Home
ಸುದ್ದಿಜಾಲ

smartphones: ಫಿಂಗರ್‌ಪ್ರಿಂಟ್‌ ಸೆನ್ಸರ್‌ ಆಯ್ಕೆ ಇರುವ 12,000ರೂ.ಗಳ ಒಳಗಿನ ಅತ್ಯುತ್ತಮ ಫೋನ್‌ಗಳಿವು!

ಇತ್ತೀಚೆಗೆ ಲಾಂಚ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು (smartphones) ಹೊಸ ಹೊಸ ಫೀಚರ್ಸ್‌ ಆಯ್ಕೆಯನ್ನು ಪಡೆದುಕೊಳ್ಳುತ್ತಿವೆ. ಈ ನಡುವೆ ಸೆನ್ಸರ್‌ಗಳು ಸಹ ಫೋನ್‌ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ವಿಶೇ‍ಷ ಸೆನ್ಸರ್‌ ಆಯ್ಕೆ ಸಹ ಲಭ್ಯ ಆಗುತ್ತಿದ್ದು, ಈ ಮೂಲಕ ಭದ್ರತೆಗೆ ಹಾಗೂ ಬಳಕೆಗೆ ವಿಶೇಷ ಅನುಕೂಲ ಮಾಡಿಕೊಡುತ್ತಿವೆ. ಈ ನಡುವೆ ನೀವು 12,000ರೂ.ಗಳ ಒಳಗೆ ಲಭ್ಯ ಇರುವ ಹಾಗೂ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಆಯ್ಕೆ ಇರುವ ಅತ್ಯುತ್ತಮ ಫೋನ್‌ಗಳನ್ನು ಹುಡುಕುತ್ತಿದ್ದರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಫೋನ್‌ಗಳು ಈ ವಿಭಾಗದಲ್ಲಿ ಲಭ್ಯ ಇವೆ ಅನ್ನೋದನ್ನು ಗಮನಿಸೋಣ.

ಫಿಂಗರ್‌ಪ್ರಿಂಟ್‌ ಸೆನ್ಸರ್‌ ಆಯ್ಕೆ ಇರುವ ಅತ್ಯುತ್ತಮ ಫೋನ್‌ಗಳಿವು!

ರಿಯಲ್‌ಮಿ 12X: ಈ ಸ್ಮಾರ್ಟ್‌ಫೋನ್ (Realme 12X) ನಿಮಗೆ 11,999 ರೂ.ಗಳ ಒಳಗೆ ಲಭ್ಯ ಇರಲಿದೆ. ಇದು ಡೈಮೆನ್ಸಿಟಿ 6100 ಪ್ಲಸ್, ಆಕ್ಟಾ ಕೋರ್, 2.2 GHz ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM, 128 GB ಇಂಟರ್‌ ಸ್ಟೋರೇಜ್‌ ಬಲ ಪಡೆದಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 45W ಫಾಸ್ಟ್ ಚಾರ್ಜಿಂಗ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಉಳಿದಂತೆ ಈ ಫೋನ್ 6.72 ಇಂಚಿನ 1080 x 2400 px, 120 Hz ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಇದು 50 MP + 2 MP ಡ್ಯುಯಲ್ ರಿಯರ್ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿದೆ.

ಮೊಟೊರೊಲಾ ಮೊಟೊ G34 5G: ಈ ಸ್ಮಾರ್ಟ್‌ಫೋನ್‌ (Motorola Moto G34 5G) ನಿಮಗೆ 11,999 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು ಸ್ನಾಪ್‌ಡ್ರಾಗನ್ 695, ಆಕ್ಟಾ ಕೋರ್, 2.2 GHz ಪ್ರೊಸೆಸರ್ ನೊಂದಿಗೆ 8 GB RAM, 128 GB ಇಂಟರ್‌ ಸ್ಟೋರೇಜ್‌ ಬಲ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಹಾಗೆಯೇ 6.5 ಇಂಚಿನ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದ್ದು, 50 MP + 2 MP ಡ್ಯುಯಲ್ ರಿಯರ್ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಫಿಂಗರ್‌ಪ್ರಿಂಟ್‌ ಸೆನ್ಸರ್‌ ಆಯ್ಕೆ ಇರುವ ಅತ್ಯುತ್ತಮ ಫೋನ್‌ಗಳಿವು!

ಶಿಯೋಮಿ ರೆಡ್ಮಿ ನೋಟ್‌ 12 5G: ಈ ಫೋನ್‌ (Xiaomi Redmi Note 12 5G) ಸಹ 11,159 ರೂ.ಗಳ ಬೆಲೆಗೆ ಲಭ್ಯ ಇದೆ. ಇದು ಸ್ನಾಪ್‌ಡ್ರಾಗನ್ 4 ಜನ್ 1, ಆಕ್ಟಾ ಕೋರ್, 2 GHz ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM, 128 GB ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದ್ದು, 6.67 ಇಂಚಿನ ಡಿಸ್ಪ್ಲೇ ಹಾಗೂ 48 MP + 8 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾದೊಂದಿಗೆ 13 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಶಿಯೋಮಿ ರೆಡ್ಮಿ 13C 5G: ಈ ಫೋನ್‌ (Xiaomi Redmi 13C 5G) 11,499 ರೂ.ಗಳಲ್ಲಿ ಲಭ್ಯ ಇದೆ. ಇದು ಡೈಮೆನ್ಸಿಟಿ 6100 ಪ್ಲಸ್, ಆಕ್ಟಾ ಕೋರ್, 2.2 GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM, 256 GB ಇಂಟರ್‌ ಸ್ಟೋರೇಜ್‌ನೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ 6.74 ಇಂಚಿನ 720 x 1600 ಪಿಕ್ಸೆಲ್ ಸ್ಕ್ರೀನ್‌ ಸಾಮರ್ಥ್ಯದ ಡಿಸ್‌ಪ್ಲೇ ಹಾಗೂ 50 MP + ಡೆಪ್ತ್ ಸೆನ್ಸರ್ ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಫಿಂಗರ್‌ಪ್ರಿಂಟ್‌ ಸೆನ್ಸರ್‌ ಆಯ್ಕೆ ಇರುವ ಅತ್ಯುತ್ತಮ ಫೋನ್‌ಗಳಿವು!

ಪೊಕೊ M6 ಪ್ರೊ 5G : ಈ ಸ್ಮಾರ್ಟ್‌ಫೋನ್‌ (Poco M6 Pro 5G) ಅನ್ನು 10,998 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಸ್ನಾಪ್‌ಡ್ರಾಗನ್ 4 ಜನ್ 2, ಆಕ್ಟಾ ಕೋರ್, 2.2 GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಅಲ್ಲದೆ ಈ ಫೋನ್‌ 6.79 ಇಂಚಿನ 90 Hz ರಿಫ್ರೆಶ್‌ ರೇಟ್‌ ಆಯ್ಕೆಯ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದ್ದು, 50 MP + 2 MP ಡ್ಯುಯಲ್ ರಿಯರ್ ಹಾಗೂ 8 MP ಸೆಲ್ಫಿ ಕ್ಯಾಮೆರಾ ಹೊಂದಿದೆ.

Best Mobiles in India

English summary
Xiaomi Redmi Note 12 5G, Xiaomi Redmi 13C 5G, Poco M6 Pro 5G, Realme 12X, Motorola Moto G34 5G and many smartphones get fingerprint sensor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+