ಒಳಗೆ ಲಭ್ಯವಾಗುವ ಹಾಗೂ ಅತ್ಯುತ್ತಮ ಫೀಚರ್ಸ್ ಇರುವ ಫೋನ್‌ಗಳನ್ನು ಖರೀದಿ ಮಾಡಬೇಕು ಎಂದುಕೊಂಡರೆ ಐಕ್ಯೂ, ರೆಡ್ಮಿ, ಸ್ಯಾಮ್‌ಸಂಗ್ ಕಂಪನಿಯ ಈ ಫೋನ್‌ಗಳನ್ನು ಖರೀದಿ ಮಾಡಬಹುದು. ಹಾಗಿದ್ರೆ, ಈ ಫೋನ್‌ಗಳ ಪ್ರಮುಖ ಫೀಚರ್ಸ್ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಕ್ಯೂ Z6 ಲೈಟ್ 5G
ಐಕ್ಯೂ Z6 ಲೈಟ್ 5G ವಿಶ್ವದ ಮೊದಲ ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್ ಹೊಂದಿರುವ ಫೋನ್ ಆಗಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಆಯ್ಕೆ ಇದರಲ್ಲಿದ್ದು, 50MP ಪ್ರಮುಖ ಕ್ಯಾಮೆರಾ ರಚನೆ ಪಡೆದಿದೆ. ಇದರ ಜೊತೆಗೆ ಫೋನ್ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿರುವುದು ಮತ್ತಷ್ಟು ವಿಶೇಷ. ಈ ಫೋನ್ ಅನ್ನು ನೀವು 12,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ರೆಡ್ಮಿ 11 ಪ್ರೈಮ್ 5G
ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಹೊಂದಿದ್ದು, ಇದು ಡೈಮೆನ್ಸಿಟಿ 700 SoC ಪ್ರೊಸೆಸರ್‌ನ ಶಕ್ತಿ ಪಡೆದುಕೊಂಡಿದೆ. ಇನ್ನುಳಿದಂತೆ ಕನೆಕ್ಟಿವಿಟಿ ಆಯ್ಕೆಯಲ್ಲಿ ಡ್ಯುಯಲ್ 5G ಸೌಲಭ್ಯ ಹೊಂದಿದ್ದು,5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ 22.5W ವೇಗದ ಚಾರ್ಜಿಂಗ್‌ಗೆ ಇದು ಬೆಂಬಲ ನೀಡಲಿದೆ. ಈ ಫೋನ್ ಅನ್ನು ನೀವು 15,000 ರೂ. ಗಳ ಒಳಗೆ ಕೊಂಡುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ. ಇದರ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಫೋನ್ ಹೆಚ್ಚು ಆಕರ್ಷಕವಾಗಿದ್ದು, ಇದು 6.6 ಇಂಚಿನ TFT ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 750G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಇದ್ದು, 50MP + 8MP + 2MP ಸೆನ್ಸರ್ ಹೊಂದಿದೆ. ಜೊತೆಗೆ 25W ವೇಗದ ಚಾರ್ಜಿಂಗ್ ಅಯ್ಕೆಯೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.
ಒಪ್ಪೋ A74 5G
ಒಪ್ಪೋ A74 5G ಸ್ಮಾರ್ಟ್‌ಫೋನ್ 6.49 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 480 ಪ್ರೊಸೆಸರ್‌ನ ಶಕ್ತಿ ಪಡೆದುಕೊಂಡಿದೆ. ಹಾಗೆಯೇ 48MP + 2MP + 2MP ಕ್ಯಾಮೆರಾ ರಚನೆ ಹೊಂದಿದ್ದು, ಅದರಂತೆ 8MP ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಇನ್ನುಳಿದಂತೆ 5000 mAh ಸಾಮರ್ಥ್ಯದ ಬ್ಯಾಟರಿ ಮೂಲಕ ಪ್ಯಾಕ್ ಆಗಿರುವ ಈ ಫೋನ್ ಅನ್ನು ನೀವು 15,000 ರೂ. ಗಳ ಒಳಗೆ ಖರೀದಿ ಮಾಡಬಹುದಾಗಿದೆ.

ರಿಯಲ್‌ಮಿ 10
ರಿಯಲ್‌ಮಿ 10 ಸ್ಮಾರ್ಟ್‌ಫೋನ್ ಕೈಗೆಟಕುವ ದರದಲ್ಲಿ ಲಭ್ಯವಾಗುವ ಮತ್ತೊಂದು ಫೋನ್ ಆಗಿದ್ದು, ಈ ಫೋನ್ FHD+ ರೆಸಲ್ಯೂಶನ್ ಇರುವ ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಹಾಗೆಯೇ ಮೀಡಿಯಾ ಟೆಕ್ ಹಿಲಿಯೊ G99 SoC ಪ್ರೊಸೆಸರ್ ಮೂಲಕ ಕೆಲಸ ಮಾಡಲಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ 50MP + 2MP ಕ್ಯಾಮೆರಾ ಸೆನ್ಸರ್ ಇದ್ದು, ಸೆಲ್ಫಿಗಾಗಿ 16MP ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಉಳಿದಂತೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.


Click it and Unblock the Notifications








