Home
ಸುದ್ದಿಜಾಲ

ಸೆಲ್ಫಿ ಪ್ರಿಯರಿಗೆ ಈ ಹೊಸ ಸ್ಮಾರ್ಟ್‌ಫೋನ್‌ಗಳು ಬೆಸ್ಟ್‌... ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ಗಳು ಇಂದು ಬಳಕೆದಾರರಿಗೆ ವಿವಿಧ ಪ್ರಯೋಜನಗಳನ್ನು ನೀಡುವ ನೆಚ್ಚಿನ ಡಿವೈಸ್‌ ಆಗಿ ಗುರುತಿಸಿಕೊಂಡಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಬಳಕೆದಾರರು ತಮ್ಮ ಇಚ್ಚೆಗೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ ಖರೀದಿ ಮಾಡುತ್ತಾರೆ. ಈ ಇಚ್ಚೆಯಲ್ಲಿ ಸೆಲ್ಫಿ ಸಹ ಪ್ರಮುಖವಾದುದು.

ಹೌದು, ಭಾರತದಲ್ಲಿ ಬಹುಪಾಲು ಮಂದಿ ಹಲವಾರು ಮಾನದಂಡಗಳ ಆಧಾರದಲ್ಲಿ ಹೊಸ ಫೋನ್‌ ಖರೀದಿ ಮಾಡುತ್ತಾರೆ. ಈ ಮಾನದಂಡದಲ್ಲಿ ಪ್ರಮುಖವಾದುದು ಹಾಗೂ ಹೆಚ್ಚಿನ ಜನರಿಗೆ ಇಷ್ಟವಾಗುವುದು ಏನೆಂದರೆ ಸೆಲ್ಫಿ ಕ್ಯಾಮೆರಾ ಆಯ್ಕೆ. ನೀವೇನಾದರೂ ಸೆಲ್ಫಿ ಪ್ರಿಯರಾಗಿದ್ದು, ನೀವು ಸೆರೆಹಿಡಿಯುವ ಫೋಟೋದಲ್ಲಿ ನೀವು ಅದ್ಭುತವಾಗಿ ಕಾಣಿಸಿಕೊಳ್ಳಬೇಕು ಎಂದರೆ ಇತ್ತೀಚಿಗೆ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್‌ಗಳು ಬೆಸ್ಟ್‌ ಆಯ್ಕೆ ಆಗಿವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳು ಉತ್ತಮ ಸೆಲ್ಫಿ ಫೋಟೋಗೆ ಸಹಕಾರಿ?, ಬೆಲೆ ಎಷ್ಟು ಎಂಬುದನ್ನು ನೋಡೋಣ.

ಸೆಲ್ಫಿ ಪ್ರಿಯರಿಗೆ ಈ ಹೊಸ ಸ್ಮಾರ್ಟ್‌ಫೋನ್‌ಗಳು ಬೆಸ್ಟ್‌... ಬೆಲೆ ಎಷ್ಟು?

ಇನ್ಫಿನಿಕ್ಸ್ ಜೀರೋ 20 : ಈ ಸ್ಮಾರ್ಟ್‌ಫೋನ್‌ ನಿಮಗೆ 15,499ರೂ.ಗಳ ಬೆಲೆಗೆ ಲಭ್ಯ ಇದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ ಈ ಫೋನ್‌ ಗಳು ಅತ್ಯುತ್ತಮವಾಗಿವೆ. ಅದರಂತೆ ಈ ಫೋನ್ 108 MP + 13 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾದೊಂದಿಗೆ 60 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G99 ಪ್ರೊಸೆಸರ್‌ ಬಲ ಹೊಂದಿದ್ದು, 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆಯೊಂದಿಗೆ 90 Hz ರಿಫ್ರೆಶ್ ರೇಟ್‌ ಪಡೆದಿದೆ.

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ 5G : ಈ ಫೋನ್‌ ಭಾರತದಲ್ಲಿ 49,999ರೂ.ಗಳಿಗೆ ಲಭ್ಯ ಇದೆ. ಇದು 200 MP + 50 MP + 12 MP ಟ್ರಿಪಲ್ ರಿಯರ್‌ ಕ್ಯಾಮೆರಾದೊಂದಿಗೆ 60 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಸ್ನಾಪ್‌ಡ್ರಾಗನ್ 8 ಪ್ಲಸ್ ಜನ್ 1 ಪ್ರೊಸೆಸರ್ ಬಲ ಹಾಗ 12 GB RAM ಆಯ್ಕೆಯೊಂದಿಗೆ ಉತ್ತಮ ಕಾರ್ಯಕ್ಷಮತೆ ಹೊಂದಿದೆ.

ಮೊಟೊರೊಲಾ ಎಡ್ಜ್‌ 30 ಪ್ರೊ 5G: ಈ ಸ್ಮಾರ್ಟ್‌ಫೋನ್‌ 44,990ರೂ.ಗಳ ಬೆಲೆ ಹೊಂದಿದ್ದು, ಬ್ಯಾಂಕ್‌ ಹಾಗೂ ವಿನಿಮಯ ಆಫರ್‌ ಮೂಲಕ ಕಡಿಮೆ ದರಕ್ಕೆ ಖರೀದಿ ಮಾಡಬಹುದು. ಇದು 50 MP + 50 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆಯೊಂದಿಗೆ 60 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಫೋನ್ ಸಹ ಸ್ನಾಪ್‌ಡ್ರಾಗನ್ 8 ಜನ್ 1 ಪ್ರೊಸೆಸರ್‌ ಬಲ ದೊಂದಿಗೆ 8 GB RAM ಸಾಮರ್ಥ್ಯ ಪಡೆದಿದೆ.

ವಿವೋ V27 : ಈ ವಿವೋ ಫೋನ್‌ ನಿಮಗೆ 36,999ರೂ.ಗಳಿಗೆ ಲಭ್ಯ ಇದೆ. ಬೆಲೆಗೆ ತಕ್ಕಂತ ಕ್ಯಾಮೆರಾ ಆಯ್ಕೆಯನ್ನು ಇದು ಹೊಂದಿದ್ದು, ಅದರಲ್ಲಿ 50 MP + 8 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ 50 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆಯುವ ಮೂಲಕ ವಿಶೇಷ ಎನಿಸಿದೆ. ಉಳಿದಂತೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, 12 GB RAM ಆಯ್ಕೆ ಪಡೆದಿದೆ.

ಸೆಲ್ಫಿ ಪ್ರಿಯರಿಗೆ ಈ ಹೊಸ ಸ್ಮಾರ್ಟ್‌ಫೋನ್‌ಗಳು ಬೆಸ್ಟ್‌... ಬೆಲೆ ಎಷ್ಟು?

ವಿವೋ V27 ಪ್ರೊ: ವಿವೋ V27 ಸರಣಿಯ ವಿವೋ V27 ಪ್ರೊ ಸ್ಮಾರ್ಟ್‌ಫೋನ್‌ ಸಹ ನಿಮಗೆ 39,999ರೂ.ಗಳ ಬೆಲೆಯಲ್ಲಿ ಲಭ್ಯ ಇದ್ದು, ಇದರಲ್ಲಿ 50 MP + 8 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಮತ್ತು 50 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರೊಂದಿಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್‌ ಮತ್ತು 8 GB RAM ಸ್ಟೋರೇಜ್‌ನೊಂದಿಗೆ ಕಾಣಿಸಿಕೊಂಡಿದ್ದು, 4600 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

Best Mobiles in India

English summary
If you are a selfie lover and want to look amazing in the photo you capture then these recently launched smartphones are the best choice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+