Home
ಸುದ್ದಿಜಾಲ

ಭಾರತದ ಪ್ರಮುಖ ಟೆಲಿಕಾಂ ಖರೀದಿಸಿದ ಏರ್‌ಟೆಲ್‌!!..ಜಿಯೋ ಹಾದಿಗೆ ಮುಳ್ಳು!!

ಜಿಯೋ ವಿರುದ್ದ ಪ್ರತಿಹಂತದಲ್ಲಿಯೂ ತೊಡೆತಟ್ಟಸುತ್ತಿರುವ ಏರ್‌ಟೆಲ್ ಇದೀಗ ಭಾರತದ ಮತ್ತೊಂದು ಬಹುದೊಡ್ಡ ಟೆಲಿಕಾಂ ಅನ್ನು ಬುಟ್ಟಿಗೆ ಹಾಕಿಕೊಂಡಿದೆ.!!

By Bhaskar N J

ಜಿಯೋ ವಿರುದ್ದ ಪ್ರತಿಹಂತದಲ್ಲಿಯೂ ತೊಡೆತತಟ್ಟುತ್ತಿರುವ ಏರ್‌ಟೆಲ್ ಇದೀಗ ಭಾರತದ ಮತ್ತೊಂದು ಬಹುದೊಡ್ಡ ಟೆಲಿಕಾಂ ಅನ್ನು ಬುಟ್ಟಿಗೆ ಹಾಕಿಕೊಂಡಿದೆ.!! ಭಾರತದಲ್ಲಿ ಮೊದಲ ಭಾರಿದರಸಮರಕ್ಕೆ ಕಾರಣವಾಗಿದ್ದ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್‌ (ಟಾಟಾ ಡೊಕೊಮೊ)ಮೊಬೈಲ್ ಸೇವೆಯನ್ನು ಭಾರ್ತಿ ಏರ್‌ಟೆಲ್‌ನಲ್ಲಿ ವಿಲೀನಗೊಳಿಸಲಾಗಿದೆ.

ಈ ವಿಲೀನದಿಂದ ಟಾಟಾ ಟೆಲಿಕಾಂಗೆ ಸೇರಿದ 4 ಕೋಟಿಗೂ ಹೆಚ್ಚು ಮೊಬೈಲ್‌ ಗ್ರಾಹಕರು ಏರ್‌ಟೆಲ್‌ನ ಬಳಕೆದಾರರಾಗಲಿದ್ದಾರೆ. ದೇಶದಾದ್ಯಂತ ಇರುವ 19 ದೂರ ಸಂಪರ್ಕ ಸರ್ಕಲ್‌ಗಳಲ್ಲಿನ ಟಾಟಾ ಟೆಲಿ ಸೇವೆಯ ಈಗ ಏರ್‌ಟೆಲ್‌ ವ್ಯಾಪ್ತಿಗೆ ಬರಲಿದ್ದು, ಏರ್‌ಟೆಲ್ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವೃದ್ದಿಸಿಕೊಂಡಿದೆ.!!

ಭಾರತದ ಪ್ರಮುಖ ಟೆಲಿಕಾಂ ಖರೀದಿಸಿದ ಏರ್‌ಟೆಲ್‌!!..ಜಿಯೋ ಹಾದಿಗೆ ಮುಳ್ಳು!!

ಇನ್ನೊಂದು ವಿಶೇಷವೆಂದರೆ ಟಾಟ ಕಂಪೆನಿಯನ್ನು ಏರ್‌ಟೆಲ್ ಯಾವುದೇ ನಗದು ಪಾವತಿಸದೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.!! ಉದ್ದೇಶಿತ ವಿಲೀನ ಪ್ರಕ್ರಿಯೆಯಲ್ಲಿ ಟಾಟಾದ 40 ಸಾವಿರ ಕೋಟಿಗಳಷ್ಟು ಸಾಲದ ಹೊರೆಯನ್ನು ಏರ್‌ಟೆಲ್ ಹೊರುತ್ತಿದ್ದು, ಇನ್ನು ಹೆಚ್ಚಿನ ಹಣವನ್ನು ಟಾಟಾ ಕಂಪೆನಿಯೇ ಏರ್‌ಟೆಲ್‌ಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.!!

ಭಾರತದ ಪ್ರಮುಖ ಟೆಲಿಕಾಂ ಖರೀದಿಸಿದ ಏರ್‌ಟೆಲ್‌!!..ಜಿಯೋ ಹಾದಿಗೆ ಮುಳ್ಳು!!

ಭಾಋತದ ಟೆಲಿಕಾಂನಲ್ಲಿ ಜಿಯೋ ಮತ್ತು ಏರ್‌ಟೆಲ್‌ ನಡುವ ನಂಬರ್ ಒನ್ ಪಟ್ಟಕ್ಕೆ ಫೈಟ್‌ ನಡೆಯುತ್ತಿದ್ದು, ವಿಶ್ವದ ಅತಿ ದೊಡ್ಡ ದೂರಸಂಪರ್ಕ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತದಲ್ಲಿ ಈ ವಿದ್ಯಮಾನ ಇನ್ನಷ್ಟು ಮೊಬೈಲ್‌ ಸಂಸ್ಥೆಗಳ ವಿಲೀನಕ್ಕೆ ಪ್ರೇರಣೆ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಓದಿರಿ: ಜಿಯೋಫೋನ್ VS ಏರ್‌ಟೆಲ್ ಫೋನ್!!..ಯಾವುದು ಬೆಸ್ಟ್?..ಭವಿಷ್ಯದ ಟೆಲಿಕಾಂ ಕಥೆ ಏನು?!!

Best Mobiles in India

English summary
Tata's consumer mobile business operations and services will continue as normal until the completion of the transaction.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+