ಪಿನ್‌ ನಂಬರ್ ಬದಲಿಸಿ ಎಲ್ಲಾ ಬ್ಯಾಂಕ್‌ ATM ಕಾರ್ಡ್‌ಗೂ ಒಂದೇ ಪಿನ್‌ ನಂಬರ್ ಬಳಕೆ ಹೇಗೆ?

By Suneel
|

ಹಲವು ಜನರು ಒಂದಲ್ಲಾ ಅಂತ ಹಲವು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುತ್ತಾರೆ. ಹಲವು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದ ಮೇಲೆ ಹಲವು ಎಟಿಎಂ ಕಾರ್ಡ್‌(ಡೆಬಿಟ್‌ ಕಾರ್ಡ್‌) ಹೊಂದಿರುವುದರಲ್ಲಿ ಸಂಶಯವೇ ಬೇಡ. ಇಂತಹವರು ಎಲ್ಲಾ ಡೆಬಿಟ್‌ ಕಾರ್ಡ್‌ಗಳ ಪಿನ್‌ ನಂಬರ್‌ ಅನ್ನು ನೆನಪಿಟ್ಟುಕೊಳ್ಳುವುದು ಕಷ್ಟಸಾಧ್ಯ. ಕೆಲವೊಮ್ಮೆ ಬದಲಿಯಾಗಿ ಯಾವುದೋ ಡೆಬಿಟ್ ಕಾರ್ಡ್‌ ಪಿನ್‌ ಅನ್ನು ಇನ್ಯಾವುದೋ ಡೆಬಿಟ್ ಕಾರ್ಡ್‌ ಸ್ವೈಪ್ ಮಾಡಿ ನೀಡಬಹುದು. ಇಂತಹ ಗೊಂದಲಗಳು ಆಗದಂತೆ ತಡೆಯುವುದು ಹೇಗೆ ಎಂದು ಹಲವರು ಚಿಂತಿಸುತ್ತಿರುತ್ತಾರೆ. ಅಂತಹವರಿಗೆ ಉತ್ತರ ಇಂದಿನ ಲೇಖನದಲ್ಲಿ ಇದೆ.

ನಿಮ್ಮಲ್ಲಿ ಎಷ್ಟೇ ಡೆಬಿಟ್ ಕಾರ್ಡ್‌ಗಳಿದ್ದರೂ, ಎಲ್ಲಾ ಬ್ಯಾಂಕ್‌ಗಳ ಡೆಬಿಟ್‌ ಕಾರ್ಡ್‌ಗಳನ್ನು ಎಟಿಎಂನಲ್ಲಿ(ATM) ಬಳಸಲು ಒಂದೇ ಪಿನ್‌ ನಂಬರ್‌ ಅನ್ನು ಬಳಸಬಹುದು. ಬ್ಯಾಂಕ್‌ನವರು ನೀಡಿರುವ ನೀಡಿರುವ ಡೆಬಿಟ್ ಕಾರ್ಡ್‌ ಪಿನ್‌ ನಂಬರ್ ಬದಲು ನಿಮ್ಮದೇ ಆದ ಪಿನ್‌ ನಂಬರ್ ಅನ್ನು ಬದಲಿಸಬಹುದು. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

'CDM' ಮಷಿನ್ ಬಳಸಿ ಹಣ ಡೆಪಾಸಿಟ್ ಮಾಡುವುದು ಹೇಗೆ? ಸೂಚನೆಗಳು..!

ಎಟಿಎಂ ಕಾರ್ಡ್‌ ಸ್ವೈಪ್ ಮಾಡಿ

ಎಟಿಎಂ ಕಾರ್ಡ್‌ ಸ್ವೈಪ್ ಮಾಡಿ

ನಿಮ್ಮಲ್ಲಿ ಯಾವುದೇ ಬ್ಯಾಂಕ್‌ ಡೆಬಿಟ್ ಕಾರ್ಡ್ ಇದ್ದರೂ ಅದನ್ನು ಎಟಿಎಂ ಮಷಿನ್‌ನಲ್ಲಿ ಸ್ವೈಪ್‌ ಮಾಡಿ. ನಂತರ ಸ್ಕ್ರೀನ್‌ನಲ್ಲಿ Banking ಸೆಲೆಕ್ಟ್ ಮಾಡಿ, ಇಂಗ್ಲೀಷ್‌ ಭಾಷೆ ಅಥವಾ ಯಾವ ಭಾಷೆ ಬೇಕೊ ಅದನ್ನು ಆಯ್ಕೆ ಮಾಡಿಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಿನ್‌ ನಂಬರ್ ಎಂಟರ್ ಮಾಡಿ.

ಪಿನ್‌ ನಂಬರ್ ಎಂಟರ್ ಮಾಡಿ.

ಭಾಷೆ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಪಿನ್‌ ನಂಬರ್ ಎಂಟರ್‌ ಮಾಡಲು ಕೇಳಲಾಗುತ್ತದೆ. ನಿಮ್ಮ ಹಳೆಯ ಡೆಬಿಟ್ ಕಾರ್ಡ್‌ ಪಿನ್‌ ನಂಬರ್ ಅನ್ನು ಮಾಡಿ.

ಪಿನ್‌ ಚೇಂಜ್ ಆಯ್ಕೆ ಮಾಡಿ

ಪಿನ್‌ ಚೇಂಜ್ ಆಯ್ಕೆ ಮಾಡಿ

ನಿಮ್ಮ ಡೆಬಿಟ್ ಕಾರ್ಡ್‌ನ ಹಳೆಯ ಪಿನ್‌ ನಂಬರ್ ನೀಡಿದ ನಂತರ ಹಲವು ಆಪ್ಶನ್‌ಗಳುಳ್ಳ ಸ್ಕ್ರೀನ್‌ ಓಪನ್ ಆಗುತ್ತದೆ. ಆ ಸ್ಕ್ರೀನ್‌ನಲ್ಲಿ "PIN CHANGE" ಆಪ್ಶನ್‌ ಅನ್ನು ಆಯ್ಕೆ ಮಾಡಿ.

ಹೊಸ ಪಿನ್‌ ನಂಬರ್ ಎಂಟರ್ ಮಾಡಿ

ಹೊಸ ಪಿನ್‌ ನಂಬರ್ ಎಂಟರ್ ಮಾಡಿ

"PIN CHANGE" ಆಪ್ಶನ್ ಆಯ್ಕೆ ಮಾಡಿ ಟ್ಯಾಪ್‌ ಮಾಡಿದ ನಂತರ, ನಿಮ್ಮ ಹೊಸ 4 ಡಿಜಿಟ್‌ನ ಪಿನ್‌ ನಂಬರ್ ಅನ್ನು ಕೇಳಲಾಗುತ್ತದೆ. ಹೊಸ ಪಿನ್‌ ನಂಬರ್‌ ಅನ್ನು ಎಂಟರ್ ಮಾಡಿ. ನಂತರ ಮತ್ತೊಮ್ಮೆ ಹೊಸ ಪಿನ್‌ ಎಂಟರ್ ಮಾಡಲು ಕೇಳಲಾಗುತ್ತದೆ. ಪುನಃ ಹೊಸ ಪಿನ್‌ ನಂಬರ್ ಎಂಟರ್ ಮಾಡಿ.

ಪಿನ್‌ ನಂಬರ್ ಬದಲಾವಣೆ ಬಗ್ಗೆ ರಶೀದಿ

ಪಿನ್‌ ನಂಬರ್ ಬದಲಾವಣೆ ಬಗ್ಗೆ ರಶೀದಿ

ನಿಮ್ಮ ಹೊಸ ಪಿನ್ ನಂಬರ್ ಬದಲಾವಣೆ ಆದ ನಂತರ ಎಟಿಎಂ ಮಷಿನ್ ರಶೀದಿ ನೀಡುತ್ತದೆ. ಹಾಗೆ ಸ್ಕ್ರೀನ್‌ನಲ್ಲಿ ಮೆಸೇಜ್‌ ಅನ್ನು ನೀಡಲಾಗುತ್ತದೆ.

ಎಟಿಎಂ ಬಳಕೆದಾರರು ತಮ್ಮಲ್ಲಿ ಎಷ್ಟೇ ಡೆಬಿಟ್ ಕಾರ್ಡ್‌ ಇದ್ದರೂ, ಎಲ್ಲಾ ಡೆಬಿಟ್ ಕಾರ್ಡ್‌ಗಳನ್ನು ಬಳಸಲು ಒಂದೇ ಪಿನ್‌ ನಂಬರ್ ಅನ್ನು ಸೆಟ್‌ ಮಾಡಿಕೊಳ್ಳಬಹುದು. ಈ ಮೇಲಿನ ಹಂತಗಳನ್ನು ಫಾಲೋ ಮಾಡುವ ಮುಖಾಂತರ ಎಲ್ಲಾ ಬ್ಯಾಂಕ್‌ ಡೆಬಿಟ್ ಕಾರ್ಡ್‌(ಎಟಿಎಂ ಕಾರ್ಡ್‌) ಗಳ ಪಿನ್‌ ನಂಬರ್‌ ಅನ್ನು ಬದಲಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How to change ATM PIN Number, set one pin number to all atm cards. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X