ಕಾಲೇಜು ವಿದ್ಯಾರ್ಥಿಗಳಿಗೆ ಇಲ್ಲಿವೆ ನೋಡಿ ಬೆಸ್ಟ್ ಟ್ಯಾಬ್ಲೆಟ್!..ಬೆಲೆಯೂ ಅಗ್ಗ!
ಸ್ಮಾರ್ಟ್‌ಫೋನ್‌ಗಳಂತೆ ಇತ್ತೀಚಿಗೆ ಟ್ಯಾಬ್ಲೆಟ್ ಡಿವೈಸ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತಿವೆ. ಹಾಗೆಯೇ ಟ್ಯಾಬ್ ಡಿವೈಸ್‌ಗಳು ಗ್ರಾಹಕರಿಗೆ ಅನುಕೂಲವು ಎನಿಸಿವೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಸೇರಿದಂತೆ ಇತರೆ ಕಂಪನಿಗಳು ಭಿನ್ನ ಮಾದರಿಯ ಟ್ಯಾಬ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅದಾಗ್ಯೂ, ಕೆಲವು ಸಂಸ್ಥೆಗಳು ಅಗ್ಗದ ಟ್ಯಾಬ್‌ಗಳು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಎನಿಸಿಕೊಂಡಿವೆ.
ಹೌದು, ಸದ್ಯ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್ ಡಿವೈಸ್‌ಗಳು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಆದರೆ ಗ್ರಾಹಕರು ಅವರ ಅನುಕೂಲಕ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಟ್ಯಾಬ್ ಖರೀದಿ ಮಾಡಲು ಮುಂದಾಗುತ್ತಾರೆ. ಮುಖ್ಯವಾಗಿ ಬಹುತೇಕರು ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇರುವ ಟ್ಯಾಬ್ ಗಳತ್ತ ಹೆಚ್ಚು ಮುಖ ಮಾಡುತ್ತಾರೆ. ಇನ್ನು ಕಾಲೇಜು ವಿದ್ಯಾರ್ಥಿಗಳು ಸಹ ಬಜೆಟ್ ಬೆಲೆಯಲ್ಲಿ ಅಧಿಕ ಫೀಚರ್ಸ್ ಇರುವ ಟ್ಯಾಬ್‌ಗಳನ್ನು ಇಷ್ಟಪಡುತ್ತಾರೆ. ಅಂತಹ ಟಾಪ್ 5 ಟ್ಯಾಬ್ಲೆಟ್ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್ ಪ್ಯಾಡ್ ಒನ್ (itel Pad One) ಟ್ಯಾಬ್ : ಐಟೆಲ್ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಐಟೆಲ್ ಪ್ಯಾಡ್ ಒನ್ ಟ್ಯಾಬ್ ಡಿವೈಸ್ ಈಗಾಗಲೇ ಗಮನ ಸೆಳೆದಿದೆ. ಇದರ ಡಿಸೈನ್ ಹಾಗೂ ಫೀಚರ್ಸ್ ಆಕರ್ಷಕ ಎನಿಸಿದೆ. ಈ ಡಿವೈಸ್ 10.1 ಹೆಚ್‌ಡಿ + IPS ಡಿಸ್‌ಪ್ಲೇ ಹೊಂದಿದ್ದು, ಉತ್ತಮ ಕಾರ್ಯಕ್ಷಮತೆಗಾಗಿ ಸೂಪರ್‌ಫಾಸ್ಟ್ 4G VoLTE ಪಡೆದಿದೆ.

ಹಾಗೆಯೇ ಇದು ಸ್ಟೈಲಿಶ್ ಮೆಟಲ್ ಬಾಡಿ ಒಳಗೊಂಡಿದ್ದು, ಜೊತೆಗೆ ಶಕ್ತಿಯುತ 6000 mAh ಮೆಗಾ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಇದು ಪಡೆದುಕೊಂಡಿದೆ. ಹಾಗೆಯೇ ಡಬಲ್ ಸೂಪರ್ ಸ್ಪೀಕರ್ ಇದ್ದು, ಮನರಂಜನೆ ಅಥವಾ ಗೇಮಿಂಗ್ ಅನ್ನು ಆನಂದಿಸಬಹುದಾಗಿದೆ. ಇದರಲ್ಲದೇ ಹಿಂಬದಿಯಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾ ಸಹ ಇದೆ. ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಇದರ ಬೆಲೆಯು 12,999ರೂ. ಆಗಿದೆ.
ರಿಯಲ್‌ಮಿ ಪ್ಯಾಡ್ ಮಿನಿ ಟ್ಯಾಬ್ (realme Pad Mini WiFi Tablet) : ಈ ಟ್ಯಾಬ್ 6400 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 3GB RAM 32GB ROM ಸ್ಟೋರೇಜ್ ಆಯ್ಕೆ ಪಡೆದಿದೆ. ಹಾಗೆಯೇ 8.7 ಇಂಚಿನ ಸಿನಿಮಾಟಿಕ್ ಡಿಸ್‌ಪ್ಲೇ ರಚನೆಯನ್ನು ಒಳಗೊಂಡಿದ್ದು, ಡ್ಯುಯಲ್ ಸ್ಪೀಕರ್ ಸೌಲಭ್ಯ ಸಹ ಪಡೆದಿದೆ. ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ರಿಯಲ್‌ಮಿ ಪ್ಯಾಡ್ ಮಿನಿ ಟ್ಯಾಬ್ ಬೆಲೆಯು 10,099ರೂ. ಆಗಿದೆ.

ನೋಕಿಯಾ T20 ಟ್ಯಾಬ್ಲೆಟ್ : ನೋಕಿಯಾ ಸಂಸ್ಥೆಯ ಈ ಟ್ಯಾಬ್ 2,000 x 1,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 10.4 ಇಂಚಿನ 2K ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಇದು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ರಿಯರ್ ಕ್ಯಾಮೆರಾ ಹೊಂದಿದ್ದು, ಇದರೊಂದಿಗೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಪಡೆದುಕೊಂಡಿದೆ. ಇನ್ನು ಇದು 3GB RAM + 32GB ಸ್ಟೋರೇಜ್ ಆಯ್ಕೆ ಪಡೆದಿದೆ. ಅಮೆಜಾನ್ ತಾಣದಲ್ಲಿ ಈ ಡಿವೈಸ್ ಬೆಲೆಯು 14,990ರೂ. ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A7 ಲೈಟ್ : ಸ್ಯಾಮ್‌ಸಂಗ್ ಸಂಸ್ಥೆಯ 1,340 x 800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 8.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಟ್ಯಾಬ್ಲೆಟ್ ಮೀಡಿಯಾ ಟೆಕ್ ಹೆಲಿಯೊ P22T SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಜೊತೆಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಇದರ ಆರಂಭಿಕ ದರ 11999ರೂ. ಆಗಿದೆ.


Click it and Unblock the Notifications








