Home
ಸುದ್ದಿಜಾಲ

Smartphones: 64MP ಗೂ ಅಧಿಕ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು! ಅದೂ 15 ಸಾವಿರಕ್ಕಿಂತ ಕಡಿಮೆ ಬೆಲೆಗೆ

ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತವೆ. ಅದರಲ್ಲೂ ಕ್ಯಾಮೆರಾ ವಿಚಾರದಲ್ಲಿ ಈ ಫೋನ್‌ಗಳ ಲೆವೆಲ್‌ ಬೇರೆಯದೇ ರೀತಿಯಲ್ಲಿ ಇದೆ. ಈ ಕಾರಣಕ್ಕೆ ಸ್ಮಾರ್ಟ್‌ಫೋನ್‌ ತಯಾರಿಕಾ ಬ್ರ್ಯಾಂಡ್‌ಗಳು ಆಗಾಗ್ಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇವೆ.

ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಉತ್ತಮ ಕ್ಯಾಮೆರಾ ಆಯ್ಕೆಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಭಾರತದಲ್ಲಿ ಈ ಫೋನ್‌ಗಳನ್ನು ಭಾರೀ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದು, ಈ ವಿಭಾಗದಲ್ಲಿ ರಿಯಲ್‌ಮಿ, ರೆಡ್ಮಿ, ಮೊಟೊರೊಲಾ ಫೋನ್‌ಗಳನ್ನು ಕಾಣಬಹುದು. ಹಾಗಿದ್ರೆ, 15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಮತ್ತು 64MP ಕ್ಯಾಮೆರಾ ಆಯ್ಕೆ ಪಡೆದಿರುವ ಉತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ.

64MP ಗೂ ಅಧಿಕ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ರಿಯಲ್‌ಮಿ 11x 5G: ಈ ಫೋನ್ (Realme 11x 5G) 6.72 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಮೀಡಿಯಾಟೆಕ್‌ ಡೈಮೆನ್ಸಿಟಿ 6100+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 6 GB RAM ಹಾಗೂ 128 GB ROM ಆಯ್ಕೆ 64MP + 2MP ರಿಯರ್‌ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಇದರ ಆಫರ್ ಬೆಲೆ 14,999 ರೂ.ಗಳು.

ರಿಯಲ್‌ಮಿ ನಾರ್ಜೋ N55 : ಈ ಸ್ಮಾರ್ಟ್‌ಫೋನ್ (Realme Narzo N55) 6.72 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 6 GB RAM ಹಾಗೂ 128 GB ROM ಸ್ಟೋರೇಜ್‌ ಆಯ್ಕೆ, 64MP ರಿಯರ್‌ ಕ್ಯಾಮೆರಾದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಇದನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 9,303 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 14,999 ರೂ.ಗಳು.

64MP ಗೂ ಅಧಿಕ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ರೆಡ್ಮಿ ನೋಟ್ 11 ಪ್ರೊ: ಈ ಸ್ಮಾರ್ಟ್‌ಫೋನ್ (Redmi Note 11 Pro) 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 6 GB RAM ಹಾಗೂ 128 GB ROM ಸ್ಟೋರೇಜ್‌ ಆಯ್ಕೆ ಪಡೆದಿದ್ದು, 108MP ರಿಯರ್ ಕ್ಯಾಮರಾ ಹಾಗೂ 16MP ಸೆಲ್ಫಿ ಕ್ಯಾಮೆರಾ ಪಡೆದಿದೆ. ಇದರ ಜೊತೆಗೆ ಈ ಫೋನ್‌ ಸಹ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇನ್ನು ಈ ಫೋನ್‌ ಅನ್ನು ನೀವು 15,400 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಇನ್ಫಿನಿಕ್ಸ್ ನೋಟ್ 30 5G: ಈ ಸ್ಮಾರ್ಟ್‌ಫೋನ್ (Infinix Note 30 5G) 6.78 ಇಂಚಿನ ಫುಲ್‌ ಹೆಚ್‌ಡಿ + ಡಿಸ್ಪ್ಲೇ ಆಯ್ಕೆ ಪಡೆದಿದ್ದು, ಡೈಮೆನ್ಸಿಟಿ 6080 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 GB RAM ಹಾಗೂ 128 GB ROM ಸ್ಟೋರೇಜ್‌ ಆಯ್ಕೆ ಪಡೆದಿದ್ದು, 108 MP + 2 MP+ AI ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಫೋನ್‌ ಅನ್ನು 14,499 ರೂ.ಗಳ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ.

64MP ಗೂ ಅಧಿಕ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ಮೊಟೊರೊಲಾ G60: ಈ ಸ್ಮಾರ್ಟ್‌ಫೋನ್ (Motorola G60) 6.8 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದ್ದು, 6 GB RAM ಹಾಗೂ 128 GB ROM ಬಲದೊಂದಿಗೆ 108MP + 8MP + 2MP ರಿಯರ್‌ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಹೊಂದಿದೆ ಹಾಗೂ
6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಈ ಫೋನ್‌ ಅನ್ನು 14,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Realme 11x 5G, Realme Narzo N55, Redmi Note 11 Pro, Infinix Note 30 5G, Motorola G60 smartphones have got 64MP camera option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+