DTH ಗ್ರಾಹಕರೇ ಗಮನಿಸಿ..ಈ ಮೊತ್ತಕ್ಕೆ ನಿಮಗೆ 80 ಚಾನೆಲ್ ಲಭ್ಯ!
ಟಾಟಾ ಸ್ಕೈ ಇತ್ತೀಚಿಗೆ ಟಾಟಾ ಪ್ಲೇ ಆಗಿ ಬದಲಾಗಿರುವುದು ನಿಮಗೆ ತಿಳಿದೆ ಇದೆ. ಇನ್ನು ಮಾರುಕಟ್ಟೆಯಲ್ಲಿ ಟಾಟಾ ಪ್ಲೇ ಪ್ರಮುಖ DTH ಸೇವಾ ಪೂರೈಕೆದಾರ ಸಂಸ್ಥೆಯಾಗಿ ಕಾಣಿಸಿಕೊಂಡಿದೆ. ರೀ ಬ್ರ್ಯಾಂಡ್ ಆದ ಬಳಿಕವು ತನ್ನ ಗ್ರಾಹಕರಿಗೆ ಅತ್ಯುತ್ತಮ ಆಫರ್ ಹಾಗೂ ಸೇವೆಗಳನ್ನು ಮುಂದುವರಿಸಿದೆ. ಕೆಲವು ಚಾನೆಲ್ ಪ್ಯಾಕ್ ಅಂತೂ ಗ್ರಾಹಕರಿಗೆ ಆಕರ್ಷಕ ದರದಲ್ಲಿ ಲಭ್ಯ.
ಹೌದು, ಡಿಟಿಎಚ್ ದಿಗ್ಗಜ ಟಾಟಾ ಪ್ಲೇ ತನ್ನ ಗ್ರಾಹಕರಿಗೆ ಭಿನ್ನ ಚಾನೆಲ್ ಪ್ಯಾಕ್ ಲಭ್ಯ ಮಾಡಿದ್ದು, ಕೆಲವೊಂದು ಓಟಿಟಿ ಸೌಲಭ್ಯದ ಯೋಜನೆಗಳು ಸಹ ಇವೆ. ಪ್ರಸ್ತುತ ಸಂಸ್ಥೆಯು ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಇತರೆ ಜನಪ್ರಿಯ ಓಟಿಟಿ ಒಳಗೊಂಡಂತೆ ತನ್ನ ಟಾಟಾ ಪ್ಲೇ ಬಿಂಜ್ ಪ್ಲೇ ಸೇವೆಯೊಂದಿಗೆ 13 ಓಟಿಟಿ ಆಪ್‌ಗಳ ಸೇವೆ ಹೊಂದಿದೆ.

ಟಾಟಾ ಪ್ಲೇ ಸಂಸ್ಥೆಯು ಸುಮಾರು 300ರೂ. ಒಳಗೆ ಪ್ರಾದೇಶಿಕವಾರು ಕೆಲವು ಆಕರ್ಷಕ ಚಾನೆಲ್ ಪ್ಯಾಕ್ ರೀಚಾರ್ಜ್ ಆಯ್ಕೆ ನೀಡಿದೆ. ಕನ್ನಡ ಚಾನೆಲ್ ಪ್ಯಾಕ್ ಸಹ ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಲಭ್ಯ ಇದೆ. ಹಾಗಾದರೆ ಟಾಟಾ ಪ್ಲೇ ಡಿಟಿಎಚ್ ಸಂಸ್ಥೆಯ ಚಾನೆಲ್ ಪ್ಯಾಕ್‌ಗಳ ರೀಚಾರ್ಜ್ ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.
ಕನ್ನಡ ಸ್ಪೋರ್ಟ್ಸ್ ಕಿಡ್ಸ್ DTH ಪ್ಲ್ಯಾನ್ ಮಾಹಿತಿ :
ಟಾಟಾ ಪ್ಲೇ ಸಂಸ್ಥೆಯ ಈ ಕನ್ನಡ ಸೂಪರ್ ವ್ಯಾಲ್ಯೂ ಸ್ಪೋರ್ಟ್ಸ್ ಕಿಡ್ಸ್ ಪ್ಲಾನ್ ಬೆಲೆಯು 261.91ರೂ. ಆಗಿದ್ದು, ಈ ರೀಚಾರ್ಜ್ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿ ಅನ್ನು ಪಡೆದಿದೆ. ಕನ್ನಡ ಸೂಪರ್ ವ್ಯಾಲ್ಯೂ ಸ್ಪೋರ್ಟ್ಸ್ ಕಿಡ್ಸ್ ಪ್ಯಾಕ್ ಪ್ಯಾಕೇಜ್ ಒಟ್ಟು 80 ಚಾನಲ್‌ಗಳನ್ನು ಒಳಗೊಂಡಿದೆ. ಈ ಪ್ಯಾಕ್‌ನಲ್ಲಿ ಗ್ರಾಹಕರಿಗೆ 12 ಕನ್ನಡ ಚಾನಲ್‌ಗಳು, 5 ಜ್ಞಾನ ಮತ್ತು ಜೀವನಶೈಲಿ ಚಾನಲ್‌ಗಳು, 4 ಮಕ್ಕಳ ಚಾನಲ್‌ಗಳು ಮತ್ತು ಇತರೆ ಚಾನೆಲ್‌ಗಳು ಲಭ್ಯ ಆಗುತ್ತವೆ.
ಕನ್ನಡ ಧಮಾಲ್ ಹೆಚ್‌ಡಿ DTH ಪ್ಲ್ಯಾನ್ ಮಾಹಿತಿ :
ಹಾಗೆಯೇ ಟಾಟಾ ಪ್ಲೇ ಸಂಸ್ಥೆಯ ಈ ಕನ್ನಡ ಧಮಾಲ್ ಎಚ್‌ಡಿ ಪ್ಯಾಕ್ ಬೆಲೆಯು ತಿಂಗಳಿಗೆ 273.42 ರೂ. ಆಗಿದೆ. ಈ ಯೋಜನೆಯು ಒಟ್ಟು 51 ಚಾನಲ್‌ಗಳ ಸೌಲಭ್ಯ ಪಡೆದಿದೆ. ಇದರಲ್ಲಿ 16 ಹೆಚ್‌ಡಿ ಚಾನಲ್‌ಗಳು ಮತ್ತು 35 ಎಸ್‌ಡಿ ಚಾನಲ್‌ಗಳನ್ನು ಒಳಗೊಂಡಿದೆ. ಈ ಪ್ಯಾಕ್‌ನಲ್ಲಿ 12 ಕನ್ನಡ ವಾಹಿನಿಗಳು, 9 ಹಿಂದಿ ಸುದ್ದಿಗಳು, 4 ಹಿಂದಿ ಮನರಂಜನಾ ಚಾನೆಲ್‌ಗಳು ಮತ್ತು ಇತರೆ ಕೆಲವು ಚಾನೆಲ್ ಲಭ್ಯ.
ಹಿಂದಿ ಧಮಾಲ್ ಪ್ಯಾಕ್ DTH ಯೋಜನೆ ಮಾಹಿತಿ :
ಟಾಟಾ ಪ್ಲೇ ಕಂಪನಿಯ ಹಿಂದಿ ಧಮಾಲ್ ಪ್ಯಾಕ್ ಬೆಲೆಯು 200.3 ರೂ. ಆಗಿದ್ದು, ಈ ಯೋಜನೆಯು 1 ತಿಂಗಳ ವ್ಯಾಲಿಡಿಟಿ ಪಡೆದಿದೆ. ಈ ಪ್ಯಾಕ್ ಒಟ್ಟು 92 ಚಾನಲ್ ಒಳಗೊಂಡಿದ್ದು, ಜನಪ್ರಿಯ ಚಾನೆಲ್‌ಗಳು 15 ಹಿಂದಿ ಮನರಂಜನಾ ಚಾನಲ್‌ಗಳು, 15 ಹಿಂದಿ ಚಲನಚಿತ್ರ ಚಾನೆಲ್‌ಗಳು, 10 ಹಿಂದಿ ಸುದ್ದಿಗಳು, 6 ಕ್ರೀಡೆಗಳು, 10 ಜ್ಞಾನ ಮತ್ತು ಜೀವನಶೈಲಿ, 8 ಕಿಡ್ಸ್ ಚಾನೆಲ್‌ಗಳನ್ನು ಕೂಡಾ ಒಳಗೊಂಡಿವೆ.
ಹಿಂದಿ ಸೂಪರ್ ವ್ಯಾಲ್ಯೂ ಹೆಚ್‌ಡಿ DTH ಯೋಜನೆ ಮಾಹಿತಿ :
ಟಾಟಾ ಪ್ಲೇ ಕಂಪನಿಯ ಹಿಂದಿ ಸೂಪರ್ ವ್ಯಾಲ್ಯೂ ಹೆಚ್‌ಡಿ DTH ಯೋಜನೆ ಬೆಲೆ 160.46 ರೂ. ಆಗಿದ್ದು, ಇದೂ ಸಹ ಒಂದು ತಿಂಗಳ ವ್ಯಾಲಿಡಿಟಿ ಅನ್ನು ಪಡೆದುಕೊಂಡಿದೆ. ಇದರೊಂದಿಗೆ, ಗ್ರಾಹಕರು ಹೆಚ್‌ಡಿಯಲ್ಲಿ 10 ಚಾನಲ್‌ಗಳನ್ನು ಮತ್ತು ಎಸ್‌ಡಿ ಕ್ವಾಲಿಟಿಯಲ್ಲಿ 39 ಚಾನಲ್‌ಗಳ ಸೇವೆ ಪಡೆಯಬಹುದಾಗಿದೆ. ಈ ಪ್ಯಾಕ್ ಒಟ್ಟು 49 ಚಾನಲ್ ಗುಚ್ಛವಾಗಿದೆ. 9 ಹಿಂದಿ ಮನರಂಜನಾ ಚಾನೆಲ್‌ಗಳು, 12 ಹಿಂದಿ ಸಿನಿಮಾ ಚಾನೆಲ್‌ಗಳು, 10 ಹಿಂದಿ ನ್ಯೂಸ್ ಚಾನೆಲ್‌ಗಳು ಮತ್ತು ಇತರೆ ಚಾನೆಲ್ ಒಳಗೊಂಡಿವೆ.


Click it and Unblock the Notifications








