ಭಾರತಕ್ಕೆ ಎಂಟ್ರಿ ಕೊಟ್ಟ ಜರ್ಮನಿಯ 'ಬೇಯರ್ಡೈನಾಮಿಕ್' ಹೆಡ್‌ಫೋನ್‌!

|

ಮ್ಯೂಸಿಕ್‌ಪ್ರಿಯರಿಗೆ ಹೆಡ್‌ಫೋನ್‌ನಲ್ಲಿ ಸಾಂಗ್ಸ್ ಕೇಳುವುದೆಂದರೇ ಇಷ್ಟ. ಅದರಲ್ಲೂ ಜರ್ನಿ ಸಮಯದಲ್ಲಿ ಹಾಡು ಕೇಳುವುದು ಮತ್ತಷ್ಟು ಖುಷಿ. ಅದಕ್ಕಾಗಿ ಮಾರುಕಟ್ಟೆಯಲ್ಲಿಗ ನಾಯಿಸ್‌ ಕ್ಯಾನ್ಸ್‌ಲೇಶನ್‌ ಹೆಡ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಪ್ರಮುಖ ಆಡಿಯೊ ಕಂಪನಿಗಳು ನಾಯಿಸ್‌ ಕ್ಯಾನ್ಸ್‌ಲೇಶನ್ ಹೆಡ್‌ಫೋನ್‌ಗಳು ಪರಿಚಯಿಸಿವೆ. ಈ ಸಾಲಿಗಿಗ ಜರ್ಮನಿಯ ಬೇಯರ್ಡೈನಾಮಿಕ್ ಆಡಿಯೊ ಕಂಪನಿಯು ಸೇರಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಜರ್ಮನಿಯ 'ಬೇಯರ್ಡೈನಾಮಿಕ್' ಹೆಡ್‌ಫೋನ್‌!

ಹೌದು, ಬೇಯರ್ಡೈನಾಮಿಕ್ ಆಡಿಯೊ ತಯಾರಿಕಾ ಸಂಸ್ಥೆಯು 'ಲಗೂನ್ ANC' (Lagoon ANC) ಹೆಸರಿನ ಪ್ರೀಮಿಯಮ್ ಹೆಡ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್‌ ಮಾಡಿದ್ದು, ಈ ಹೆಡ್‌ಫೋನ್‌ ಆಕ್ಟಿವ್ 'ನಾಯಿಸ್‌ ಕ್ಯಾನ್ಸಲೇಶನ್‌ ಮತ್ತು ವಾಯರ್‌ಲೆಸ್‌ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದುಕೊಂಡಿದೆ. ಬಳಕೆದಾರರು ಪರ್ಸನಲೈಜ್ ನಾಯಿಸ್‌ ಕ್ಯಾಲ್ಸಲೇಶನ್‌ಗಾಗಿ MIY ಆಪ್‌ ಆಯ್ಕೆ ನೀಡಲಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಜರ್ಮನಿಯ 'ಬೇಯರ್ಡೈನಾಮಿಕ್' ಹೆಡ್‌ಫೋನ್‌!

ಆಂಡ್ರಾಯ್ಡ್‌ ಮತ್ತು ಐಎಸ್‌ಐ ಓಎಸ್‌ ಬಳಕೆದಾರರು MIY ಆಪ್‌ ಬಳಕೆಯ ಮೂಲಕ ಅಗತ್ಯ ನಾಯಿಸ್‌ ಕ್ಯಾನ್ಸಲೇಶನ್ ಸೆಟ್‌ ಮಾಡಿಕೊಳ್ಳಬಹುದಾಗಿದೆ. ಈ ಡಿವೈಸ್‌ ಕಿವಿಗಳಿಗೆ ಪೂರ್ಣ ಕವರ್‌ ಆಗುವ ರಚನೆ ಇದ್ದು, ಕಂಫರ್ಟ್‌ ಅನುಭವ ಸೀಗಲಿದೆ. ಹಾಗೆಯೇ ವಾಯಿಸ್‌ ಕರೆಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು SBC, AAC, aptX, ಮತ್ತು aptX ಆಡಿಯೊ ಕೋಡ್‌ಗಳಿಗೆ ಬೆಂಬಲ ನೀಡಲು ಕ್ವಾಲ್ಕಮ್ cVc ಚಿಪ್‌ಸೆಟ್‌ ನೀಡಲಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಜರ್ಮನಿಯ 'ಬೇಯರ್ಡೈನಾಮಿಕ್' ಹೆಡ್‌ಫೋನ್‌!

ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಬ್ಲೂಟೂತ್ ಮತ್ತು ಆಕ್ಟಿವ್ ನಾಯಿಸ್‌ ಕ್ಯಾನ್ಸಲೇಶನ್ ಫೀಚರ್ಸ್ ಬಳಕೆಯೊಂದಿಗೆ ಸುಮಾರು 24 ಗಂಟೆಗಳ ಬ್ಯಾಟರಿ ಬಾಳಕೆ ನೀಡಲಿದೆ. ಇದು ವಾಯರ್‌ಲೆಸ್‌ ಡಿವೈಸ್‌ ಆಗಿದ್ದರೂ ಪ್ರತ್ಯಕವಾಗಿ ಆಡಿಯೊ ಕೇಬಲ್ ಜೊತೆಗೆ 3.5mm ಪ್ಲಗ್ ನೀಡಲಾಗಿದೆ. ಡಿವೈಸ್‌ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಸೌಲಭ್ಯವನ್ನು ಒಳಗೊಂಡಿದೆ.

ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!

ಜರ್ಮನ ಮೂಲದ ಆಡಿಯೊ ಉತ್ಪನ್ನಗಳ ತಯಾರಿಕಾ ಕಂಪನಿ ಬೇಯರ್ಡೈನಾಮಿಕ್ ಬಿಡುಗಡೆ ಮಾಡಿರುವ ಈ ಡಿವೈಸ್‌ನ ಆಡಿಯೊ ಡ್ರೈವರ್ಸ್‌ಗಳು 10-30,000Hz ಸಾಮರ್ಥ್ಯದಲ್ಲಿದ್ದು, ಅತ್ಯುತ್ತಮ ಸೌಂಡ್ ಹೊರಹಾಕಲಿದೆ. ಈ ಪ್ರೀಮಿಯಮ್ ಹೆಡ್‌ಫೋನ್‌ ಬೆಲೆಯು 29,990ರೂ.ಗಳಾಗಿದ್ದು, ಮಾರುಕಟ್ಟೆಯಲ್ಲಿ ಸೋನಿ ಮತ್ತು ಬೋಟ್‌ ಕಂಪನಿಯ ನಾಯಿಸ್‌ ಕ್ಯಾನ್ಸಲೇಶನ್ ಹೆಡ್‌ಫೋನ್‌ಗಳಿಗೆ ಪೈಪೋಟಿ ನೀಡುವ ಪ್ರೈಸ್‌ಟ್ಯಾಗ್ ಇದಾಗಿದೆ.

ಓದಿರಿ : ಸೋನಿಯ A9G ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ! ಓದಿರಿ : ಸೋನಿಯ A9G ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ!

Best Mobiles in India

English summary
The Beyerdynamic Lagoon ANC is a premium headset from the German headphone manufacturer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X