ಇದೇ ಡಿ.1ರಿಂದ ಏರ್‌ಟೆಲ್ ಮತ್ತು ವೊಡಾಫೋನ್ ಪ್ಲ್ಯಾನ್‌ಗಳ ದರ ಹೆಚ್ಚಳ!
ದೇಶದ ಟೆಲಿಕಾಂ ವಲಯದಲ್ಲಿ ಈಗಾಗಲೇ ಭಾರಿ ಮಹತ್ತರ ಬೆಳವಣಿಗೆಗಳು ನಡೆದಿವೆ. ಜನಪ್ರಿಯ ಜಿಯೋ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಜಿಯೋದಿಂದ ಇತರೆ ನೆಟವರ್ಕ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ನಿಗದಿ ಮಾಡಿ ಸುದ್ದಿಯಾಗಿತ್ತು. ಆ ಬಳಿಕ ಬಹುತೇಕ ಗ್ರಾಹಕರು ವೊಡಾಫೋನ ಮತ್ತು ಏರ್‌ಟೆಲ್ ಟೆಲಿಕಾಂಗಳೆ ಬೆಸ್ಟ್ ಅನ್ನುವ ನಿಲವನ್ನು ಹೊಂದಿದರು. ಆದರೆ ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಈಗ ಗ್ರಾಹಕರಿಗೆ ಭಾರಿ ಶಾಕ್ ನೀಡಿದ್ದಾರೆ.

ಹೌದು, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಗಳು ದ್ವೀತಿಯ ಮತ್ತು ತೃತೀಯ ತ್ರೈಮಾಸಿಕ ಅವಧಿಯಲ್ಲಿ ಭಾರಿ ನಷ್ಟ ಅನುಭವಿಸಿದ ಹಿನ್ನಲೆಯಲ್ಲಿ ಕರೆಗಳ ದರಗಳಲ್ಲಿ ಹೆಚ್ಚಳ ಮಾಡುವ ನಿರ್ಧಾರ ಮಾಡಿವೆ. ಈ ಎರಡು ಟೆಲಿಕಾಂ ಸಂಸ್ಥೆಗಳು ಇದೇ ಡಿಸೆಂಬರ್ 1 ರಂದು ತಮ್ಮ ಪ್ರೀಪೇಡ್ ಪ್ಲ್ಯಾನ್‌ಗಳ ದರದಲ್ಲಿ ಹೆಚ್ಚಳ ಮಾಡುವ ನಿರ್ಣಯ ಕೈಗೊಂಡಿವೆ ಎನ್ನಲಾಗಿದೆ. ಆದರೆ ಎಷ್ಟು ಹೆಚ್ಚಿಸಲಿವೆ ಎನ್ನುವ ಬಗ್ಗೆ ತಿಳಿಸಿಲ್ಲ. ದರ ಹೆಚ್ಚಳದಿಂದ ಏನೆಲ್ಲಾ ಬದಲಾವಣೆಗಳ ಆಗಲಿವೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ ಮತ್ತು ವೊಡಾಫೋನ್
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳ ಲಿಸ್ಟ್‌ನಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಮುಂದಿವೆ. ಟೆಲಿಕಾಂ ವಲಯದ ಇತ್ತೀಚಿಗಿನ ಬೆಳವಣಿಗೆಗಳಿಂದಾಗಿ ಜಿಯೋ ಸೇರಿದಂತೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಸಹ ನಷ್ಟದ ಸ್ಥಿತಿ ಅನುಭವಿಸಿವೆ. ಈ ನಿಟ್ಟಿನಲ್ಲಿ ಜಿಯೋ ಇತ್ತೀಚಿಗಷ್ಟೆ ಹೊರ ಹೋಗುವ ಕರೆಗಳಿಗೆ 6ಪೈಸೆ ದರ ನಿಗದಿ ಮಾಡಿತ್ತು. ಹಾಗೆಯೇ ಈಗ ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಪ್ಲ್ಯಾನ್‌ಗಳ ದರ ಏರಿಕೆಗೆ ಸಿದ್ಧತೆ ನಡೆಸಿವೆ.

ದರ ಹೆಚ್ಚಳ ಗ್ಯಾರಂಟಿ
ಆರ್ಥಿಕ ಸಂಕಷ್ಟದಲ್ಲಿರುವ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಪ್ರೀಪೇಡ್ ಪ್ಲ್ಯಾನ್‌ಗಳ ಪ್ರೈಸ್‌ನಲ್ಲಿ ಹೆಚ್ಚಳ ಮಾಡುವ ಕ್ರಮಕ್ಕೆ ಮುಂದಾಗಿವೆ. ಇದೇ ಡಿಸೆಂಬರ್ 1 ರಿಂದ ನೂತನ ದರಗಳು ಅನ್ವಯವಾಗುವುದು ಗ್ಯಾರಂಟಿ ಎನ್ನಲಾಗಿದೆ. ಆದರೆ ಯಾವ ಪ್ಲ್ಯಾನ್‌ಗಳು ಎಷ್ಟು ಹೆಚ್ಚಳ ಆಗುತ್ತವೆ ಮತ್ತು ನೂತನ ಪ್ಲ್ಯಾನ್ ಕರೆಯ ದರಗಳು ಹೇಗಿರಲಿವೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಒಂದು ಅಂದಾಜಿನ ಪ್ರಕಾರ ಸುಮಾರು 35-40% ಏರಿಕೆ ಸಾಧ್ಯತೆ ಇದೆ ಎನ್ನಲಾಗಿದೆ.

ಪರಿಣಾಮ ಏನಾಗಬಹದು
ಬಹುತೇಕರ ನೆಚ್ಚಿನ ನೆಟವರ್ಕ್ ಜಿಯೋ ದರ ಏರಿಕೆ ಮಾಡಿದ್ದು, ಈಗ ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂ ಸಂಸ್ಥೆಗಳು ಸಹ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಿವೆ. ಒಂದು ವೇಳೆ ಏರ್‌ಟೆಲ್ ಮತ್ತು ವೊಡಾಫೋನ್ ನೂತನ ದರಗಳು ಗ್ರಾಹಕರಿಗೆ ಹೊರೆ ಅನಿಸುವಂತಿದ್ದರೇ, ಈ ಸಂಸ್ಥೆಗಳು ತಮ್ಮ ಚಂದಾದಾರರನ್ನು ಕಳೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಪರ್ಯಾಯ ಮಾರ್ಗ
ಗ್ರಾಹಕರಿಗೆ ಹೊರೆ ಆಗಬಾರದೆಂದು ಜಿಯೋ ಆಲ್-ಇನ್-ಒನ್ ಪ್ರೀಪೇಡ್ ಪ್ಲ್ಯಾನ್ ಪರಿಚಯಿಸಿದೆ ಅಲ್ಲವೇ ಅದೇ ರೀತಿ ಏರ್‌ಟೆಲ್ ಮತ್ತು ವೊಡಾಫೋನ್‌ಗಳು ಸಂಸ್ಥೆಗಳು ಸಹ ಹೊಸ ಪ್ಲ್ಯಾನ್‌ಗಳಲ್ಲಿ ಪೂರಕವಾಗಿ ಪರ್ಯಾಯ ಪ್ಲ್ಯಾನ್ ಆಯ್ಕೆ ನೀಡುವ ಸಾಧ್ಯತೆಗಳು ಇವೆ. ಒಟ್ಟಾರೇ ಹೆಚ್ಚಿನ ಚಂದಾದಾರರನ್ನು ಒಳಗೊಂಡಿರುವ ಈ ಟೆಲಿಕಾಂ ಸಂಸ್ಥೆಗಳಿಗೆ ದರ ಏರಿಕೆಯ ನಿರ್ಧಾರ ಸವಾಲನ್ನು ನೀಡಿದೆ.


Click it and Unblock the Notifications








