WhatsApp Spy Apps : ಪೋಷಕರೇ...ನಿಮ್ಮ ಮಕ್ಕಳ ವಾಟ್ಸಾಪ್ ಮೇಲೆ ಹದ್ದಿನ ಕಣ್ಣಿಡಲು ಈ ಆಪ್ ಬಳಸಿ!
ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್ ಅಗ್ರಗಣ್ಯಸ್ಥಾನದಲ್ಲಿದ್ದು, ಈ ಮೂಲಕ ಬಳಕೆದಾರರು ವಿವಿಧ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಅದರಲ್ಲೂ ಕೇವಲ ಮೆಸೆಜ್ ಮಾಡಲು ಅಷ್ಟೇ ಅಲ್ಲದೆ ವಿಡಿಯೋಗಳನ್ನು ನೋಡಲು, ಸೆಂಡ್ ಮಾಡಲು, ವಿಡಿಯೋ ಹಾಗೂ ವಾಯ್ಸ್ ಕರೆ ಮಾಡಲು ಇದು ಅನುಮತಿಸುತ್ತದೆ. ಇಷ್ಟೆಲ್ಲಾ ಪ್ರಯೋಜನ ಇದರಲ್ಲಿ ಇದೆ ಅಂದಮೇಲೆ ನಿಮ್ಮ ಮಕ್ಕಳ ಮೊಬೈಲ್ ಅಥವಾ ನಿಮಗೆ ಅಗತ್ಯ ಎನಿಸುವವರ ವಾಟ್ಸಾಪ್ ಖಾತೆ ಮೇಲೆ ನಿಗಾ ಇಡುವುದು ಸಹ ಪ್ರಮುಖವಾದ ಕೆಲಸ.

ಹೌದು, ಸಾಮಾನ್ಯವಾಗಿ ಯಾರು ಯಾರದೇ ಖಾಸಗಿತನಕ್ಕೆ ಧಕ್ಕೆ ತರಬಾರದು. ಆದರೆ, ಪೋಷಕರು ಮಕ್ಕಳನ್ನು ಸರಿದಾರಿಗೆ ತರಲು ಅಥವಾ ತಮಾಷೆ ಉದ್ದೇಶದಿಂದ ನಿಮ್ಮ ಪ್ರೇಯಸಿ ಅಥವಾ ಪ್ರಿಯಕರ ಅವರ ವಾಟ್ಸಾಪ್ ನಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ಪತ್ತೆ ಮಾಡಲು ಆಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್ ಬಳಕೆದಾರರು ಈ ವಾಟ್ಸಾಪ್ ಸ್ಪೈ ಆಪ್‌ಗಳನ್ನು ಬಳಕೆ ಮಾಡಬಹುದು. ವಿಷಯ ಏನೆಂದರೆ ಇಲ್ಲಿ ಉಲ್ಲೇಖಿಸಲಾದ ಆಪ್‌ಗಳನ್ನು ಒಳ್ಳೆಯ ಉದ್ದೇಶಕ್ಕಷ್ಟೇ ಬಳಕೆ ಮಾಡಬೇಕು ಎಂಬುದು ನಿಮ್ಮ ಗಮನಕ್ಕೆ ಇರಲಿ.
uMobix
uMobix ಆಪ್ ಮೂಲ ಬಳಕೆದಾರರು ನಿಮ್ಮ ಮಕ್ಕಳ ಅಥವಾ ನಿಮಗೆ ಅಗತ್ಯ ಎನಿಸುವ ವ್ಯಕ್ತಿಗಳ ವಾಟ್ಸಾಪ್ ಖಾತೆಯನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ. ಅಂದರೆ ಖಾಸಗಿ ಸಂಭಾಷಣೆಗಳು ಮತ್ತು ಗ್ರೂಪ್ ಚಾಟ್‌ಗಳು ಸೇರಿದಂತೆ ನಿಮ್ಮ ಮಕ್ಕಳು ಸ್ವೀಕರಿಸಿದ ಮತ್ತು ಕಳುಹಿಸಿದ ಮೆಸೆಜ್‌ಗಳನ್ನು ನೋಡಲು ಇದು ಅನುಮತಿ ನೀಡುತ್ತದೆ. ಹಾಗೆಯೇ ನಿಮ್ಮ ಮಕ್ಕಳ ಫೋನ್‌ನಲ್ಲಿ ಸೇವ್ ಆಗಿರುವ ಸಂಪರ್ಕ ಪಟ್ಟಿಯನ್ನೂ ನೋಡಬಹುದು. ಈ ಮೂಲಕ ಅವರು ಯಾವ ರೀತಿ ಆರೋಗ್ಯಕರವಾಗಿ ಬೇರೆಯವರ ಜೊತೆ ಇದ್ದಾರೆ. ಇದರಿಂದ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ ಎಂಬುದನ್ನು ಈ ಮೂಲಕ ಅರಿತು ಮಕ್ಕಳಿಗೆ ಪೂರ್ವದಲ್ಲಿಯೇ ತಿಳಿ ಹೇಳಬಹುದು.

xMobi
ಇದೇ ರೀತಿಯ ಸೌಲಭ್ಯ ಕಲ್ಪಿಸುವ ಮತ್ತೊಂದು ಆಪ್ ಎಂದರೆ ಅದು xMobi. ಈ ಆಪ್ ಮೂಲಕ ವಾಟ್ಸಾಪ್‌ನ ಎಲ್ಲಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಇದನ್ನು ಪೋಷಕರು, ಉದ್ಯೋಗದಾತರು ಮತ್ತು ಇತರರು ಬಳಕೆ ಮಾಡಬಹುದಾಗಿದ್ದು, ಅಗತ್ಯ ಇರುವವರ ಮೇಲೆ ಕಣ್ಣಿಡಬಹುದು. ಅದರಂತೆ ಈ ಆಪ್ ಮೂಲಕ ಯಾವುದೇ ಮೆಸೆಜ್‌ಗಳನ್ನು ಓದಬಹುದು, ಕಳುಹಿಸಿದ ಹಾಗೂ ಸ್ವೀಕರಿಸಿದ ಮೀಡಿಯಾ ಫೈಲ್‌ಗಳನ್ನು ವೀಕ್ಷಣೆ ಮಾಡಬಹುದು. ಹಾಗೆಯೇ ನಿಮ್ಮ ಮಕ್ಕಳು ಅಥವಾ ನಿಮ್ಮ ಆಫೀಸಿನ ಉದ್ಯೋಗಿಗಳು ಯಾವುದೇ ಅನಗತ್ಯ ಚಟುವಟಿಕೆಯಲ್ಲಿ ತೊಡಗಿಲ್ಲ ಎಂಬುದನ್ನು ಈ ಮೂಲಕ ಖಚಿತಪಡಿಸಿಕೊಳ್ಳಬಹುದು.
mSpy
mSpy ಆಪ್ ಸಹ ತನ್ನದೇ ಆದ ವಿಶೇಷ ಫೀಚರ್ಸ್ ಅನ್ನು ಹೊಂದಿದ್ದು, ಇದನ್ನು ಪೋಷಕರು ಹೆಚ್ಚಾಗಿ ಬಳಕೆ ಮಾಡಬಹುದಾಗಿದೆ. ಯಾಕೆಂದರೆ ಮಕ್ಕಳು ಯಾರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದಾರೆ, ಆಟ-ಪಾಠದ ಕಡೆ ಎಷ್ಟು ಒಲವು ಹೊಂದಿದ್ದಾರೆ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳಬಹುದು. ಅದರಲ್ಲೂ GPS ಟ್ರ್ಯಾಕಿಂಗ್ ಮೂಲಕ ಯಾವ ಸಮಯದಲ್ಲಿ ಎಲ್ಲಿದ್ದರು. ಶಾಲೆಗೆ ಹೋಗುತ್ತಿದ್ದಾರಾ? ಅಥವಾ ಬೇರೆಲ್ಲೋ ಹೋಗಿದ್ದಾರಾ? ಎಂಬುದನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದಾಗಿದೆ. ಅದರಲ್ಲೂ ಈ ಆಪ್ ಆಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರರಿಗೂ ಬೆಂಬಲ ನೀಡಲಿದ್ದು, ಈ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.

eyeZy
EyeZy ಆಪ್ ಮೂಲಕ ನಿಮ್ಮ ಪ್ರೀತಿಪಾತ್ರರು ಹಾಗೂ ಮಕ್ಕಳ ಚಟುವಟಿಕೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಅದರಂತೆ ವಾಟ್ಸಾಪ್ ಸೇರಿದಂತೆ ಇತರ ಆಪ್‌ಗಳಲ್ಲಿ ಮಕ್ಕಳು ಯಾವೆಲ್ಲಾ ಚಟುವಟಿಕೆ ನಡೆಸುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಈ ಆಪ್ ಸಹಾಯಕ. ಹಾಗೆಯೇ GPS ಫೀಚರ್ಸ್ ಸಾಕಷ್ಟು ಪ್ರಯೋಜನ ನೀಡಲಿದ್ದು, ಮಗು ಅಥವಾ ಪ್ರೀತಿಪಾತ್ರರು ಯಾವುದೇ ನಿರ್ಬಂಧಿತ ಸ್ಥಳಕ್ಕೆ ಹೋದರೆ ಇದು ಎಚ್ಚರಿಕೆ ನೀಡುತ್ತದೆ.
Cocospy
Cocospy ಆಪ್ ಮೂಲಕವೂ ನಿಮ್ಮ ಮಕ್ಕಳ ಹಾಗೂ ನಿಮ್ಮ ಪ್ರೀತಿ ಪಾತ್ರರ ಆನ್‌ಲೈನ್ ಚಟುವಟಿಕೆಯನ್ನು ಕಂಡುಕೊಳ್ಳಬಹುದು. ಅಂತೆಯೇ ವಾಟ್ಸಾಪ್ ಮೂಲಕ ಕಳುಹಿಸಲಾದ ವಿಡಿಯೋಗಳು ಮತ್ತು ಫೋಟೋಗಳನ್ನು ಪೂರ್ವವೀಕ್ಷಿಸಲು ಮತ್ತು ಕ್ಯಾಲೆಂಡರ್ ಚಟುವಟಿಕೆಗಳನ್ನು ವೀಕ್ಷಿಸಲು ಈ ಆಪ್ ಬಳಕೆದಾರರಿಗೆ ಅನುಮತಿಸುತ್ತದೆ. ಇದರಿಂದಾಗಿ ನಿಮ್ಮ ಮಕ್ಕಳು ಯಾವುದೇ ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗುವುದಾಗಲೀ ಅಥವಾ ಇತರೆ ಅನಗತ್ಯ ವ್ಯಕ್ತಿಗಳ ಜೊತೆ ಸ್ನೇಹ ಸಂಬಂಧ ಬೆಳೆಸುವುದಾಗಲೀ ಇವೆಲ್ಲವುಗಳ ಬಗ್ಗೆ ಎಚ್ಚರಿಕೆ ವಹಿಸಬಹುದು.


Click it and Unblock the Notifications








