ಜಿಯೋಫೋನ್ VS ಏರ್‌ಟೆಲ್ ಫೋನ್!!..ಯಾವುದು ಬೆಸ್ಟ್?..ಭವಿಷ್ಯದ ಟೆಲಿಕಾಂ ಕಥೆ ಏನು?!!

ಎರಡೂ ಟೆಲಿಕಾಂಗಳೂ ಗ್ರಾಹಕರ ಜೊತೆ ಹೇಗೆ ಆಟವಾಡುತ್ತಿವೆ? ಜನರು ಯಾವುದನ್ನು ಬಳಕೆ ಮಾಡಲು ಒಲವು ತೋರಬಹುದು? ಮತ್ತು ಈ ಎರಡು ಟೆಲಿಕಾಂ ಕಂಪೆನಿಳು ನೀಡುತ್ತಿರುವ ಆಫರ್‌ಗಳಲ್ಲಿ ಯಾವ ಆಫರ್ ಬೆಸ್ಟ್?

|

ಜಿಯೋ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಗೆ 4G ಮೊಬೈಲ್ ಅನ್ನು ಬಿಡುಗಡೆ ಮಾಡಿದ್ದರೆ, ಏರ್‌ಟೆಲ್ ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಕಡಿಮೆ ಬೆಲೆಗೆ 4G ಸ್ಮಾರ್ಟ್‌ಪೋನ್ ಬಿಡುಗಡೆ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ ಅಲ್ಲವೇ?..ಹಾಗಾದರೆ, ಭವಿಷ್ಯದಲ್ಲಿ ಟೆಲಿಕಾಂ ಹೇಗಿರಲಿದೆ ಎಂಬ ಕುತೋಹಲವೇ?

ಈ 4G ಜಿಯೋ ಮೊಬೈಲ್ ಮತ್ತು ಏರ್‌ಟೆಲ್ 4G ಸ್ಮಾರ್ಟ್‌ಫೋನ್ ಯುದ್ದದಲ್ಲಿ ಗೆಲ್ಲುವುದು ಯಾರು? ಎರಡೂ ಟೆಲಿಕಾಂಗಳೂ ಗ್ರಾಹಕರ ಜೊತೆ ಹೇಗೆ ಆಟವಾಡುತ್ತಿವೆ? ಜನರು ಯಾವುದನ್ನು ಬಳಕೆ ಮಾಡಲು ಒಲವು ತೋರಬಹುದು? ಮತ್ತು ಈ ಎರಡು ಟೆಲಿಕಾಂ ಕಂಪೆನಿಳು ನೀಡುತ್ತಿರುವ ಆಫರ್‌ಗಳಲ್ಲಿ ಯಾವ ಆಫರ್ ಬೆಸ್ಟ್? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ!!

ಎರಡು ಕಂಪೆನಿಗಳಿಗೂ ಅನಿವಾರ್ಯ.!!

ಎರಡು ಕಂಪೆನಿಗಳಿಗೂ ಅನಿವಾರ್ಯ.!!

ಮೊದಲೇ ಹೇಳಿದಂತೆ, 4G ಡಿವೈಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಏರ್‌ಟೆಲ್ ಮತ್ತು ಜಿಯೋ ಎರಡೂ ಕಂಪೆನಿಗಳಿಗೆ ಅನಿವಾರ್ಯವಾಗತಿದೆ.! ಪ್ರಸ್ತುತ 10 ಕೋಟಿ ಗ್ರಾಹಕರನ್ನು ಹೊಂದಿರುವ ಜಿಯೋಗೆ 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದುವ ಹಂಬಲವಾದರೆ, ಏರ್‌ಟೆಲ್‌ಗೆ ಪ್ರಸ್ತುತ ಇರುವ ಗ್ರಾಹಕರನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ.!!

ಜಿಯೋ 4G vs ಏರ್‌ಟೆಲ್ 4G!!

ಜಿಯೋ 4G vs ಏರ್‌ಟೆಲ್ 4G!!

ಜಿಯೋ 1500 ರೂಪಾಯಿಗೆ ಮೊಬೈಲ್ ನೀಡಲು ಮುಂದಾಗಿದ್ದರೆ, ಏರ್‌ಟೆಲ್ 1,399 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ನೀಡಿ ಎದುರೇಟು ನೀಡುತ್ತಿದೆ.! ಜಿಯೋಗಿಂತಲೂ ಅತ್ಯುತ್ತಮ ಆಯ್ಕೆಯನ್ನು ಏರ್‌ಟೆಲ್ ತಂದಿದ್ದು, ಎಲ್ಲರೂ ಏರ್‌ಟೆಲ್ ಸ್ಮಾರ್ಟ್‌ಫೋನ್‌ಗೆ ಮುಖ ಮಾಡಬಹುದು ಎಂದು ಊಹಿಸಲಾಗುತ್ತಿದೆ.!!

ಜಿಯೋ vs ಏರ್‌ಟೆಲ್ ರೀಚಾರ್ಜ್!!

ಜಿಯೋ vs ಏರ್‌ಟೆಲ್ ರೀಚಾರ್ಜ್!!

4G ಮೊಬೈಲ್‌ಗಳಲ್ಲಿ ಒಂದು ರೀತಿಯ ಯುದ್ದವಾದರೆ, ಇನ್ನು ಈ ಎರಡು ಕಂಪೆನಿಗಳು ನೀಡುತ್ತಿರುವ ರೀಚಾರ್ಜ್ ಆಫರ್ ಕೂಡ ಮತ್ತೊಂದು ಯುತದ್ದವಾಗಿದೆ.! ಜಿಯೋ 153 ರೂ.ಗೆ ತಿಂಗಳ ಆಫರ್ ನಿಡಿದರೆ ,ಏರ್‌ಟೆಲ್ 169ರೂಪಾಯಿಗಳಿಗೆ ಆಫರ್ ನೀಡಲು ಮುಂದಾಗಿದ್ದು, ಇದು ಕೂಡ ಪೈಪೋಟಿ ಹಂತಕ್ಕೆ ಬಂದು ನಿಂತಿದೆ.!!

ಎರಡೂ ಟೆಲಿಕಾಂಗಳೂ ಗೇಮ್ ಆಡುತ್ತಿವೆ.!!

ಎರಡೂ ಟೆಲಿಕಾಂಗಳೂ ಗೇಮ್ ಆಡುತ್ತಿವೆ.!!

ಮುಂದಿನ ಮೂರುವರ್ಷಗಳು ಒಬ್ಬ ಗ್ರಾಹಕನನ್ನು ಬಿಡದೇ ಇರಲು ಜಿಯೋ ಮಾಡಿದ ಪ್ಲಾನ್‌ಗೆ ಏರ್‌ಟೆಲ್ ಕೂಡ ಕೈ ಜೋಡಿಸಿದ್ದು, ಎರಡೂ ಟೆಲಿಕಾಂಗಳೂ ಜನರ ಜೊತೆಯಲ್ಲಿ ಗೇಮ್ ಆಡುತ್ತಿವೆ.!! ಅಂದರೆ, ಯಾವುದೇ ಕಂಪೆನಿಯ ಮೊಬೈಲ್ ಖರೀದಿಸಿದರೂ ಸಹ ಆ ಕಂಪೆನಿಗೆ ಗ್ರಾಹಕನಾಗಿಯೇ ಇರಬೇಕಾದ ಒತ್ತಡವನ್ನು ಎರಡು ಕಂಪೆನಿಗಳು ಕ್ರಿಯೇಟ್ ಮಾಡಿವೆ.!!

ಇಬ್ಬರ ಆಟಕ್ಕೆ ದಾಳ 'ಸಮಯ ಮತ್ತು ಹಣ'!!

ಇಬ್ಬರ ಆಟಕ್ಕೆ ದಾಳ 'ಸಮಯ ಮತ್ತು ಹಣ'!!

ಗ್ರಾಹಕನಿಗೆ ಉಚಿತ ಮೊಬೈಲ್ ನೀಡುವುದಾಗಿ ಹೇಳಿದ್ದ ಜಿಯೋ 1500 ರೂಪಾಯಿಗಳ ಡೆಪಾಸಿಟ್ ಇಡಬೇಕೆಂದು ತಿಳಿಸಿದೆ. ನಂತರ ಈ ಹಣವನ್ನು 3 ವರ್ಷಗಳ ನಂತರ ವಾಪಸ್ ನೀಡುವುದಾಗಿ ಹೇಳಿದೆ.!! ಹಾಗೆಯೇ, ಒಂದೂವರೆ ವರ್ಷದ ನಂತರ ಗ್ರಾಹಕರಿಗೆ 500 ಮತ್ತು ಮೂರು ವರ್ಷಗಳ ನಂತರ 1000 ಮರು ಪಾವತಿಸಲಾಗುವುದು ಎಂದು ತಿಳಿಸಿದೆ.!!

ಏರ್‌ಟೆಲ್ ಗೆಲ್ಲುವ ಲಕ್ಷಣವಿದೆ.!!

ಏರ್‌ಟೆಲ್ ಗೆಲ್ಲುವ ಲಕ್ಷಣವಿದೆ.!!

ಏರ್‌ಟೆಲ್ 1,399 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ನೀಡುತ್ತಿದ್ದರೆ, ಜಿಯೋ 1500 ಕ್ಕೆ ಮೊಬೈಲ್ ನೀಡುತ್ತಿದೆ. ಏರ್‌ಟೆಲ್ ನೀಡುತ್ತಿರುವ ಟಚ್‌ಸ್ಕ್ರೀನ್‌, ಎರಡು ಸಿಮ್ ಸೌಲಭ್ಯ ಒಳಗೊಂಡಿರುವ ಈ ಮೊಬೈಲ್‌ನಲ್ಲಿ ಯೂಟ್ಯೂಬ್, ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಸೌಲಭ್ಯಗಳೂ ಇರಲಿವೆ.!! ಆದರೆ, ಜಿಯೋ ಫೋನ್ ಇಷ್ಟು ಫೀಚರ್ ಹೊಂದಿಲ್ಲ.!!

ಹೊಸದೊಂದು ದರಸಮರಕ್ಕೆ ನಾಂದಿ!!

ಹೊಸದೊಂದು ದರಸಮರಕ್ಕೆ ನಾಂದಿ!!

ಈಗಾಗಲೇ ಭಾರಿ ದರಸಮರದಿಂದ ಟೆಲಿಕಾಂ ದರಗಳು 80 ಪರ್ಸೆಂಟ್ ಬೆಲೆ ಕಳೆದುಕೊಂಡಿದ್ದು, ಇದೀಗ ಕಡಿಮೆ ಬೆಲೆಯ 4G ಮೊಬೈಲ್‌ಗಳಿಂದ ಮತ್ತೊಂದು ದರಸಮರಕ್ಕೆ ನಾಂದಿಯಾಗುತ್ತಿದೆ.!! ಸ್ಪೀಡ್ ಡೇಟಾ ಇಂದಿನ ಟ್ರೆಂಡ್ ಆಗಿದ್ದು, ಬಳಕೆದಾರರೆಲ್ಲರೂ 4G ಯತ್ತ ದಾಪುಗಾಲಾಕುತ್ತಿರುವುದು ಇದಕ್ಕೆ ಕಾರಣ.!!

<strong>ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!</strong>ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!

Best Mobiles in India

English summary
Free feature phone or Rs 1399 smartphone?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X