Just In
- 44 min ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 1 hr ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 3 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 3 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Movies
ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಚ್ಚರ..! ಆನ್‌ಲೈನ್‌ನಲ್ಲಿ ಇನ್ಮುಂದೆ ಈ ಚಟುವಟಿಕೆಗಳು ದೊಡ್ಡ ಅಪರಾಧ
ಇಂದು ನೆನ್ನೆಯ ಹಾಗೆ ಇರುತ್ತಿಲ್ಲ. ಯಾಕಂದ್ರೆ ಟೆಕ್ನಾಲಜಿಯೇ ಅಷ್ಟೊಂದು ಬದಲಾವಣೆಯನ್ನು ಜನರ ಜೀವನಲ್ಲಿ ಅಪ್‌ಡೇಟ್ ಮಾಡುತ್ತಿದೆ. ಟೋಟಲಿ ಅಡ್ವಾನ್ಸ್ ಲೈಫ್‌ಸ್ಟೈಲ್ ಇಂದು ಇದೆ. ಇಂದು ಇಂಟರ್ನೆಟ್, ಗೂಗಲ್, ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್, ಇತರೆ ಸಾಮಾಜಿಕ ತಾಣಗಳನ್ನು ಹೊರತುಪಡಿಸಿದ ದಿನವನ್ನು ನೆನಪಿಸಿಕೊಳ್ಳಲು ಆಗುವುದೇ ಇಲ್ಲ.
ಈ ಮೇಲಿನವುಗಳು ಕೆಲಸದ ಕಾರಣ ಬಳಕೆ ಆಗಬಹುದು, ಮನರಂಜನೆ ನಿಮಿತ್ತ, ಟೈಪ್ ಪಾಸ್'ಗಾಗಿ ಆಗಿರಬಹುದು. ಇಂದು ಟಿವಿ ಮುಂದೆ ಕುಳಿತು ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತಿದೆ, ಆಟದ ಮೈದಾನಕ್ಕೆ ಹೋಗಿ ಆಟವಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಓದಲು ಹಾರ್ಡ್‌ಕಾಪಿ ಬಳಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇವೆಲ್ಲದಕ್ಕೂ ಇಂಟರ್ನೆಟ್ ಈಗ ಮೂಲ ಪರಿಹಾರವಾಗಿದೆ.
ಪಿನ್ ನಂಬರ್ ಬದಲಿಸಿ ಎಲ್ಲಾ ಬ್ಯಾಂಕ್ ATM ಕಾರ್ಡ್‌ಗೂ ಒಂದೇ ಪಿನ್ ನಂಬರ್ ಬಳಕೆ ಹೇಗೆ?
ಇಂದು ಹಲವು ಇಂಟರ್ನೆಟ್ ಬಳಕೆದಾರರು ತಾವು ಆನ್‌ಲೈನ್‌ನಲ್ಲಿ ಏನೇ ಮಾಡಿದರು ತಪ್ಪಿಲ್ಲ ಎಂದು ತಿಳಿದಿದ್ದಾರೆ. ಆದರೆ ಅದು ತಪ್ಪು ಕಲ್ಪನೆ. ಹಲವು ಮಿತಿಗಳು, ಷರತ್ತು ಮತ್ತು ನಿಯಮಗಳು ಇಂದು ಆನ್‌ಲೈನ್ ಬಳಕೆದಾರರಿಗಿವೆ. ಹಲವು ಚಟುವಟಿಕೆಗಳು ಆನ್‌ಲೈನ್‌ನಲ್ಲಿ ಕಾನೂನು ಬಾಹಿರವಾಗಿದ್ದು, ಅಂತಹ ಚಟುವಟಿಕೆಗಳು ಯಾವುವು ಎಂದು ಮುಂದೆ ಓದಿ ತಿಳಿಯಿರಿ.

ಕೃತಿಸ್ವಾಮ್ಯ ವಸ್ತುಗಳು
ಇಂಟರ್ನೆಟ್‌ನಲ್ಲಿ ಇರುವ ಹಲವು ವಿಷಯಗಳು ಕೃತಿಸ್ವಾಮ್ಯವಾಗಿವೆ. ಆದರೆ ಹಲವರು ಈ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಇನ್ನೂ ಹಲವರು ತಮ್ಮ ದಿನನಿತ್ಯದ ಬ್ಯುಸಿನೆಸ್ ಪೂರ್ಣಗೊಳಿಸಲು ಟೊರೆಂಟ್ ಮೇಲೆ ಆಧಾರಿತವಾಗಿರುತ್ತಾರೆ. ಆದರೆ ಟೊರೆಂಟ್‌ನಲ್ಲೂ ಸಹ ಹಲವು ವಿಷಯಗಳನ್ನು ಡೌನ್‌ಲೋಡ್ ಮಾಡುವುದು ಕಾನೂನು ಬಾಹಿರವಾಗಿದೆ.
ಕೃತಿಸ್ವಾಮ್ಯ ವಸ್ತುಗಳು ಮಾಲೀಕರ ಅನುಮತಿ ಇಲ್ಲದೇ ಟೊರೆಂಟ್‌ನಲ್ಲಿ ಡೌನ್‌ಲೋಡ್ ಆಗುವುದಿಲ್ಲ. ಒಂದು ವೇಳೆ ಇತರರು ಡೌನ್‌ಲೋಡ್ ಆದ ಕೃತಿಸ್ವಾಮ್ಯ ವಸ್ತುಗಳಾದ ಸಿನಿಮಾಗಳು, ಹಾಡುಗಳು, ಇತರೆ ಮಾಹಿತಿಗಳನ್ನು ಶೇರ್ ಮಾಡಿದಲ್ಲಿ, ಅವರು, ಸ್ವೀಕರಿಸಿದವರು ಸಹ ಸಮಸ್ಯೆ ಎದುರಿಸಬೇಕಾಗುತ್ತದೆ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರೋಲಿಂಗ್ ಮತ್ತು ಡೂಡ್ಲಿಂಗ್ ಆಕ್ಷೇಪಾರ್ಹವಾಗಿದೆ
ಅಂದಹಾಗೆ ಸಾಮಾಜಿಕ ಜಾಲತಾಣ ಪೂರ್ಣವಾಗಿ ಟ್ರೋಲಿಂಗ್'ನಿಂದ ಕೂಡಿದೆ. ಪ್ರಖ್ಯಾತ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳು, ಸ್ನೇಹಿತರು, ಸೆಲೆಬ್ರಿಟಿಗಳ ಅಭಿಪ್ರಾಯವಿಲ್ಲದೇ ಅವರ ಕುರಿತು ಟ್ರೋಲಿಂಗ್ ಮಾಡುವುದು ಕಾನೂನು ಬಾಹಿರವಾಗಿದೆ. ಮನರಂಜನೆಗಾಗಿ ಮಾಡಿದ ಟ್ರೋಲಿಂಗ್ ಕಡೆಗೆ ಸಮಸ್ಯೆಗೆ ಸಿಲುಕಿಸಬಲ್ಲದು. ಅಲ್ಲದೇ ಮಾನನಷ್ಟ ಮೊಕದ್ದಮೆ ದೂರಿನಡಿ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಆನ್‌ಲೈನ್ ಬೆದರಿಕೆ ಕ್ರಿಮಿನಲ್ ಅಪರಾಧ
ಭಾರತ ದೇಶ ಇತ್ತೀಚೆಗೆ ಹಲವು ಸೈಬರ್ ದಾಳಿಗಳನ್ನು ಸಾಮಾಜಿಕ ತಾಣ ವೇದಿಕೆಯಲ್ಲಿ ನೋಡಿದೆ. ಇತ್ತೀಚೆಗೆ ಒಂದು ಹ್ಯಾಕರ್ ಗುಂಪು ಟ್ವಿಟರ್ ಖಾತೆ ಹ್ಯಾಕ್ ಮಾಡುವುದರೊಂದಿಗೆ ಬಳಕೆದಾರರಿಗೆ ನಿದ್ರೆ ರಹಿತ ರಾತ್ರಿ ಅನುಭವ ನೀಡಿತ್ತು. ಕೊನೆಗೂ ಈ ಗುಂಪನ್ನು ಅಧಿಕೃತವಾಗಿ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಎಂಡ್ ಟು ಎಂಡ್ ಗೂಢಲಿಪೀಕರಣ ಬಳಸುವ ಹಾಗೆ ಸಂದೇಶ ನೀಡಿದ್ದಂತು ನಿಜ.
ಆದರೆ ಇಂತಹ ಚಟುವಟಿಕೆಗಳಿಂದ ಪತ್ತೆ ಆದಲ್ಲಿ, ಸಮಸ್ಯೆಯಿಂದ ಪಾರಾಗಲು ಸಾಧ್ಯವೇ ಇಲ್ಲ. ಸೈಬರ್ ಅಪರಾಧಿಗಳ ಮೇಲೆ ಸದಾ ತನಿಖೆ ನಡೆಸಲಾಗುತ್ತಿದ್ದು, ಒಂದಲ್ಲಾ ಒಂದು ದಿನ ಕ್ರಿಮಿನಲ್ ಅಪರಾಧ ಎದುರಿಸಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ವಾಯ್ಸ್ ಅಥವಾ ವೀಡಿಯೊ ಕರೆ ರೆಕಾರ್ಡಿಂಗ್ ಕಾನೂನು ಬಾಹಿರ
ಆನ್‌ಲೈನ್‌ನಲ್ಲಿ ಸ್ನೇಹಿತರ ಅಥವಾ ಇತರೆ ವ್ಯಕ್ತಿಗಳ ವಾಯ್ಸ್ ಅಥವಾ ವೀಡಿಯೊ ಕರೆಗಳನ್ನು ಅವರ ಅನುಮತಿ ಇಲ್ಲದೇ ರೆಕಾರ್ಡ್ ಮಾಡುವುದು ಗಂಭೀರ ಅಪರಾಧ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕರೆ ರೆಕಾರ್ಡಿಂಗ್ ಮಾಡಲು ಹಲವು ಅಪ್ಲಿಕೇಶನ್‌ಗಳು ಇವೆ. ಇವುಗಳ ಸಹಾಯದಿಂದ ರೆಕಾರ್ಡ್ ಮಾಡಬಹುದು. ಆದರೆ ಅವರ ಅನುಮತಿ ಇಲ್ಲದೇ ರೆಕಾರ್ಡಿಂಗ್ ಮಾಡುವುದು ಮತ್ತು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡುವುದು ಕ್ರಿಮಿನಲ್ ಅಪರಾಧವಾಗಿದೆ. ಇಂತಹ ಚಟುವಟಿಕೆಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು.

ಫೇಕ್ ಗುರುತು ಮಾಹಿತಿ ನೀಡುವುದು
ಸಾಮಾಜಿಕ ಜಾಲತಾಣಗಳಲ್ಲಿ ಅಸಂಖ್ಯಾತ ಫೇಕ್ ಖಾತೆಗಳು ಉಂಟು. ಫೇಕ್ ಖಾತೆಗಳನ್ನು ಹೊಂದುವುದು ಸಹ ಆನ್‌ಲೈನ್ ಅಪರಾಧವಾಗಿದೆ. ಈ ಮಾಹಿತಿ ತನಿಖಾಧಿಕಾರಿಗಳಿಗೆ ತಿಳಿದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದರೆ ಕೆಲವರು ಪ್ರೊಫೈಲ್ ನಿಜವಾದದ್ದು ಅಲ್ಲ ಎನ್ನುವಂತೆ ಪ್ರದರ್ಶನವಾಗುತ್ತಿದ್ದರೂ ಫೂಲ್ ಆಗುವುದು ಸಾಮಾನ್ಯವಾಗಿದೆ.

ಇತರರ ಇಂಟರ್ನೆಟ್ ಸಂಪರ್ಕ ವ್ಯವಸ್ಥೆ ಬಳಸುವುದು
ಇತರರ ವೈಫೈ ನೆಟ್‌ವರ್ಕ್‌ಗೆ ಅವರ ಅನುಮತಿ ಇಲ್ಲದೇ ಸಂಪರ್ಕ ಪಡೆದು ಬಳಸುವುದು ಖಂಡಿತ ಅಪರಾಧವಾಗಿದೆ. ಅವರು ನಿಮ್ಮ ಮ್ಯಾಕ್ ವಿಳಾಸವನ್ನು ಪತ್ತೆ ಹಚ್ಚಿ ದೂರು ನೀಡಿದರೆ, ಕಾನೂನಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470