ಮೊಬೈಲ್ ಕ್ಯಾಮೆರಾದಲ್ಲಿ ಈ ಲೆನ್ಸ್ ಇದ್ರೆ, ಅದ್ಭುತವಾಗಿ ಫೋಟೋ ಸೆರೆಹಿಡಿಯಬಹುದು!
ಅನೇಕರಿಗೆ ಸದ್ಯ ಸ್ಮಾರ್ಟ್‌ಫೋನ್ ಬಿಟ್ಟಿರಲಾದರ ಅನಿವಾರ್ಯತೆ ಇದೆ ಎಂದರೆ ತಪ್ಪಾಗಲಾರದು. ಹಲವು ಕಾರಣ ಮತ್ತು ಅನುಕೂಲತೆಗಾಗಿ ಫೋನ್ ಅಗತ್ಯ ಸಾಧನವಾಗಿದೆ. ಇನ್ನು ಫೋಟೋಗ್ರಾಫಿ ಪ್ರಿಯರು ಹಾಗೂ ಆಸಕ್ತರು ಫೋನ್‌ಗಳಲ್ಲಿ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಬಯಸುತ್ತಾರೆ. ಹೀಗಾಗಿ ಫೋನ್ ಖರೀದಿಸುವಾಗಲು ಅವರು ಕ್ಯಾಮೆರಾ ಲೆನ್ಸ್ ಅಥವಾ ಸೆನ್ಸಾರ್ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ.
ಹೌದು, ಬಹುತೇಕರು ಹೊಸದಾಗಿ ಫೋನ್ ಖರೀದಿ ಮಾಡುವಾಗ ಕ್ಯಾಮೆರಾ ವಿಭಾಗಕ್ಕೆ ಆದ್ಯತೆ ನೀಡತ್ತಾರೆ. ಫೋಟೋಗ್ರಫಿಗಾಗಿಯೇ ಕೆಲವು ಫೋನ್‌ಗಳ ಅತ್ಯುತ್ತಮ ಜೂಮ್ ಆಯ್ಕೆ, ವೈಲ್ಡ್ ಆಂಗಲ್, ಮೈಕ್ರೋ ಲೆನ್ಸ್, ಅಲ್ಟ್ರಾ ವೈಲ್ಡ್ ಆಂಗಲ್ ಆಯ್ಕೆಗಳನ್ನು ಒಳಗೊಂಡಿವೆ. ಅಧಿಕ ಸೆನ್ಸಾರ್ ಸಾಮರ್ಥ್ಯ ಜೊತೆಗೆ ಇಂತಹ ಫೋನ್‌ಗಳನ್ನು ಫೋಟೋಗ್ರಫಿ ಫೋನ್ ಪ್ರಿಯರು ಇಷ್ಟಪಡುತ್ತಾರೆ. ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿರುವ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಲ್ಟ್ರಾ ವೈಲ್ಡ್ ಆಂಗಲ್ ಮತ್ತು ವೈಡ್ ಆಂಗಲ್ ವ್ಯತ್ಯಾಸ ಏನು?
ಮೊಬೈಲ್ ಕ್ಯಾಮೆರಾದಲ್ಲಿ ವೈಡ್ ಆಂಗಲ್ ಲೆನ್ಸ್ 90 ಡಿಗ್ರಿ ಅಥವಾ ಅದಕ್ಕಿಂತ ಕಡಿಮೆ ವೀಕ್ಷಣೆಯ ವ್ಯಾಪ್ತಿ ಒಳಗೊಂಡಿರುತ್ತದೆ. ಅದೇ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ 90 ಡಿಗ್ರಿಗಿಂತ ಅಧಿಕ ವೀಕ್ಷಣೆಯ ವಲಯವನ್ನು ಹೊಂದಿದ್ದು, ಒಂದು ಫ್ರೇಮ್‌ನಲ್ಲಿ ಹೆಚ್ಚಿನ ದೃಶ್ಯವನ್ನು ಕವರ್ ಮಾಡಲು ನೆರವು ಮಾಡಿಕೊಡುತ್ತದೆ. ವಿಶಾಲವಾದ ತೆರೆದ ಸ್ಥಳಗಳನ್ನು ಸೆರೆಹಿಡಿಯಲು ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಉಪಯುಕ್ತ ಎನಿಸುತ್ತವೆ.
ಐಫೋನ್ 14 ಪ್ರೊ ಫೋನ್ : ಇದು 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, A16 ಬಯೋನಿಕ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 48 ಮೆಗಾಪಿಕ್ಸಲ್ ಸೆನ್ಸಾರ್ ಪಡೆದಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 12 ಮೆಗಾಪಿಕ್ಸಲ್ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ.
ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ 120 ಡಿಗ್ರಿ ವ್ಯೂ ಕವರೇಜ್ ಮಾಡಲಿದೆ. ಹಾಗೆಯೇ ತೃತೀಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಪೋರ್ಟ್ರೆಟ್ ಮೊಡ್, ನೈಟ್ ಮೋಡ್, ಪನೋರಮಾ ಮೋಡ್ ಆಯ್ಕೆಗಳನ್ನು ಪಡೆದಿದೆ. 4K ವಿಡಿಯೋ ರೇಕಾರ್ಡಿಂಗ್, ಸ್ಲೋ ಮೋಷನ್, ಸಿನಿಮಾಟಿಕ್ ಮೋಡ್ ನಂತಹ ಫೀಚರ್ಸ್ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ : ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಮೊಬೈಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಪ್ರಾಥಮಿಕ ಕ್ಯಾಮೆರಾ 200 ಮೆಗಾಪಿಕ್ಸೆಲ್ ವೈಡ್ ಲೆನ್ಸ್ ಅನ್ನು ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಪಡೆದುಕೊಂಡಿದೆ. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 10 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿವೆ. ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.
ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್ 6.8 ಇಂಚಿನ QHD+ ಡೈನಾಮಿಕ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್ ಅನ್ನು ಪಡೆದಿದೆ. ಅಲ್ಲದೇ ಆಂಡ್ರಾಯ್ಡ್ 13 ಒನ್ UI 5.1 ಸಪೋರ್ಟ್ ನೊಂದಿಗೆ ಕಾರ್ಯನಿರ್ವಹಿಸಲಿದೆ.
ಗೂಗಲ್ ಪಿಕ್ಸೆಲ್ 7 ಪ್ರೊ : ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದೆ. ಇನ್ನು ಪಿಕ್ಸೆಲ್ 7 ಪ್ರೊ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಸೆಕೆಂಡರಿ ಕ್ಯಾಮೆರಾವು 48 ಮೆಗಾಪಿಕ್ಸಲ್ ಟೆಲಿಫೋಟೋ ಲೆನ್ಸ್ ಇದ್ದು, ತೃತೀಯ ಕ್ಯಾಮೆರಾ 12 ಮೆಗಾಪಿಕ್ಸಲ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಸೌಲಭ್ಯ ಪಡೆದಿದೆ.
ಈ ಮೊಬೈಲ್ ಮುಂಭಾಗದಲ್ಲಿ 10.8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, 30W ವೇಗದ ಚಾರ್ಜಿಂಗ್ ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ.


Click it and Unblock the Notifications








