ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಭರ್ಜರಿ ಸರ್ಪ್ರೈಸ್ ಆಫರ್...!
ಬ್ರಾಡ್‌ಬ್ಯಾಂಡ್ ಕನೆಷ್ಕನ್ ಸಂಖ್ಯೆ 2 ಮಿಲಿಯನ್ ಗಡಿ ತಲುಪಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಹೊಸ ಹೊಸ ಆಫರ್ ನೀಡಲು ಮುಂದಾಗಿದೆ.
ರಿಲಯನ್ಸ್ ಮಾಲೀಕತ್ವದ ಜಿಯೋ ಟೆಲಿಕಾಂ ಲೋಕದಲ್ಲಿ ಕಾಲಿಟ್ಟ ಮೇಲೆ ಇತರೆ ಕಂಪನಿಗಳು ನಷ್ಟದ ಹಾದಿ ಹಿಡಿದಿದ್ದು, ದರ ಸಮರದಲ್ಲಿ ಜಿಯೋಗೆ ಸ್ಪರ್ಧೇಯೊಡ್ಡಲಾಗದೆ ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿವೆ.

ಓದಿರಿ: ಕೇವಲ ರೂ. 3,333 ಕ್ಕೆ ಲಾವಾ 4G ಪೋನು: ಹೇಗಿದೆ ಈ ಪೋನು..? ವಿಶೇಷತೆಗಳೇನು..?
ಅದಲ್ಲದೇ ಜಿಯೋ ವೇಗ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಏರ್‌ಟೆಲ್ ತನ್ನ ಗ್ರಾಹಕರಿಗೇ ಈಗಾಗಲೇ ಭರ್ಜರಿ ಸರ್ಪ್ರೈಸ್ ಆಫರ್‌ಗಳನ್ನು ನೀಡಲು ಮುಂದಾಗಿದೆ.

2 ಮಿಲಿಯನ್ ಬ್ರಾಡ್‌ಬ್ಯಾಂಡ್ ಕನೆಕ್ಷನ್
ಸದ್ಯ ಹೊಮ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಸಂಖ್ಯೆ 2 ಮಿಲಿಯನ್ ಗಡಿ ತಲುಪಿರುವ ಹಿನ್ನಲೆಯಲ್ಲಿಏರ್‌ಟೆಲ್ ಗ್ರಾಹಕರಿಗೆ ಹೊಸ ಹೊಸ ಆಫರ್ ನೀಡಲು ಮುಂದಾಗಿದೆ. ಇದಲ್ಲಾಗಿ 'ಏರ್‌ಟೆಲ್ ಸರ್ಪ್ರೈಸ್' ಎಂಬ ಹೊಸ ಆಫರ್ ಮೂಲಕ ತನ್ನ ಗ್ರಾಹಕರಿಗೆ ಹೆಚ್ಚಿನ ಡೇಟಾ ನೀಡಲಿದೆ. ಇದರಿಂದ ತನ್ನ ಗ್ರಾಹಕರನ್ನು ಸಂತೋಷಪಡೆಸುವ ಯೋಜನೆ ರೂಪಿಸಿದೆ.

ಉಚಿತ ಕೊಡುಗೆ
ಟ್ರಾಯ್ ನೀಡಿರುವ ಅಂಕಿ ಅಂಶದ ಪ್ರಕಾರ ಏರ್‌ಟೆಲ್ ಕಳೆದ ನವೆಂಬರ್ ನಲ್ಲಿಯೇ 2 ಮಿಲಿಯನ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಹೊಂದಿದ್ದು, ಈ ಹಿನ್ನಲೆಯಲ್ಲಿ ಪ್ರತಿ ಗ್ರಾಹಕರು 'ಏರ್‌ಟೆಲ್ ಸರ್ಪ್ರೈಸ್' ಆಫರ್ ಅನ್ವಯ ಯಾವುದೇ ಹೆಚ್ಚಿನ ದರವನ್ನು ನೀಡದೆ ಉಚಿತ ಕೊಡುಗೆಗಳ ಲಾಭ ಪಡೆಯಬಹುದಾಗಿದೆ.

ಏರ್‌ಟೆಲ್ ಸರ್ಪ್ರೈಸ್
'ಏರ್‌ಟೆಲ್ ಸರ್ಪ್ರೈಸ್' ಕೊಡುಗೆ ಅನ್ವಯ ಗ್ರಾಹಕರು 10,000ಕ್ಕೂ ಹೆಚ್ಚು ಹಾಲಿವುಡ್ ಸಿನಿಮಾಗಳು, ಪ್ರಿಮಿಯಮ್ ಟಿವಿ ಶೋಗಳು ಸೇರಿದಂತೆ ಹಲವು ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಬಿಎಸ್‌ಎನ್ಎಲ್ ನಂ 1
ಟ್ರಾಯ್ ಅಂಕಿ-ಅಂಶದ ಅನ್ವಯ ದೇಶದಲ್ಲಿ ಬಿಎಸ್‌ಎನ್ಎಲ್ ಅತೀ ಹೆಚ್ಚು ಅಂದರೆ 9.95 ಮಿಲಿಯನ್ ಬ್ರಾಡ್‌ಬ್ಯಾಂಡ್ ಗ್ರಾಹಕರನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿ ಏರ್‌ಟೆಲ್‌ನದ್ದಾಗಿದ್ದು, 2.03 ಮಿಲಿಯನ್ ಗ್ರಾಹಕರನ್ನು ತನ್ನದಾಗಿಹಿಸಿಕೊಂಡಿದೆ.


Click it and Unblock the Notifications



