Home
ಸುದ್ದಿಜಾಲ

Smartwatch: ಉತ್ತಮ ಹೃದಯ ಬಡಿತದ ಮೇಲ್ವಿಚಾರಣೆ ಆಯ್ಕೆಯ ಸ್ಮಾರ್ಟ್‌ವಾಚ್‌ಗಳಿವು! ಆಫರ್ ಬೆಲೆಯಲ್ಲಿ ಲಭ್ಯ

ಸ್ಮಾರ್ಟ್‌ವಾಚ್‌ಗಳು (Smartwatch) ಇಂದು ಸಾಕಷ್ಟು ಬಳಕೆದಾರರಿಗೆ ವಿಶೇಷವಾದ ಆರೋಗ್ಯ ಸೌಲಭ್ಯಗಳನ್ನು ನೀಡುತ್ತವೆ. ಅದರಲ್ಲೂ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳು ಬಳಕೆದಾರರ ಜೀವವನ್ನೂ ಸಹ ಉಳಿಸುವ ಕೆಲಸ ಮಾಡುತ್ತಿವೆ. ಈ ಕಾರಣಕ್ಕೆ ಈ ಸ್ಮಾರ್ಟ್‌ವಾಚ್‌ಗಳ ಮೇಲೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ.

ಹೌದು, ಆರೋಗ್ಯ ಮತ್ತು ಫಿಟ್ನೆಸ್ ಹಿನ್ನೆಲೆ ಇಂದು ಸ್ಮಾರ್ಟ್‌ವಾಚ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸ್ಮಾರ್ಟ್‌ವಾಚ್‌ಗಳಲ್ಲಿ ಹಲವು ಸೆನ್ಸರ್‌ಗಳಿದ್ದು, ತಮ್ಮದೇ ಆದ ರೀತಿಯಲ್ಲಿ ಬಳಕೆದಾರರ ಆರೋಗ್ಯ ಟ್ರ್ಯಾಕ್‌ ಮಾಡುತ್ತವೆ. ಅದರಂತೆ ಹಾರ್ಟ್‌ ಮಾನಿಟರ್‌ ಸೆನ್ಸರ್ (Heart monitor sensor) ಸಹ ಪ್ರಮುಖವಾಗಿದ್ದು, ಈ ಸೆನ್ಸರ್‌ ಮೂಲಕ ಜನರು ತಮ್ಮ ದಿನನಿತ್ಯದ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಮಾರುಕಟ್ಟೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಹೃದಯ ಬಡಿತದ ಮೇಲ್ವಿಚಾರಣೆಯ ಸ್ಮಾರ್ಟ್‌ವಾಚ್‌ಗಳ ಲಿಸ್ಟ್‌ ಇಲ್ಲಿದೆ ನೋಡಿ.

ಉತ್ತಮ ಹೃದಯ ಬಡಿತದ ಮೇಲ್ವಿಚಾರಣೆ ಆಯ್ಕೆಯ ಸ್ಮಾರ್ಟ್‌ವಾಚ್‌ಗಳಿವು!...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 4: ಈ ಸ್ಮಾರ್ಟ್‌ವಾಚ್ (Samsung Galaxy Watch 4) 66% ರಿಯಾಯಿತಿಯೊಂದಿಗೆ 8,999 ರೂ.ಗಳಿಗೆ ಲಭ್ಯ ಇದೆ. ಇದು ಕೇವಲ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಸ್ಮಾರ್ಟ್‌ವಾಚ್ ಆಗಿದ್ದು, ಇದು ದೇಹದ ಸಂಯೋಜನೆಯ ವಿಶ್ಲೇಷಣೆಗಾಗಿ ಜೈವಿಕ ವಿದ್ಯುತ್ ಪ್ರತಿರೋಧ ವಿಶ್ಲೇಷಣೆ ಸೆನ್ಸರ್‌ ಮತ್ತು ಆಪ್ಟಿಕಲ್ ಹೃದಯ ಬಡಿತ ಸೆನ್ಸರ್‌ ಆಯ್ಕೆ ಪಡೆದಿದೆ. ಅಲ್ಲದೆ ಸುಧಾರಿತ ನಿದ್ರೆಯ ವಿಶ್ಲೇಷಣೆ ಮತ್ತು ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್‌ನಂತಹ ವಿಶೇಷ ಆರೋಗ್ಯ ಫೀಚರ್ಸ್‌ ಅನ್ನೂ ಸಹ ಕಾಣಬಹುದಾಗಿದೆ.

ಫೈರ್-ಬೋಲ್ಟ್ ವಿಷನರಿ ಸ್ಮಾರ್ಟ್ ವಾಚ್: ಈ ಸ್ಮಾರ್ಟ್‌ವಾಚ್‌ (Fire-Boltt Visionary Smart Watch) 85% ರಿಯಾಯಿತಿಯೊಂದಿಗೆ 2,499 ರೂ.ಗಳ ಬೆಲೆಗೆ ಲಭ್ಯ ಇದೆ. ಇದು 1.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 368 x 448 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೆ 60Hz ರಿಫ್ರೆಶ್ ರೇಟ್‌ 100+ ಸ್ಪೋರ್ಟ್ಸ್ ಮೋಡ್, TWS ಸಂಪರ್ಕ, ವಾಯ್ಸ್‌ ಅಸಿಸ್ಟೆಂಟ್ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್‌ ಅನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ.

ಉತ್ತಮ ಹೃದಯ ಬಡಿತದ ಮೇಲ್ವಿಚಾರಣೆ ಆಯ್ಕೆಯ ಸ್ಮಾರ್ಟ್‌ವಾಚ್‌ಗಳಿವು!...


ಅಮಾಜ್‌ಫಿಟ್ ಬಿಪ್ 5: ಈ ಸ್ಮಾರ್ಟ್‌ವಾಚ್‌ಗೆ (Amazfit Bip 5) ಇ-ಕಾಮರ್ಸ್‌ ಸೈಟ್‌ಗಳಲ್ಲಿ 31% ರಿಯಾಯಿತಿ ನೀಡಲಾಗಿದೆ. ಅದರಂತೆ ಇದನ್ನು 7,499ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ವಾಚ್‌ 1.91 ಇಂಚಿನ ಅಲ್ಟ್ರಾ ಲಾರ್ಜ್ ಸ್ಕ್ರೀನ್, ಬ್ಲೂಟೂತ್ ಕಾಲಿಂಗ್, ಅಲೆಕ್ಸಾ ಬಿಲ್ಟ್-ಇನ್, ಜಿಪಿಎಸ್ ಟ್ರ್ಯಾಕಿಂಗ್‌ನೊಂದಿಗೆ ಹತ್ತು ದಿನದ ಬ್ಯಾಟರಿ ಬಾಳಿಕೆ ನೀಡಲಿದ್ದು, ವಿಶೇಷ ಫೀಚರ್ಸ್‌ ಆಯ್ಕೆ ಪಡೆದಿದೆ.

ರೆಡ್ಮಿ ಸ್ಮಾರ್ಟ್ ವಾಚ್ 3 ಆಕ್ಟಿವ್‌: ಈ ಸ್ಮಾರ್ಟ್‌ವಾಚ್‌ (Redmi Smart Watch 3 Active) ಅನ್ನು 5,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಾಚ್‌ 1.83 ಇಂಚಿನ ದೊಡ್ಡ ಎಲ್‌ಸಿಡಿ ಡಿಸ್‌ಪ್ಲೇ, 5ATM ವಾಟರ್ ರೆಸಿಸ್ಟೆಂಟ್ ಫೀಚರ್ಸ್‌ ಪಡೆದಿದ್ದು, 12 ದಿನಗಳ ಬ್ಯಾಟರಿ ಬ್ಯಾಕಪ್‌, ಜಿಪಿಎಸ್‌, 100+ ವರ್ಕೌಟ್ ಮೋಡ್, ಹೃದಯ ಬಡಿತ ಮಾನಿಟರ್, ಫಿಟ್‌ನೆಸ್ ಟ್ರ್ಯಾಕಿಂಗ್ ಸೇರಿದಂತೆ ಅಗತ್ಯ ಫೀಚರ್ಸ್‌ ಆಯ್ಕೆ ಪಡೆದಿದೆ.

ಉತ್ತಮ ಹೃದಯ ಬಡಿತದ ಮೇಲ್ವಿಚಾರಣೆ ಆಯ್ಕೆಯ ಸ್ಮಾರ್ಟ್‌ವಾಚ್‌ಗಳಿವು!...

ಫಾಸಿಲ್‌ ಜನ್ 6: ಈ ಸ್ಮಾರ್ಟ್‌ವಾಚ್‌ (Fossil Gen 6) 60% ರಿಯಾಯಿತಿಯೊಂದಿಗೆ ಕಂಡುಬಂದಿದ್ದು, ನೀವೀಗ ಇದನ್ನು 9598 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಾಚ್‌ ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಆನ್ ಡಿಸ್ಪ್ಲೇ ಜೊತೆಗೆ ಸಾವಿರಾರು ವಾಚ್ ಫೇಸ್‌ ಆಯ್ಕೆ ಹೊಂದಿದ್ದು, ಜಿಪಿಎಸ್‌ ಬೆಂಬಲ. ಕರೆಗಳು, ಟೆಕ್ಸ್ಟ್‌ ಮತ್ತು ಆಪ್‌ ನೋಟಿಫಿಕೇಶನ್‌ ಸೌಲಭ್ಯ ಪಡೆದಿದೆ.

Best Mobiles in India

English summary
Many smart watches including Samsung Galaxy Watch 4, Fossil Gen 6, Fire-Boltt Visionary Smartwatch, Amazfit Bip 5 have got good heart monitor facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+