ಕೇವಲ ರೂ. 3,333 ಕ್ಕೆ ಲಾವಾ 4G ಪೋನು: ಹೇಗಿದೆ ಈ ಪೋನು..? ವಿಶೇಷತೆಗಳೇನು..?

ಲಾವಾ 4G ಸಪೋರ್ಟ್‌ ಮಾಡುವ ಫೀಚರ್ ಪೋನ್‌ವೊಂದನ್ನು ಕೇವಲ ರೂ.3,333ಗಳಿಗೆ ಬಿಡುಗಡೆ ಮಾಡಿದೆ.

|

ದೇಶದಲ್ಲಿ 4G ನೆಟ್‌ವರ್ಕ್ ಶುರುವಾದ ಮೇಲೆ ಆದರಲ್ಲಿಯೂ ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ 4G ನೆಟ್‌ವರ್ಕ್ ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನುಗಳ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲಿಯೂ ಜಿಯೋ ಉಚಿತ 4G ಡೇಟಾ ಸೇವೆಯನ್ನು ಉಚಿತವಾಗಿ ನೀಡುತ್ತಿರುವ ಕಾರಣ ಮೊಬೈಲ್ ಮಾರುಕಟ್ಟೆಯಲ್ಲಿ 4G ಸಪೋರ್ಟ್ ಪೋನುಗಳು ಭರಾಟೆ ಜೋರಾಗಿದೆ.

ಕೇವಲ ರೂ. 3,333 ಕ್ಕೆ ಲಾವಾ 4G ಪೋನು: ಹೇಗಿದೆ ಈ ಪೋನು..? ವಿಶೇಷತೆಗಳೇನು..?

ಓದಿರಿ: ಶೀಘ್ರವೇ ಸ್ಯಾಮ್‌ಸಂಗ್ ನಿಂದ ಮೊಬೈಲ್ ವ್ಯಾಲೆಟ್: ಸ್ಯಾಮ್‌ಸಂಗ್ ಪೇ ಇನ್ ಇಂಡಿಯಾ

ಇದೇ ಹಿನ್ನಲೆಯಲ್ಲಿ 4G ಸಪೋರ್ಟ್‌ ಮಾಡುವ ಕಡಿಮೆ ಬೆಲೆಯ ಪೀಚರ್‌ಪೋನುಗಳು ಮಾರುಕಟ್ಟೆಗೆ ಬರಲು ತುದಿಗಾಲಿನಲ್ಲಿ ನಿಂತಿದ್ದು, ರಿಲಯನ್ಸ್ ಮಾಲೀಕತ್ವದ ಜಿಯೋ 1000 ರೂಗೆ ಫೀಚರ್ ಪೋನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದರೆ ಇಲ್ಲಿಯವರೆಗೂ ಆ ಪೋನು ಬಿಡುಗಡೆಗೊಂಡಿಲ್ಲ. ಈ ಹಿನ್ನಲೆಯ ಲಾವಾ 4G ಸಪೋರ್ಟ್‌ ಮಾಡುವ ಫೀಚರ್ ಪೋನ್‌ವೊಂದನ್ನು ಕೇವಲ ರೂ.3,333ಗಳಿಗೆ ಬಿಡುಗಡೆ ಮಾಡಿದೆ.

ಹೇಗಿದೆ ಲಾವಾ 4G ..?

ಹೇಗಿದೆ ಲಾವಾ 4G ..?

ಲಾವಾ 4G ಪೋನಿಗೆ ಲಾವಾ 4G ಕನೆಕ್ಟ್ ಎಂ1 ಎಂದು ಹೆಸರಿಟ್ಟಿದೆ. ಕೇವಲ ರೂ.3,333ಗಳಿಗೆ ದೊರೆಯಲಿರುವ ಈ ಪೋನು 2.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಒಟ್ಟಿನಲ್ಲಿ ಸ್ಮಾರ್ಟ್‌ಪೋನಿಗಳ ಭರಾಟೆಯನ್ನು ಈ ಫೀಚರ್ ಪೋನ್‌ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ.

ಪೋನಿನ ವಿಶೇಷತೆಗಳೇನು..?

ಪೋನಿನ ವಿಶೇಷತೆಗಳೇನು..?

ಲಾವಾ 4G ಕನೆಕ್ಟ್ ಎಂ1 ಪೋನಿನಲ್ಲಿ 1.2GHz ಕ್ವಾಡ್‌ಕೋರ್ ಪ್ರೋಸೆಸರ್ ಇದೆ. ಇದರೊಂದಿಗೆ 512MB RAM ಈ ಪೋನಿನಲ್ಲಿದ್ದು, VGA ಕ್ಯಾಮೆರಾವನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ. ಅಲ್ಲದೇ 1750mAh ಬ್ಯಾಟರಿ ಸಹ ಇದ್ದು, 4GB ಇಂಟರ್ನಲ್ ಮೆಮೊರಿ ಹಾಗೂ ಕಾರ್ಡ್‌ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಈ ಪೋನಿನಲ್ಲಿದೆ.

ಇನ್ನು ಹಲವು..!

ಇನ್ನು ಹಲವು..!

ಲಾವಾ 4G ಕನೆಕ್ಟ್ ಎಂ1 ಫೀಚರ್ ಪೋನಿನಲ್ಲಿ ಎಫ್‌ಎಂ ರೇಡಿಯೋ ಇದೆ. ಅಲ್ಲದೇ ಈ ಪೋನ್ 2Gಗೆ ಸಹ ಸಪೋರ್ಟ್ ಮಾಡಲಿದೆ. ಈಗಾಗಲೇ ಮಾರುಕಟ್ಟೆಗೆ ಈ ಪೋನು ಕಾಲಿಟ್ಟಿದ್ದು, ಸಾಮಾನ್ಯ ಮೊಬೈಲ್ ಅಂಗಡಿಗಳಲ್ಲಿಯೂ ಈ ಪೋನ್‌ ದೊರೆಯಲಿದೆ ಎನ್ನಲಾಗಿದೆ.

Best Mobiles in India

Read more about:
English summary
Lava has just announced a 4G feature phone for a price of Rs 3,333. The phone is called the Lava 4G Connect M1 and features a 2.4-inch display. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X