Best Smartphones: ಭಾರತದಲ್ಲಿ 10 ಸಾವಿರದ ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!
ಸ್ಮಾರ್ಟ್‌ಫೋನ್‌ಗಳ (Smartphones) ವಿಭಾಗದಲ್ಲಿ ಭಿನ್ನ ಫೀಚರ್ಸ್ ನ ಹಾಗೂ ಭಿನ್ನ ಶೈಲಿಯ ಫೋನ್‌ಗಳನ್ನು ನಾವು ಕಾಣಬಹುದು. ಈ ನಡುವೆ ಭಾರತದಲ್ಲಿ ಬಜೆಟ್ ಬೆಲೆಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ಫೋನ್‌ಗಳು ಆಫರ್ ಬೆಲೆಯಲ್ಲಿ ಲಭ್ಯ ಆಗುತ್ತಿರುವುದು ವಿಶೇಷ ಸಂಗತಿಯಾಗಿದೆ.
ಹೌದು, ಸ್ಮಾರ್ಟ್‌ಫೋನ್ ಖರೀದಿ ಮಾಡುವ ಸಾಕಷ್ಟು ಜನರು ಬೆಲೆಯ ಬಗ್ಗೆ ಆಲೋಚನೆ ಮಾಡುತ್ತಾರೆ. ಅದರಲ್ಲೂ ಭಾರತದಲ್ಲಿ ಬಹುಪಾಲು ಜನರು ಮೊದಲು ಬೆಲೆ ಬಗ್ಗೆ ವಿಚಾರಿಸಿ ನಂತರ ಫೋನ್ ಬಗ್ಗೆ ವಿಚಾರಿಸುತ್ತಾರೆ. ಈ ಕಾರಣಕ್ಕೆಂದೇ ನಾವಿಲ್ಲಿ ಕೆಲವು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಟ್ಟಿದ್ದು, ನೀವು ಏನಾದರೂ ಅತ್ಯುತ್ತಮ ಫೋನ್‌ಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡಲು ಮುಂದಾಗಿದ್ರೆ ಈ ಲೇಖನ ನಿಮಗೆ ಅನುಕೂಲ ಮಾಡಿಕೊಡಲಿದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಬಜೆಟ್ ಫೋನ್‌ಗಳು ಏನೆಲ್ಲಾ ಫೀಚರ್ಸ್ ಪಡೆದಿವೆ ಎಂದು ನೋಡೋಣ.

ಐಟೆಲ್ P55 5G : ಈ ಸ್ಮಾರ್ಟ್‌ಫೋನ್ (Itel P55 5G) ಅನ್ನು ನೀವು 9,899 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.6 ಇಂಚಿನ 90Hz ರಿಫ್ರೆಶ್ ರೇಟ್ ಇರುವ LCD ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6080 SoC ನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಅನ್ನು ರನ್ ಮಾಡಲಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಉತ್ತಮ ಫೋನ್ ಎನಿಸಿಕೊಂಡಿದೆ.
ಪೊಕೊ C65 : ಈ ಫೋನ್ (Poco C65) ಅನ್ನು ನೀವು ಆನ್‌ಲೈನ್ ಮೂಲಕ ಕೇವಲ 7,899 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಯೋಗ್ಯವಾದ ಆಯ್ಕೆಯಾಗಿದೆ. ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸಲು ಅಥವಾ ವಾಟ್ಸಾಪ್ ಅನ್ನು ಬಳಕೆ ಮಾಡಲು ಉತ್ತಮವಾಗಿದ್ದು, ಇದರ ಹೆಚ್ಚಿನ ಇಂಟರ್ ಸ್ಟೋರೇಜ್ ಆಯ್ಕೆಯು ಗ್ರಾಹಕರನ್ನು ಆಕರ್ಷಿಸುತ್ತದೆ.

ಮೊಟೊ G14: ಈ ಫೋನ್ (Moto G14) 8,829 ರೂ.ಗಳ ಬೆಲೆಗೆ ಕಾಣಿಸಿಕೊಂಡಿದೆ. ಈ ಫೋನ್ 6.5 ಇಂಚಿನ 405 PPI, IPS LCD ಡಿಸ್ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಅಲ್ಲದೆ ಈ ಫೋನ್ ಯುನಿಸೊಕ್ T616 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದಕ್ಕಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಪಡೆದಿದೆ.
ಪೊಕೊ C55: ಈ ಫೋನ್ (Poco C55) 6,299 ರೂ.ಗಳ ಬೆಲೆ ಹೊಂದಿದ್ದು, ಇದನ್ನು 10,000 ಕ್ಕಿಂತ ಕಡಿಮೆ ಇರುವ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಉನ್ನತ ಆಯ್ಕೆ ಎಂದು ಪರಿಗಣಿಸಬಹುದು. ಇದು ಮೀಡಿಯಾಟೆಕ್ ಹಿಲಿಯೋ G85 SoC ನಲ್ಲಿ ಕೆಲಸ ಮಾಡಲಿದ್ದು, 4GB / 6GB RAM ಮತ್ತು 64GB / 128GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದಿದೆ. ಇದರೊಂದಿಗೆ 50MP ಪ್ರಾಥಮಿಕ ಶೂಟರ್ ಇದ್ದು, HD+ ರೆಸಲ್ಯೂಶನ್‌ನೊಂದಿಗೆ 6.71 ಇಂಚಿನ ಡಿಸ್‌ಪ್ಲೇ ಹೊಂದಿದೆ.

ರಿಯಲ್‌ಮಿ C55: ಈ ಫೋನ್ (Realme C55) ಅನ್ನು ನೀವು 9,980 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಮೀಡಿಯಾಟೆಕ್ G88 ಚಿಪ್‌ಸೆಟ್ ಅನ್ನು ಹೊಂದಿದ್ದು, 90Hz ರಿಫ್ರೆಶ್ ದರದೊಂದಿಗೆ 6.72 ಇಂಚಿನ FHD+ ಡಿಸ್ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ ಈ ಫೋನ್ ಮಿನಿ-ಕ್ಯಾಪ್ಸುಲ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ದೀರ್ಘಾವಧಿಯ ಬ್ಯಾಕಪ್ ನೀಡುವ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8: ಈ ಫೋನ್ (Infinix Smart 8) ಅನ್ನು 6,229 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಯುನಿಸೊಕ್ T606 ಪ್ರೊಸೆಸರ್ ಬಲ ಪಡೆದಿದ್ದು, 6.6 ಇಂಚಿನ IPS LCD ಡಿಸ್ಪ್ಲೇ ಹೊಂದಿದ್ದು, 90 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಇದರೊಂದಿಗೆ 13 MP + 0.08 MP ಡ್ಯುಯಲ್ ರಿಯರ್ ಕ್ಯಾಮೆರಾ, 8 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲ ಪಡೆದಿದೆ.


Click it and Unblock the Notifications








