ಸಿಮ್ ನಕಲು ಮಾಡಲು ಮಿಸ್ಡ್ ಕಾಲ್. ಎಚ್ಚರ!

Posted By: Varun
ಸಿಮ್ ನಕಲು ಮಾಡಲು ಮಿಸ್ಡ್ ಕಾಲ್. ಎಚ್ಚರ!

ಕಳೆದ ತಿಂಗಳು ತಾನೇ +375 ಸಂಖ್ಯೆಯಿಂದ ಬರುವ ಮಿಸ್ಡ್ ಕಾಲ್ ನಿಂದ ಆಗುವ ಅನಾಹುತದ ಬಗ್ಗೆ ನೀವು ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದಿರಿ. ಬೆಲಾರಸ್ ದೇಶದಿಂದ ಬರುವ ಈ ಮಿಸ್ಡ್ ಕಾಲ್ ಗೆ ನೀವೇನಾದರೂ ಅಪ್ಪಿ ತಪ್ಪಿ ಕರೆ ಮಾಡಿದರೆ ಮುಗಿದೇ ಹೋಯಿತು. ಸುಮಾರು 15 ರಿಂದ 30 ರೂಪಾಯಿಗಳವರೆಗೆ ನಿಮ್ಮ ಬ್ಯಾಲೆನ್ಸ್ ನಿಂದ ಚೌರವಾಗುತ್ತಿತ್ತು.

ಈಗ ಅದೇ ರೀತಿ ಮಿಸ್ಡ್ ಕಾಲ್ ಕೊಟ್ಟು, ನೀವು ಅದೇ ನಂಬರಿಗೆ ಫೋನ್ ಮಾಡಿದ್ರೆ ನಿಮ್ಮ ಸಿಮ್ ಕಾರ್ಡ್ ಅನ್ನೇ ನಕಲು ಮಾಡುವ ಹೊಸ ಜಾಲವೊಂದು ಪತ್ತೆಯಾಗಿದ್ದು, BSNL ಈಗಾಗ್ಲೇ ಇದರ ಬಗ್ಗೆ ತನ್ನ ಗ್ರಾಹಕರಿಗೆ ಇದರ ಬಗ್ಗೆ ಎಚ್ಚರಿಕೆ ನೀಡಿದೆ.

ಅದರ ಪ್ರಕಾರ, #90, +92 ಇಲ್ಲವೆ #09, ಈ ಸಂಖ್ಯೆಯಿಂದ ಶುರುವಾಗುವ ನಂಬರುಗಳಿಂದ ನಿಮಗೇನಾದರೂ ಮಿಸ್ಡ್ ಕಾಲ್ ಬಂದರೆ ದಯವಿಟ್ಟು ಅದಕ್ಕೆ ಪುನಃ ಕರೆ ಮಾಡಬೇಡಿ ಎಂದು ಅದು ಸೂಚನೆ ನೀಡಿದೆ.

ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಮಿಸ್ಡ್ ಕಾಲ್ ನ ಬಲೆಗೆ ಬಿದ್ದಿದ್ದರಂತೆ. ಅಕಸ್ಮಾತ್ ನೀವು ಆ ಸಂಖ್ಯೆಗಳಿಂದ ಕರೆ ಬಂದು, ಅದು ಕಟ್ ಆಗುವ ಮುನ್ನವೆ ಉತ್ತರಿಸಿದರೆ, ಆ ಕಡೆಯಿಂದ ಕಸ್ಟಮರ್ ಕೇರ್ ನಿಂದ ಮಾತಾಡುತ್ತಿರುವಂತೆ ಮಾತನಾಡಿ, ನಿಮ್ಮ ಕನೆಕ್ಟಿವಿಟಿ ಹಾಗು ಕರೆಗಳ ಬಗ್ಗೆ ವಿಚಾರಿಸಲು ಫೋನ್ ಮಾಡಿದ್ದಾಗಿ ಹೇಳಿ, ನಿಮಗೆ ಕರೆಗಳು ಸರಿಯಾಗಿ ಬರುತ್ತಿದ್ದರೆ #90 ಇಲ್ಲವೆ #09 ಅನ್ನು ಒತ್ತಿ ಎಂದು ಹೇಳಿ ನಿಮ್ಮನ್ನು ಬಲೆಗೆ ಬೀಳಿಸುತ್ತಾರಂತೆ.

ಈ ರೀತಿ ನೀವು ಬಲೆಗೆ ಬಿದ್ದರೆ ಮುಂದೆ ನಿಮ್ಮ ಸಿಮ್ ಕಾರ್ಡ್ ನಕಲು ಆದಂತೆಯೇ. ಅದು ನಕಲು ಆದ ತಕ್ಷಣ ನಿಮ್ಮ ಫೋನ್ ನಲ್ಲಿರುವ ಕಾಂಟ್ಯಾಕ್ಟ್ ಗಳನ್ನು ದುರುಪಯೋಗ ಪಡಿಸಿಕೊಳ್ಳಬಹುದು ಇಲ್ಲವೆ ನಕಲಿ ಸಿಮ್ ಬಳಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಇದೆ.

ನೀವುಗಳು ಈ ಮೇಲೆ ಕೊಟ್ಟಿರುವ ಸಂಖ್ಯೆಗಳಿಂದ ಕರೆ ಬಂದರೆ ದಯವಿಟ್ಟು ಉತ್ತರಿಸಬೇಡಿ ಹಾಗು ಮಿಸ್ಡ್ ಕಾಲ್ ಬಂದರೆ ಪುನಃ ಕರೆ ಮಾಡಿ ಮೋಸ ಹೋಗಬೇಡಿ. ಇದಷ್ಟೇ ಅಲ್ಲದೆ ಅವರುಗಳು ನಿಮ್ಮ ಸಿಮ್ ಕಾರ್ಡ್ ಅನ್ನು ನಕಲು ಮಾಡಿಬಿಟ್ಟರೆ ನಿಮ್ಮ ಫೋನ್ ನಲ್ಲಿನ ಮೆಮೊರಿಯನ್ನೂ ಹ್ಯಾಕ್ ಮಾಡಿ ಅಲ್ಲಿರುವ ದಾಖಲೆಯನ್ನು ಕದಿಯಬಹುದು. ಹೀಗಾಗಿ ನಿಮ್ಮ ಏಟಿಎಂ, ಬ್ಯಾಂಕ್ ಪಾಸ್ವರ್ಡ್, ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಸಂಬಂಧಿತ ಮಾಹಿತಿಯನ್ನೂ ಇಡಬೇಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot