ಜಿಯೋಗೆ ಭಾರಿ ಸೆಡ್ಡು..ಏರ್‌ಟೆಲ್‌ನಿಂದ ಕೇವಲ 2500ರೂ.ಗೆ 'ಆಂಡ್ರಾಯ್ಡ್' ಫೋನ್!!
ರಿಲಯನ್ಸ್ ಜಿಯೋಗೆ ಸೆಡ್ಡುಹೊಡೆದು ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಹರಸಾಹಸಪಡುತ್ತಿದ್ದು, ಕಡಿಮೆ ಬೆಲೆಗೆ 4G ವೋಲ್ಟ್ ಫೋನ್ ಪರಿಚಯಿಸಲು ರೆಡಿಯಾಗಿದೆ.!!
ಭಾರತದ ಅತಿದೊಡ್ಡ ಟೆಲಿಕಾಂ ಕಂಪೆನಿ ಏರ್‌ಟೆಲ್ ಕಡಿಮೆ ಬೆಲೆಗೆ 4ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.! ಹೌದು, ರಿಲಯನ್ಸ್ ಜಿಯೋಗೆ ಸೆಡ್ಡುಹೊಡೆದು ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಹರಸಾಹಸಪಡುತ್ತಿದ್ದು, ಕಡಿಮೆ ಬೆಲೆಗೆ 4G ವೋಲ್ಟ್ ಫೋನ್ ಪರಿಚಯಿಸಲು ರೆಡಿಯಾಗಿದೆ.!!
ಓದಿರಿ: ಓದಿರಿ: ಗೂಗಲ್ -ಶಿಯೋಮಿ ಜುಗಲ್ ಬಂದಿ: ರೂ. 2000ಕ್ಕೆ ಬೊಂಬಾಟ್ ಸ್ಮಾರ್ಟ್‌ಫೋನ್..!
ಜಿಯೋ, ಐಡಿಯಾಗಳೂ 4G ಫೀಚರ್ ಫೋನ್ ಬಿಡುಗಡೆಗೆ ಮುಂದಾದ ನಂತರ ಇದೀಗ ಏರ್‌ಟೆಲ್ ಬಿಗ್ ಪ್ಲಾನ್ ಮಾಡಿದ್ದು, ಕೇವಲ ಫೀಚರ್ ಫೋನ್ ಪರಿಚಯಿಸದೇ ಅತ್ಯಂತ ಕಡಿಮೆ ಬೆಲೆ 2500 ರೂಪಾಯಿಗೆ ಆಂಡ್ರಾಯ್ಡ್ ಪೋನ್ ಪರಿಸಯಿಸಲು ಮುಂದಾಗಿದೆ.!! ಹಾಗಾದರೆ, ಏರ್‌ಟೆಲ್ ಬಿಡುಗಡೆ ಮಾಡುವ ಫೋನ್ ಹೇಗಿರಲಿದೆ? ಫೀಚರ್ಸ್ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

500 ಮಿಲಿಯನ್ ಫೀಚರ್ ಫೋನ್ ಬಳಕೆದಾರರ ಗುರಿ.!!
ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳ ನಡುವೆ ನಡೆಯುತ್ತಿರುವ ಡೇಟಾ ಯದ್ದದಲ್ಲಿ ಇಬ್ಬರೂ ತಮ್ಮ ಗಮನವನ್ನು ಸುಮಾರು 500 ಮಿಲಿಯನ್ ಫೀಚರ್ ಫೋನ್ ಬಳಕೆದಾರರ ಕಡೆಗೆ ವರ್ಗಾಯಿಸುತ್ತಿದ್ದಾರೆ.! ಜಿಯೋ ಫೀಚರ್‌ಫೋನ್ ಬಿಡುಗಡೆ ಮಾಡಿದರೆ ತನ್ನ ಬಹುಪಾಲು ಮಾರುಕಟ್ಟೆ ಬೀಳಬಹುದು ಎಂದು ಏರ್‌ಟೆಲ್ ತನ್ನ ಪಾಲನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿದೆ.!!

ಏರ್‌ಟೆಲ್ ಆಂಡ್ರಾಯ್ಡ್ ಫೋನ್!!
ಭಾರತದ ಟಾಪ್ ಟೆಲ್ಕೊ ಮತ್ತು ಹ್ಯಾಂಡ್ಸೆಟ್ ತಯಾರಕರ ಸಹ-ಪ್ರಾಯೋಜಿಸಲ್ಪದಿಂದ ಏರ್‌ಟೆಲ್ 4ಜಿ ಫೋನ್ ಬಿಡುಗಡೆಯಾಗಲಿದ್ದು, ಕೇವಲ 2500 ರೂಪಾಯಿಗೆ ಆಂಡ್ರಾಯ್ಡ್ ಪೋನ್ ನೀಡಲು ಮುಂದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಎಲ್ಲಾ ಆಪ್‌ಗಳನ್ನು ಡೌನ್ಲೋಡ್ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಾಗುವುದು ಎಂದು ಏರೆ್‌ಟೆಲ್ ಹೇಳಿದೆ.!!

ಏರ್‌ಟೆಲ್ ಫೋನ್ ಫೀಚರ್ಸ್ ಏನು?
2,500 ರೂಪಾಯಿಗೆ ಬಹುತೇಕ ಫೀಚರ್ಸ್ ನೀಡುವ ಮೊಬೈಲ್ ತಯಾರಕರೊಂದಿಗೆ ಏರ್‌ಟೆಲ್ ಮಾತುಕತೆ ಮುಗಿದಿದ್ದು, ದೊಡ್ಡ ಸ್ಕ್ರೀನ್, ಉತ್ತಮ ಕ್ಯಾಮರಾ ಮತ್ತು ಉತ್ತಮ ಬ್ಯಾಟರಿ ಕಾರ್ಯಕ್ಷಮತೆ ಸ್ಮಾರ್ಟ್‌ಫೋನ್ ಅನ್ನು ಒದಗಿಸಲು ಕೇಳಿಕೊಂಡಿದೆ ಎಂದು ಏರ್‌ಟೆಲ್‌ನ ಹಿರಿಯ ಉದ್ಯಮ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಲಾವಾ ಮತ್ತು ಕಾರ್ಬನ್!!?
ಟಾಪ್ ಟೆಲ್ಕೊ ಮತ್ತು ಹ್ಯಾಂಡ್ಸೆಟ್ ತಯಾರಕರ ಸಹ-ಪ್ರಾಯೋಜಿಸಲ್ಪದಿಂದ ಏರ್‌ಟೆಲ್ 4ಜಿ ಫೋನ್ ಬಿಡುಗಡೆಯಾಗುತ್ತಿದ್ದು, ಲಾವಾ ಮತ್ತು ಕಾರ್ಬನ್ ಕಂಪೆನಿಗಳ ಜೊತೆಯಲ್ಲಿ ಏರ್‌ಟೆಲ್ ಮಾತುಕತೆ ಆರಂಭಿಸಿದೆ ಎನ್ನಲಾಗಿದೆ. ಆದರೆ, ಕಾರ್ಬನ್ ಮತ್ತು ಲಾವಾದ ವಕ್ತಾರರು ಈ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದ್ದಾರೆ.

ಜಿಯೋ ಪ್ಲಾನ್ ಹಿಂದೆ ಏರ್‌ಟೆಲ್.!!
ಕೇವಲ 153 ರೂಪಾಯಿಗೆ ಅನಿಯಮಿತ ಕರೆ ಮತ್ತು ಡೇಟಾವನ್ನು ಜಿಯೋ ನೀಡುತ್ತಿದೆ. ಲೈವ್ ಟಿವಿ, ಸಿನೆಮಾ, ಮ್ಯೂಸಿಕ್, ಫೇಸ್‌ಬುಕ್, ಯುಟ್ಯೂಬ್, ಮತ್ತು WhatsApp ಸೇರಿದಂತೆ ಮೊದಲೇ ಲೋಡ್ ಮಾಡಲಾದ ಜಿಯೋ ಅಪ್ಲಿಕೇಶನ್ಗಳನ್ನು ಅನುಮತಿಸುತ್ತದೆ.!! ಆದರೆ, ಏರ್‌ಟೆಲ್ ಆಂಡ್ರಾಯ್ಡ್ ಫೋನ್‌ಗೆ ಇದೇ ಆಫರ್ ನೀಡಲಿದೆ ಎನ್ನಲಾಗಿದೆ.!!

ಏರ್‌ಟೆಲ್ ಫೋನ್ ಯಾವಾಗ ಮಾರುಕಟ್ಟೆಗೆ!!
2500 ರೂಪಾಯಿಗೆ ಆಂಡ್ರಾಯ್ಡ್ ಪೋನ್ ಬಿಡುಗಡೆಯಾಗುತ್ತಿದ್ದು, ಏರ್‌ಟೆಲ್ ನೀಡಿರುವ ಮಾಹಿತಿಯಂತೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಪ್ರಾರಂಭದಲ್ಲಿ ಈ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.!!


Click it and Unblock the Notifications








