25 ಸಾವಿರದೊಳಗೆ ಉತ್ತಮ ಟ್ಯಾಬ್ಲೆಟ್‌ಗಳು: ಸುಧಾರಿತ ಫೀಚರ್ಸ್, ಐಪ್ಯಾಡ್‌ಗಿಂತ ಕಡಿಮೆ ಏನಿಲ್ಲ!
ಸ್ಮಾರ್ಟ್‌ಫೋನ್‌ಗಳಷ್ಟೇ (Smartphone) ಬೇಡಿಕೆ ಇರುವ ಟ್ಯಾಬ್ಲೆಟ್‌ಗಳನ್ನು (Tablets) ಪ್ರಮುಖ ಕಂಪೆನಿಗಳು ಭಿನ್ನ ಹಾಗೂ ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಪರಿಚಯಿಸಿಕೊಂಡು ಬಂದಿವೆ. ಅದರಲ್ಲೂ ಟ್ಯಾಬ್ಲೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಸಹ ಇದೆ. ಈ ಎಲ್ಲಾ ಬೆಳವಣಿಗೆ ನಡುವೆ ನೀವೇನಾದರೂ ಆಫರ್ ಬೆಲೆಯಲ್ಲಿ ಅದರಲ್ಲೂ 25 ಸಾವಿರದೊಳಗೆ ಟ್ಯಾಬ್ಲೆಟ್‌ಗಳನ್ನು ಹುಡುಕುತ್ತಿದ್ದರೆ ಇದು ಉತ್ತಮ ಸಮಯವಾಗಿದೆ.
ಹೌದು, ವಿಶೇಷವಾದ ಉತ್ತಮ ಫೀಚರ್ಸ್ ಆಯ್ಕೆ ಇರುವ ಹೊಸ ಟ್ಯಾಬ್ಲೆಟ್ ಖರೀದಿಸಲು ನೀವು ಯೋಜಿಸುತ್ತಿದ್ದರೆ. ಅದರಲ್ಲೂ ಐಪ್ಯಾಡ್‌ಗಿಂತ ಕಡಿಮೆ ಇರದ ಟ್ಯಾಬ್ಲೆಟ್ ಬೇಕು ಎಂದಾದರೆ ನಾವಿಲ್ಲಿ ತಿಳಿಸಿಕೊಟ್ಟಿರುವ ಡಿವೈಸ್ ಅನ್ನು ಖರೀದಿ ಮಾಡಬಹುದಾಗಿದೆ. ಇವುಗಳನ್ನು ನೀವು 25,000ರೂ. ಕ್ಕಿಂತ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು. ಈ ಎಲ್ಲಾ ಡಿವೈಸ್‌ಗಳು ಅಮೆಜಾನ್‌ನಲ್ಲಿ ವಿಶೇಷ ರಿಯಾಯಿತಿ ಪಡೆದಿದ್ದು, ಬ್ಯಾಂಕ್ ಆಫರ್ ಸಹ ಇದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಡಿವೈಸ್‌ಗಳು ಲಭ್ಯ ಇವೆ ಎಂಬುದನ್ನು.

ಶಿಯೋಮಿ ಪ್ಯಾಡ್ 6: ಶಿಯೋಮಿ ಪ್ಯಾಡ್ 6 (Xiaomi Pad 6) ಅನ್ನು ನೀವು ಆಫರ್ ಬೆಲೆ 24,999ರೂ.ಗಳಿಗೆ ಖರೀದಿ ಮಾಡಬಹುದು. ಅಮೆಜಾನ್‌ನಲ್ಲಿ 39,999ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಇನ್ನು ಈ ಡಿವೈಸ್ ಅನ್ನು ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಲು ಅನುವು ಮಾಡಿಕೊಡಲಾಗಿದೆ. ಅಂದರೆ ತಿಂಗಳಿಗೆ 1212ರೂ.ಗಳನ್ನು ಪಾವತಿ ಮಾಡುವ ಮೂಲಕ ನಿಮ್ಮದಾಗಿಸಿಕೊಳ್ಳಬಹುದು. ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ 1250ರೂ. ವರೆಗೆ ರಿಯಾಯಿತಿ ಸಹ ಪಡೆಯಲಿದ್ದಾರೆ.
ಈ ಶಿಯೋಮಿ ಪ್ಯಾಡ್ 11 ಇಂಚಿನ 2.8K ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದಕ್ಕೆ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಬೆಂಬಲ ಇದ್ದು, ಈ ಮೂಲಕ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಮತ್ತು 12 ಮೆಗಾಪಿಕ್ಸೆಲ್ ರಿಯಲ್ ಕ್ಯಾಮೆರಾ ಆಯ್ಕೆ ಪಡೆದಿದೆ.

ಒನ್‌ಪ್ಲಸ್ ಪ್ಯಾಡ್ ಗೋ: ಈ ಡಿವೈಸ್ (OnePlus Pad Go) ಅನ್ನು 23,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಅನ್ನು ತಿಂಗಳಿಗೆ 1164 ರೂ.ಗಳ ಇಎಮ್‌ಐ ಪಾವತಿ ಮಾಡುವ ಮೂಲಕವೂ ಖರೀದಿ ಮಾಡಬಹುದಾಗಿದೆ. ಜೊತೆಗೆ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ 2000ರೂ. ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ವಿನಿಮಯ ಅಫರ್‌ನಲ್ಲಿ 22,550ರೂ. ವರೆಗೆ ಉಳಿತಾಯ ಮಾಡಬಹುದು.
ಈ ಒನ್‌ಪ್ಲಸ್ ಪ್ಯಾಡ್ ಗೋ 11.35 ಇಂಚಿನ 2.4K ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಮೀಡಿಯಾಟೆಕ್ ಹಿಲಿಯೋ G99 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 8000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.
ಲೆನೊವೊ ಟ್ಯಾಬ್ P11 ಪ್ಲಸ್: ಈ ಟ್ಯಾಬ್ (Lenovo Tab P11 Plus) ಅನ್ನು ನೀವು ಅಮೆಜಾನ್‌ನಲ್ಲಿ 23,999 ರೂ.ಗಳಿಗೆ ಖರೀದಿ ಮಾಡಬಹುದು. ಇದರಲ್ಲೂ ಸಹ ಇಎಮ್‌ಐ ಆಯ್ಕೆ ಲಭ್ಯ ಇದ್ದು, ತಿಂಗಳಿಗೆ 1164ರೂ.ಗಳನ್ನು ಪಾವತಿ ಮಾಡಬಹುದಾಗಿದೆ. ಜೊತೆಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ 1250ರೂ. ವರೆಗೆ ರಿಯಾಯಿತಿ ಹಾಗೂ ವಿನಿಮಯ ಆಫರ್‌ನಲ್ಲಿ 22,550 ರೂ.ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಈ ವಿಶೇಷ ಟ್ಯಾಬ್ 11 ಇಂಚಿನ 2K ಡಿಸ್‌ಪ್ಲೇ ಆಯ್ಕೆ ಪಡೆಯುವ ಮೂಲಕ ಉತ್ತಮ ಎನಿಸಿದೆ. ಹಾಗೆಯೇ ಮೀಡಿಯಾಟೆಕ್ ಹಿಲಿಯೋ G90T ಪ್ರೊಸೆಸರ್ ಬಲದೊಂದಿಗೆ , 6GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಉಳಿದಂತೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ 7700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.


Click it and Unblock the Notifications








