HSRP: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕ್ ಮಾಡುವಾಗ ಎಚ್ಚರ... ಯಾಕೆ ಗೊತ್ತಾ?
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP number plate) ವಿಷಯ ಈಗ ಭಾರೀ ಮುನ್ನೆಲೆಗೆ ಬಂದಿದೆ. ವಾಹನಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಹಿನ್ನೆಲೆ ಇವು ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಕಾರಣಕ್ಕೆ ಈ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಲಾಗಿದೆ. ಆದರೆ, ಕೆಲವು ಕಿಡಿಗೇಡಿಗಳು ಇದರಲ್ಲೂ ಮೋಸ ಮಾಡಲು ಮುಂದಾಗಿದ್ದಾರೆ.
ಹೌದು, ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆ 17 ಕೊನೆಯ ದಿನವಾಗಿದ್ದು, ಸಾಕಷ್ಟು ಜನರು ಈ ಪ್ಲೇಟ್‌ಗೆ ಬದಲಾಗಿದ್ದರೆ, ಇನ್ನೂ ಹಲವಾರು ವಾಹನ ಸವಾರರಿಗೆ ಇದನ್ನು ಹೇಗೆ ಪಡೆಯಬೇಕು ಅನ್ನೋ ವಿಚಾರವೇ ತಿಳಿದಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡು ಕೆಲವು ಸ್ಕ್ಯಾಮರ್‌ಗಳು ನಕಲಿ ವೆಬ್‌ಸೈಟ್ ಬಳಕೆ ಮಾಡಿಕೊಂಡು ಹಣ ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಮೋಸದ ಜಾಲದಿಂದ ಎಚ್ಚರಿಕೆ ವಹಿಸುವುದು ಹೇಗೆ, ಇದನ್ನು ಅಧಿಕೃತವಾಗಿ ಎಲ್ಲಿ ಬುಕಿಂಗ್ ಮಾಡಬೇಕು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High security registration plate) ಅಥವಾ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಿ ಎಂದು ಫೆ 17 ಕ್ಕೆ ಕೊನೇ ದಿನವಾಗಿ ಗಡುವು ನೀಡಲಾಗಿದೆ. ಆದರೆ ಹಲವಾರು ಕಾರಣಗಳಿಂದ ಈ ಕಾರ್ಯ ಇನ್ನೂ ಸಂಪೂರ್ಣ ಆಗಿಲ್ಲ. ಇದರಿಂದಾಗಿಯೇ ವಾಹನ ಸವಾರರು ಗಡುವು ವಿಸ್ತರಣೆ ಮಾಡಿ ಎಂದೂ ಸಹ ಆಗ್ರಹ ಮಾಡುತ್ತಿದ್ದಾರೆ.
ಯಾರೆಲ್ಲಾ ಈ ನಂಬರ್ ಪ್ಲೇಟ್ ಅಳವಡಿಸಬೇಕಿದೆ?: ಈ ಪ್ಲೇಟ್ ಅನ್ನು ಕಡ್ಡಾಯವಾಗಿ 1 ಏಪ್ರಿಲ್ 2019 ಕ್ಕಿಂತ ಮುನ್ನ ನೋಂದಣಿಯಾದ ವಾಹನಗಳಿಗೆ 90 ದಿನಗಳಲ್ಲಿ ಅಳವಡಿಸುವಂತೆ ಸೂಚಿಸಲಾಗಿದೆ. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿ ಹಿನ್ನೆಲೆ ಮೋಟಾರು ವಾಹನ ಕಾಯ್ದೆ 1989 ಸೆಕ್ಷನ್ 50 ಹಾಗೂ 51 ಅನ್ವಯ ಈ ನಿಯಮ ಜಾರಿ ಮಾಡಲಾಗಿದೆ. ಇದು ಹೆಚ್ಚಿನ ಭದ್ರತೆಯ ನಂಬರ್ ಪ್ಲೇಟ್ ಆಗಿದ್ದು, ಈ ಪ್ಲೇಟ್ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಕೊಡಲಾವುದಿಲ್ಲ ಎಂದು ಎಚ್ಚರಿಸಲಾಗಿದೆ.

ನಕಲಿ ವೆಬ್‌ಸೈಟ್‌ಗಳ ಹಾವಳಿ: ಇನ್ನು ಆಯಾ ಸರ್ಕಾರಗಳ ಆದೇಶವನ್ನೇ ದುರುಪಯೋಗ ಮಾಡಿಕೊಂಡು ಕೆಲವು ಕಿಡಿಗೇಡಿಗಳು ನಕಲಿ ವೆಬ್‌ಸೈಟ್‌ಗಳನ್ನು ಕ್ರಿಯೇಟ್ ಮಾಡಿ ಜನರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ರೀತಿಯ ಮೋಸದ ವಂಚನೆಗಳು ಈಗಾಗಲೇ ರಾಜ್ಯ ಸೇರಿದಂತೆ ದೇಶದ ನಾನಾ ಕಡೆ ನಡೆದಿದ್ದು, ಜನರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ.
ದೇಶಾದ್ಯಂತ ಈ ಪ್ಲೇಟ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರವೇ ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದು, ಈ ಕಾರಣಕ್ಕೆ ಈ ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಸಾಕಷ್ಟು ಜನರು ನಕಲಿ ವೆಬ್‌ಸೈಟ್‌ಗಳ ಬಗ್ಗೆ ಈ ಮುಂಚಿನಿಂದಲೂ ವರದಿ ಮಾಡಿಕೊಂಡು ಬಂದಿದ್ದಾರೆ. ಈ ಸೈಟ್‌ಗಳು ನಿಜವಾದ ಸೈಟ್‌ನಂತೆ ಕಾಣಿಸುವ ಮೂಲಕ ಜನರನ್ನು ಹಗಲು ದರೋಡೆ ಮಾಡಲಿವೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ನೀವು ಈ ಪ್ಲೇಟ್ ಪಡೆಯಬೇಕು ಎಂದರೆ ಸರ್ಕಾರದ ಅಧಿಕೃತ ಸೈಟ್‌ಗೆ ಮಾತ್ರ ಭೇಟಿ ನೀಡಬೇಕಿದೆ.

ಅಂದರೆ ನೀವು bookmyhsrp.com ಈ ಲಿಂಕ್ ಅನ್ನು ಬಳಕೆ ಮಾಡಿಕೊಂಡು ನಂಬರ್ ಪ್ಲೇಟ್ ಬುಕ್ ಮಾಡಬಹುದಾಗಿದೆ. ಇದರಲ್ಲಿ ಎಲ್ಲಾ ರೀತಿಯ ಮಾಹಿತಿ ಇದ್ದು, ಬುಕ್ ಮಾಡುವುದರಿಂದ ಹಿಡಿದು ಅದು ನಿಮ್ಮ ಬಳಿ ಬರುವವರೆಗೂ ಟ್ರ್ಯಾಕ್ ಮಾಡಬಹುದಾಗಿದೆ. ಈ ವಿಭಾಗದಲ್ಲಿ ರಾಜ್ಯ, ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಎಂಜಿನ್ ನಂಬರ್ ಅನ್ನು ಮಾತ್ರ ಕೇಳಲಾಗುತ್ತದೆ.
ಇನ್ನು ಈ ವಿಶೇಷ ಪ್ಲೇಟ್ ನಿಮ್ಮ ವಾಹನದಲ್ಲಿ ಇದ್ದರೆ ನಿಮ್ಮ ವಾಹನ ಕಳುವಾದ ಸಂದರ್ಭದಲ್ಲಿ ಪತ್ತೆ ಮಾಡುವುದು ಸುಲಭವಾದ ವಿಷಯವಾಗಿದೆ. ಅದರಲ್ಲೂ ಯಾರಾದರು ವಾಹನ ಬಳಕೆ ಮಾಡಿಕೊಂಡು ಕಾನೂನು ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಅವರನ್ನು ಸುಲಭವಾಗಿ ಪತ್ತೆ ಮಾಡಿ ಕಾನೂನು ವ್ಯವಸ್ಥೆ ಕಾಪಾಡಬಹುದಾಗಿದೆ. ಅಂದರೆ ANPR ಸಕ್ರಿಯಗೊಳಿಸಿದ ಕ್ಯಾಮರಾಗಳಿಂದ ಪತ್ತೆ ಮಾಡಬಹುದಾದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಇಲ್ಲಿ ನೀಡಲಾಗಿರುತ್ತದೆ.

ಕ್ರೋಮಿಯಂ ಆಧಾರಿತ ಅಶೋಕ ಚಕ್ರ ಚಿಹ್ನೆಯೊಂದಿಗೆ ಹೊಲೊಗ್ರಾಮ್ ಈ ಪ್ಲೇಟ್‌ನಲ್ಲಿ ಇರಲಿದ್ದು, ಪ್ಲೇಟ್‌ನ ಕೆಳಗಿನ ಎಡ ಮೂಲೆಯಲ್ಲಿ ವಿಶಿಷ್ಟವಾದ 10 ಅಂಕಿಯ ಪಿನ್ ನಮೂದು ಆಗಿರುತ್ತದೆ. ಜೊತೆಗೆ ಪ್ಲೇಟ್‌ನ ಕೆಳಗಿನ ಎಡ ಮೂಲೆಯಲ್ಲಿ ಕನಿಷ್ಠ ಒಂಬತ್ತು ಅಂಕೆಗಳ ಲೇಸರ್ ಆಲ್ಫಾ ನ್ಯೂಮರಿಕ್ ಕೋಡ್ ಅನ್ನು ಕಾಣಬಹುದಾಗಿದೆ. ಈ ಮೂಲಕ ಈ ಪ್ಲೇಟ್ ಅತ್ಯಾಧುನಿಕ ಪರವಾನಗಿ ಪ್ಲೇಟ್ ಆಗಿ ಗುರುತಿಸಿಕೊಂಡಿದೆ.


Click it and Unblock the Notifications








