Home
ಸುದ್ದಿಜಾಲ

Electric Blankets: ಮೈಕೊರೆಯುವ ಚಳಿಯೇ?.. ಚಿಂತೆ ಬೇಡ ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಬ್ಲಾಂಕೆಟ್ಸ್‌! ಬೆಲೆ, ಫೀಚರ್ಸ್ ತಿಳಿಯಿರಿ

ಚಳಿಗಾಲ ಆರಂಭ ಆಗಿದ್ದು, ಈ ಮೂಲಕ ಹಲವಾರು ಜನರು ನಿದ್ರೆ ಇಲ್ಲದ ರಾತ್ರಿ ಕಳೆಯುವುದುಂಟು. ಅದಾಗ್ಯೂ ಚಳಿ ಎಂದುಕೊಂಡು ಹೆಚ್ಚಿನ ಅಥವಾ ದಪ್ಪ ಇರುವ ಬ್ಲಾಂಕೆಟ್ಸ್‌ ಹೊದ್ದುಕೊಂಡರೆ ಉಸಿರಾಟ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನೀವು ಎದುರಿಸಿರಬಹುದು. ಆದರೆ ಚಳಿಗಾಲದಲ್ಲಿ ಚಳಿಯ ಜೊತೆಗೆ ಎಲ್ಲಾ ರೀತಿಯ ಸಮಸ್ಯೆಗಳಿಗೂ ಮುಕ್ತಿಯಾಡಲಿವೆ ಈ ಎಲೆಕ್ಟ್ರಿಕ್ ಬ್ಲಾಂಕೆಟ್ಸ್‌ಗಳು.

ಹೌದು, ಎಲೆಕ್ಟ್ರಿಕ್ ಬ್ಲಾಂಕೆಟ್ಸ್‌ (Electric blankets) ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಈ ಮೂಲಕ ಜನರು ಎಂತಹ ಚಳಿ ಇದ್ದರೂ ಸಹ ಎಂದಿನಂತೆ ನಿದ್ದೆ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್ ಇರುವ ಬ್ಲಾಂಕೆಟ್ಸ್‌ ಲಭ್ಯ ಇದ್ದು, ವಿವಿಧ ಬೆಲೆಗಳ ವಿಭಾಗದಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ನೀವು ಸಹ ಈ ಕೊರೆಯುವ ಚಳಿಗೆ ಬೇಸತ್ತಿದ್ದರೆ ಇಲ್ಲಿ ನೀಡಲಾದ ಅತ್ಯುತ್ತಮವಾದ ಬ್ಲಾಂಕೆಟ್ಸ್‌ ಅನ್ನು ಖರೀದಿ ಮಾಡಬಹುದು. ಹಾಗಿದ್ರೆ ಯಾವೆಲ್ಲಾ ಬ್ಲಾಂಕೆಟ್ಸ್‌ಗಳು ಉತ್ತಮ ಎನಿಸಿವೆ?, ಏನೆಲ್ಲಾ ಫೀಚರ್ಸ್‌ ಪಡೆದಿವೆ?, ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೈಕೊರೆಯುವ ಚಳಿಯೇ?.. ಚಿಂತೆ ಬೇಡ ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಬ್ಲಾಂಕೆಟ್ಸ್‌!

EXCLUZO ಹೀಟೆಡ್ ಬ್ಲಾಂಕೆಟ್: ಈ ಬ್ಲಾಂಕೆಟ್ 50×60 ಇಂಚಿನ ಸುತ್ತಳತೆ ಹೊಂದಿದ್ದು, 60S ಫಾಸ್ಟ್ ಹೀಟಿಂಗ್ ತಂತ್ರಜ್ಞಾನದೊಂದಿಗೆ ಕಾಣಿಸಿಕೊಂಡಿದೆ. ಇದನ್ನು ಫ್ಲಾನೆಲ್ ಸೂಪರ್-ಸಾಫ್ಟ್ ಫ್ಯಾಬ್ರಿಕ್ ನಿಂದ ನಿರ್ಮಾಣ ಮಾಡಲಾಗಿದ್ದು, ಆರು ಭಿನ್ನ ತಾಪಮಾನ ಸೆಟ್ಟಿಂಗ್‌ ಆಯ್ಕೆಯನ್ನು ಪಡೆದಿದೆ. ಇದರೊಂದಿಗೆ LED ನಿಯಂತ್ರಕದೊಂದಿಗೆ 8 ಗಂಟೆಗಳ ಟೈಮರ್ ಆಯ್ಕೆ ಇದ್ದು, ಪ್ರಮುಖ ಸುರಕ್ಷತಾ ಫೀಚರ್ಸ್‌ ಅನ್ನು ಪಡೆದಿದೆ. ಇದನ್ನು ನೀವು ಮೂವತ್ತು ಸಾವಿರದ ಆಸುಪಾಸಿನಲ್ಲಿ ಖರೀದಿ ಮಾಡಬಹುದು.

ಮೈಕೊರೆಯುವ ಚಳಿಯೇ?.. ಚಿಂತೆ ಬೇಡ ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಬ್ಲಾಂಕೆಟ್ಸ್‌!

ಹೀಟೆಡ್ ಎಲೆಕ್ಟ್ರಿಕ್ ಬ್ಲಾಂಕೆಟ್ ಫ್ಲಾನೆಲ್ ಆಂಡ್‌ ಶೆರ್ಪಾ ರಿವರ್ಸಿಬಲ್: 50 x 60 ಇಂಚಿನ ಬ್ಲಾಂಕೆಟ್ ಇದಾಗಿದ್ದು, ಸಮರ್ಥ ತಾಪನ ತಂತ್ರಜ್ಞಾನದೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ ಇದನ್ನು ಸಾಫ್ಟ್ ಫ್ಲಾನೆಲ್ ಮತ್ತು ಶೆರ್ಪಾ ದಿಂದ ತಯಾರು ಮಾಡಲಾಗಿದ್ದು, ನಾಲ್ಕು ಭಿನ್ನ ತಾಪಮಾನ ಸೆಟ್ಟಿಂಗ್‌ ಆಯ್ಕೆ ಪಡೆದಿದೆ. ಇನ್ನು ಆಟೋ ಆಫರ್ ಫೀಚರ್ಸ್‌ ಆಯ್ಕೆ ಸಹ ಇದ್ದು, ಇದಕ್ಕಾಗಿ ಸುರಕ್ಷತೆಗಾಗಿ 3 ಗಂಟೆಗಳ ಟೈಮರ್ ಸೌಲಭ್ಯ ಪಡೆದಿದೆ. ಇದರೊಂದಿಗೆ PTC ಮತ್ತು NTC ತಾಪನ ತಂತ್ರಜ್ಞಾನವನ್ನು ಇದು ಬಳಕೆ ಮಾಡುತ್ತದೆ. ಈ ಬ್ಲಾಂಕೆಟ್‌ ಅನ್ನು ಹತ್ತು ಸಾವಿರ ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಮೈಕೊರೆಯುವ ಚಳಿಯೇ?.. ಚಿಂತೆ ಬೇಡ ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಬ್ಲಾಂಕೆಟ್ಸ್‌!

ಸ್ಟಾಲ್ವಾರ್ಟ್ 75-BP1011 ಎಲೆಕ್ಟ್ರಿಕ್ ಬ್ಲಾಂಕೆಟ್‌: ಈ ಬ್ಲಾಂಕೆಟ್‌ 59 ಇಂಚು ಉದ್ದ ಹಾಗೂ 43 ಇಂಚು ಅಗಲ ಹೊಂದಿದ್ದು, 12 ವೋಲ್ಟ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಇದು ಹಗುರವಾದ ಬ್ಲಾಂಕೆಟ್‌ ಆಗಿದ್ದು, ಕಾರಿನಲ್ಲಿ ಮಲಗುವವರಿಗೆ ಅಥವಾ ಇತರೆ ಯಾವುದೇ ವಾಹನದಲ್ಲಿ ಮಲಗುವವರಿಗೆ ಅತ್ಯುತ್ತಮ ಬ್ಲಾಂಕೆಟ್‌ ಆಗಿದೆ. ಉಣ್ಣೆಯ ವಸ್ತುವಿನಿಂದ ಇದನ್ನು ನಿರ್ಮಾಣ ಮಾಡಲಾಗಿದ್ದು, ಮೃದುವಾದ ಅನುಭವ ಸಿಗಲಿದೆ. ಇದನ್ನು ನೀವು ಏಳುಸಾವಿರದ ಆಸಿಪಾಸಿನಲ್ಲಿ ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ.

ವಿಂಟರ್ ಕೇರ್ ಆಟೋಮ್ಯಾಟಿಕ್‌ ಡಬಲ್ ಬೆಡ್ ಎಲೆಕ್ಟ್ರಿಕ್ ಬ್ಲಾಂಕೆಟ್: ಈ ಬ್ಲಾಂಕೆಟ್‌ ತಾಪಮಾನ ಸೆಟ್ಟಿಂಗ್‌ಗಾಗಿ ಡಿಜಿಟಲ್ ನಿಯಂತ್ರಕವನ್ನು ಹೊಂದಿದ್ದು, ಕೌಂಟ್‌ಡೌನ್ ಟೈಮರ್, ಆಟೋಮ್ಯಾಟಿಕ್ ಶಟ್-ಆಫ್, ಪ್ರೊಗ್ರಾಮೆಬಲ್ ಫೀಚರ್ಸ್‌ ಆಯ್ಕೆ ಪಡೆದಿದೆ. ಇದನ್ನು ಮನೆಯಲ್ಲೇ ಬಟ್ಟೆಯ ರೀತಿಯಲ್ಲೇ ತೊಳೆಯಬಹುದಾಗಿದ್ದು, 100 % ಸುರಕ್ಷತೆಯನ್ನು ಖಾತರಿಪಡಿಸುತ್ತದೆ. ಇದು ಪಾಲಿಯೆಸ್ಟರ್ ಬ್ಲಾಂಕೆಟ್‌ ಆಗಿದೆ. ಇದನ್ನು ನೀವು ಎಂಟು ಸಾವಿರ ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಮೈಕೊರೆಯುವ ಚಳಿಯೇ?.. ಚಿಂತೆ ಬೇಡ ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಬ್ಲಾಂಕೆಟ್ಸ್‌!

ಒಡೆಸ್ಸಿ ಎಲೆಕ್ಟ್ರಿಕ್ ಬ್ಲಾಂಕೆಟ್ ಡಬಲ್ ಬೆಡ್‌ : ಈ ಬ್ಲಾಂಕೆಟ್‌ ಅನ್ನು ಉಣ್ಣೆಯಿಂದ ತಯಾರು ಮಾಡಲಾಗಿದ್ದು, ಟೆಫ್ಲಾನ್ ಲೇಪಿತ ವೈರಿಂಗ್, ಓವರ್‌ ಹೀಟ್‌ ಸೇರಿದಂತೆ ಅನೇಕ ಸುರಕ್ಷತಾ ಫೀಚರ್ಸ್‌ ಆಯ್ಕೆ ಪಡೆದಿದೆ. ಇದರೊಂದಿಗೆ ನಾಲ್ಕು ಹೊಂದಾಣಿಕೆಯ ಹೀಟ್‌ ಸೆಟ್ಟಿಂಟ್‌ ಆಯ್ಕೆ ಇದ್ದು, ಇದು ಕೆಲವು ಆರೋಗ್ಯ ಸಂಬಂಧಿ ಪರಿಹಾರಕ್ಕೂ ಸಹಾಯಕವಾಗಿದೆ. ಅದರೆ ಕುತ್ತಿಗೆ, ಕಾಲು ಮತ್ತು ಗರ್ಭಕಂಠದ ನೋವು ನಿವಾರಣೆಗೆ ಸೂಕ್ತವಾಗಿದೆ. ಈ ಬ್ಲಾಂಕೆಟ್‌ ಅನ್ನು ಕೇವಲ ಐದು ಸಾವಿರ ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Electric blankets are gaining popularity these days. Through this people are sleeping as usual no matter how cold it is and maintaining good health.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+