Home
ಸುದ್ದಿಜಾಲ

ವಿದ್ಯಾರ್ಥಿಗಳಿಗೆ ಈ ಫೋನ್‌ಗಳು ಬೆಸ್ಟ್‌: ಆಫರ್‌ ಬೆಲೆಯಲ್ಲಿ ಲಭ್ಯ!

ಕೊರೊನಾ ನಂತರದ ಕಾಲದಲ್ಲಿ ಇಂದು ವಿದ್ಯಾರ್ಥಿಗಳಿಗೆ ಮೊಬೈಲ್‌ ತುಂಬಾ ಅವಶ್ಯಕವಾದ ಡಿವೈಸ್‌ ಆಗಿ ಮಾರ್ಪಟ್ಟಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಮೊಬೈಲ್‌ ಕೊಡಬೇಡಿ ಎನ್ನುತ್ತಿದ್ದ ಕಾಲ ಮರೆಯಾಗಿ ಮೊಬೈಲ್‌ ಇಲ್ಲದಿದ್ದರೆ ವಿದ್ಯಾರ್ಥಿಗಳು ಓದಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬೆಳವಣಿಗೆ ನಡುವೆ ವಿದ್ಯಾರ್ಥಿಗಳಿಗೆ ಈ ಸ್ಮಾರ್ಟ್‌ಫೋನ್‌ಗಳು ಉತ್ತಮ ಆಯ್ಕೆ ಆಗಿವೆ.

ಹೌದು, ಸ್ಮಾರ್ಟ್‌ಫೋನ್‌ ಬಳಕೆ ಈಗ ಸಾಕಷ್ಟು ವಲಯದಲ್ಲಿ ವಿಸ್ತರಣೆ ಆಗಿದ್ದು, ಈ ಮೂಲಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೀವನಕ್ಕೂ ಬಹಳ ಪ್ರಯೋಜನಕಾರಿ.ಆದರೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ದುಬಾರಿ ಫೋನ್‌ ಖರೀದಿ ಮಾಡಲು ಖಂಡಿತಾ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮಿಡ್‌ರೇಂಜ್ ಫೋನ್‌ಗಳ ವಿವರವನ್ನು ನೀಡಲಾಗಿದ್ದು, ಈ ಫೋನ್‌ಗಳ ಆಫರ್‌ಬೆಲೆಯ ಮಾಹಿತಿಯನ್ನೂ ಸಹ ವಿವರಿಸಿದ್ದೇವೆ ಓದಿರಿ.

ವಿದ್ಯಾರ್ಥಿಗಳಿಗೆ ಈ ಫೋನ್‌ಗಳು ಬೆಸ್ಟ್‌: ಆಫರ್‌ ಬೆಲೆಯಲ್ಲಿ ಲಭ್ಯ!

ಸ್ಯಾಮ್‌ಸಂಗ್ ಗ್ಯಾಲಕ್ಸಿ M13: ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್‌ ಆಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಫೋನ್‌ ಸಹ ಒಂದಾಗಿದ್ದು, ಇದು 6.6 ಇಂಚಿನ FHD+LCD ಡಿಸ್‌ಪ್ಲೇ ಹೊಂದಿದ್ದು, ಪ್ರಬಲವಾಗಿರುವ ಆಕ್ಟಾ ಕೋರ್ ಪ್ರೊಸೆಸರ್ ನೊಂದಿಗೆ 50MP+5MP+2MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರ ಮೂಲ ದರ 14,999ರೂ.ಗಳಾಗಿದ್ದು, ನೀವು 10,999ರೂ.ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದು.

ರೆಡ್ಮಿ ನೋಟ್11: ಈ ಫೋನ್ 6.43 ಇಂಚಿನ FHD+ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಪಡೆದಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ. ಇನ್ನು 50MP ಕ್ವಾಡ್ ರಿಯರ್ ಕ್ಯಾಮೆರಾದೊಂದಿಗೆ 13MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದನ್ನು 12,999ರೂ.ಗಳಿಗೆ ಖರೀದಿ ಮಾಡಬಹುದು.ಇದರ ಮೂಲ ಬೆಲೆ 17,999ರೂ.ಗಳಾಗಿದೆ.

ವಿದ್ಯಾರ್ಥಿಗಳಿಗೆ ಈ ಫೋನ್‌ಗಳು ಬೆಸ್ಟ್‌: ಆಫರ್‌ ಬೆಲೆಯಲ್ಲಿ ಲಭ್ಯ!

ಒಪ್ಪೋ A74 5G: ಭಾರೀ ಬೇಡಿಕೆಯಲ್ಲಿರುವ ಈ ಸ್ಮಾರ್ಟ್‌ಫೋನ್‌ 6.49 ಇಂಚಿನ FHD+ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್480 ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಹಾಗೆಯೇ 6GB RAM ಹಾಗೂ128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, 256GB ವರೆಗೆ ವಿಸ್ತರಿಸಬಹುದಾಗಿದೆ. ಜೊತೆಗೆ 48MP+2MP+2MP ರಿಯರ್‌ ಹಾಗೂ 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರ ಮೂಲ ದರ 20,990ರೂ.ಗಳಾಗಿದ್ದು, 15,990ರೂ.ಗಳ ಆಫರ್ ಬೆಲೆಗೆ ಕೊಂಡುಕೊಳ್ಳಬಹುದು.

ಲಾವಾ ಬ್ಲೇಜ್ 5G : ಈ ಸ್ಮಾರ್ಟ್‌ಫೋನ್ 6.5 ಇಂಚಿನ HD+ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 4+3GBRAM ಹಾಗೂ128GB ಇಂಟರ್‌ ಸ್ಟೋರೇಜ್‌ನ ಸಾಮರ್ಥ್ಯ ಪಡೆದುಕೊಂಡಿದೆ. 50MP ಪ್ರಮುಖ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಹೊಂದಿದ್ದು, 8MP ಸೆಲ್ಫಿ ಕ್ಯಾಮೆರಾ ಹೊಂದಿದ್ದು,5000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಈ ಫೋನ್‌ ಅನ್ನು 10,999ರೂ.ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 14,999ರೂ.ಗಳು.

ವಿದ್ಯಾರ್ಥಿಗಳಿಗೆ ಈ ಫೋನ್‌ಗಳು ಬೆಸ್ಟ್‌: ಆಫರ್‌ ಬೆಲೆಯಲ್ಲಿ ಲಭ್ಯ!

ರಿಯಲ್‌ಮಿ ನಾರ್ಜೋ 50 5G: ಈ ಫೋನ್ 6.6 ಇಂಚಿನ FHD+ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 810 5G ಗೇಮಿಂಗ್ ಪ್ರೊಸೆಸರ್‌ನ ಬಲ ಪಡೆದುಕೊಂಡಿದೆ. 4GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, 256 GBವರೆಗೆ ಇದನ್ನು ವಿಸ್ತರಿಸಬಹುದಾಗಿದೆ. ಇದರೊಂದಿಗೆ 48MP+2MP ಡ್ಯುಯಲ್‌ ರಿಯರ್‌ ಹಾಗೂ 8MP ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಇದರಲ್ಲಿದೆ. 17,999ರೂ.ಗಳ ಸಾಮಾನ್ಯ ದರ ಹೊಂದಿದ್ದು, 13,999ರೂ.ಗಳಲ್ಲಿ ಲಭ್ಯ.

Best Mobiles in India

English summary
These smartphones are a great choice for students as these phones can be purchased at affordable prices through Amazon. Here are the key features of these midrange phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+