Smartphone: ಬಿಗ್ ಸ್ಟೋರೇಜ್ ಆಯ್ಕೆ ಇರುವ ಅತ್ಯುತ್ತಮ ಫೋನ್‌ಗಳು, ಅದೂ ಸಹ 20,000 ರೂ.ಒಳಗೆ...
ಹೊಸ ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿ ಮಾಡುವಾಗ ಯಾರೇ ಆದರೂ ವಿವಿಧ ಮಾನದಂಡಗಳ ಆಧಾರದ ಮೇಲೆ ಖರೀದಿ ಮಾಡಲು ಮುಂದಾಗುತ್ತಾರೆ. ಅದರಲ್ಲಿ ಬ್ಯಾಟರಿ, ಕ್ಯಾಮೆರಾ, ಪ್ರೊಸೆಸರ್ ಸಹ ಪ್ರಮುಖವಾಗಿದೆ. ಇದರೊಂದಿಗೆ ಸ್ಟೋರೇಜ್ ವಿಷಯಕ್ಕೂ ಸಹ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಹೌದು, ಹೆಚ್ಚಿನ ಸ್ಟೋರೇಜ್ ಆಯ್ಕೆ ಇರುವ ಫೋನ್‌ಗಳು ಅತ್ಯುತ್ತಮವಾಗಿ ಕೆಲಸ ಮಾಡುವುದರಿಂದ ಈ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇರುತ್ತದೆ. ಅದರಂತೆ ನೀವು ಈಗ ಏನಾದರೂ ವಿಸ್ತರಿಸಬಹುದಾದ ಸ್ಟೋರೇಜ್ ಆಯ್ಕೆ ಇರುವ ಇಪ್ಪತ್ತು ಸಾವಿರದ ಒಳಗಿನ ಫೋನ್‌ಗಾಗಿ ಸರ್ಚ್ ಮಾಡುತ್ತಿದ್ದರೆ ಮೊಟೊರೊಲಾ, ಸ್ಯಾಮ್‌ಸಂಗ್ ಸೇರಿದಂತೆ ಅನೇಕ ಬ್ರ್ಯಾಂಡ್‌ನ ಫೋನ್‌ಗಳನ್ನು ಕಾಣಬಹುದು. ಹಾಗಿದ್ರೆ, ಬನ್ನಿ ಈ ವಿಭಾಗದಲ್ಲಿ ಇರುವ ಪ್ರಮುಖ ಫೋನ್‌ಗಳು ಯಾವುವು ಅನ್ನೋದನ್ನು ನೋಡೋಣ.

ಐಕ್ಯೂ Z9X: ಈ ಸ್ಮಾರ್ಟ್‌ಫೋನ್ (IQOO Z9X) ನಿಮಗೆ 15,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ ಇದೆ. ಇದು ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್ ನಲ್ಲಿ ರನ್ ಆಗಲಿದೆ. ಜೊತೆಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್ ಅನ್ನು ಹೊಂದಿದ್ದು, 6.72 ಇಂಚಿನ 120Hz ಎಲ್‌ಸಿಡಿ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಪ್ಯಾಕ್ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F15: ಈ ಸ್ಮಾರ್ಟ್‌ಫೋನ್ (Samsung Galaxy F15) ಸಹ ನಿಮಗೆ 20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇದು 6.6 ಇಂಚಿನ 90Hz ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದಿದ್ದು, ಆಂಡ್ರಾಯ್ಡ್ 14 ಆಧಾರಿತ ಒನ್‌ಯುಐ 6 ನಲ್ಲಿ ರನ್ ಆಗಲಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5 ಮೆಗಾಪಿಕ್ಸೆಲ್‌ಅಲ್ಟ್ರಾವೈಡ್ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದ್ದು, 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯ ಫೋನ್ 12,999 ರೂ.ಗಳ ಬೆಲೆ ಹೊಂದಿದೆ.

ರಿಯಲ್‌ಮಿ P1 : ಈ ಸ್ಮಾರ್ಟ್‌ಫೋನ್‌ನ (Realme P1) 8GB RAM ಮತ್ತು 256GB ವೇರಿಯಂಟ್‌ಗೆ 18,789 ರೂ.ಗಳ ಬೆಲೆ ಇದೆ. ಇದು 6.67 ಇಂಚಿನ 120Hz ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 1,200 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ UI 5.0 ನಲ್ಲಿ ಆಂಡ್ರಾಯ್ಡ್ 14 ಅನ್ನು ಆಧರಿಸಿದ ಓಎಸ್ ಅನ್ನು ರನ್ ಮಾಡಲಿದ್ದು, ಯೋಗ್ಯವಾದ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಕಾಣಬಹುದಾಗಿದೆ.
ಮೊಟೊರೊಲಾ G34: ಈ ಸ್ಮಾರ್ಟ್‌ಫೋನ್ (Motorola G34) ಅನ್ನು ನೀವು 11,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನಿಂದ ನಡೆಸಲ್ಪಡುವ ಬಜೆಟ್ ಫೋನ್ ಆಗಿದೆ. ಹಾಗೆಯೇ 6.5 ಇಂಚಿನ 120Hz ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಆಂಡ್ರಾಯ್ಡ್ 14 ಅನ್ನು ಆಧರಿಸಿ ಮೈಯುಎಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಹಾನರ್ X9B: ಈ ಫೋನ್ (Honor X9B) ನಿಗದಿತ ಬೆಲೆಗಿಂತ ಸ್ವಲ್ಪ ಜಾಸ್ತಿ ಇದೆ ಅಂದರೆ 22,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್‌ಸೆಟ್ ಹೊಂದಿದ್ದು, 6.78 ಇಂಚಿನ 120Hz ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 1,200 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಅನ್ನು ಇದರಲ್ಲಿ ಕಾಣಬಹುದು. ಅಲ್ಲದೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಈ ಫೋನ್‌ನಲ್ಲಿದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಕಾಣಬಹುದಾಗಿದೆ.


Click it and Unblock the Notifications








