Subscribe to Gizbot

ಗೂಗಲ್ -ಶಿಯೋಮಿ ಜುಗಲ್ ಬಂದಿ: ರೂ. 2000ಕ್ಕೆ ಬೊಂಬಾಟ್ ಸ್ಮಾರ್ಟ್‌ಫೋನ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ವಸ್ತುಗಳನ್ನು ನಿ‍ಷೇಧಿಸ ಬೇಕು ಎಂಬ ಕೂಗು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಬೇಡಿ ಎಂಬ ಅಭಿಯಾನವು ನಡೆಯುತ್ತಿದೆಯಾದರೂ ಚೀನಾ ಫೋನ್‌ಗಳ ಖರೀದಿಯಂತು ಕುಂಠಿತವಾಗಿಲ್ಲ. ಅಲ್ಲದೇ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಪೋನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನೇ ಅಲಂಕರಿಸಿವೆ.

ಗೂಗಲ್ -ಶಿಯೋಮಿ ಜುಗಲ್ ಬಂದಿ: ರೂ. 2000ಕ್ಕೆ ಬೊಂಬಾಟ್ ಸ್ಮಾರ್ಟ್‌ಫೋನ್..!

ಇದೇ ಮಾದರಿಯಲ್ಲಿ ಚೀನಾ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಶಿಯೋಮಿ, ಬಜೆಟ್ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ. ಸದ್ಯ ಇದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಗೂಗಲ್ ಜೊತೆಗೂಡಿ ರೂ. 2000ಕ್ಕೆ ಸ್ಮಾರ್ಟ್‌ಫೋನ್ ವೊಂದನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ಯಿಂದ ಆಂಡ್ರಾಯ್ಡ್ ಓನ್:

ಶಿಯೋಮಿ ಯಿಂದ ಆಂಡ್ರಾಯ್ಡ್ ಓನ್:

ಗೂಗಲ್ ಸಹ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡುವ ಸಲುವಾಗಿ ಆಂಡ್ರಾಯ್ಡ್ ಓನ್ ಬಿಡುಗಡೆ ಮಾಡಿದ್ದು, ಇದರ ಬಳಕೆಯ ಸಹಾಯದಿಂದ ಶಿಯೋಮಿ ಸಹ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ ಅನ್ನು ತನ್ನ ಬಳಕೆದಾರರಿಗೆ ನೀಡುವ ಯೋಜನೆಯನ್ನು ರೂಪಿಸಿದೆ.

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಮೊದಲ ಸ್ಟಾಕ್ ಆಂಡ್ರಾಯ್ಡ್:

ಮೊದಲ ಸ್ಟಾಕ್ ಆಂಡ್ರಾಯ್ಡ್:

ಇದುವರೆಗೂ ಶಿಯೋಮಿ ಆಂಡ್ರಾಯ್ಡ್ ಓಎಸ್ ಬಳಕೆ ಮಾಡಿಕೊಂಡರು ಅದರೊಂದಿಗೆ ತನ್ನ ಓಎಸ್ ಅನ್ನು ಮಿಶ್ರಣ ಮಾಡಿ ಬಳಕೆದಾರರಿಗೆ ನೀಡುತ್ತಿತ್ತು. ಆದರೆ ಸ್ಟಾಕ್ ಆಂಡ್ರಾಯ್ಡ್ ಅನ್ನು ನೀಡುತ್ತಿರಲಿಲ್ಲ. ಆದರೆ ಆಂಡ್ರಾಯ್ಡ್ ಓನ್ ಸಹಾಯದಿಂದ ಇದೇ ಮೊದಲ ಬಾರಿಗೆ ಶಿಯೋಮಿ ಸ್ಟಾಕ್ ಆಂಡ್ರಾಯ್ಡ್ ಬಿಡುಗಡೆ ಮಾಡಲಿದೆ.

ರೂ.2000ಕ್ಕೆ ಸ್ಮಾರ್ಟ್‌ಫೋನ್:

ರೂ.2000ಕ್ಕೆ ಸ್ಮಾರ್ಟ್‌ಫೋನ್:

ದೇಶದಲ್ಲಿ ಹವಾ ಎಬ್ಬಿಸಿರುವ ಜಿಯೋ ಫೋನ್ ಸೆಡ್ಡು ಹೊಡೆಯುವ ಸಲುವಾಗಿ ಶಿಯೋಮಿ ಈ ನೂತನ ಸ್ಮಾರ್ಟ್‌ಫೋನ್ ಅನ್ನು ರೂ. 2000ಕ್ಕೆ ನೀಡಲಿದೆಯಂತೆ. ಗುಣಮಟ್ಟವೂ ಸಹ ಉತ್ತಮವಾಗಿರಲಿದೆ ಎನ್ನಲಾಗಿದೆ.

ಗೂಗಲ್ - ಶಿಯೋಮಿ ಜುಗಲ್ ಬಂದಿ:

ಗೂಗಲ್ - ಶಿಯೋಮಿ ಜುಗಲ್ ಬಂದಿ:

ಗುಗಲ್ ಮತ್ತು ಶಿಯೋಮಿ ಎರಡು ಒಟ್ಟಾಗಿ ಸೇರಿಕೊಂಡು ಈ ಹೊಸ ಸ್ಮಾರ್ಟ್‌ಫೋನ್ ಅನ್ನು ತಯಾರು ಮಾಡಲಿದೆ ಎನ್ನಲಾಗಿದ್ದು, ಇದಕ್ಕೆ ಶಿಯೋಮಿ A1 ಎಂದು ನಾಮಕರಣ ಮಾಡಿದ್ದು, ಚೀನಾ ಬಿಟ್ಟು ಬೇರೆ ಕಡೆಗಳಲ್ಲಿ ದೊರೆಯಲಿದ ಎನ್ನಲಾಗಿದೆ.

ಭಾರತವೇ ಟಾರ್ಗೆಟ್:

ಭಾರತವೇ ಟಾರ್ಗೆಟ್:

ಈಗಾಗಲೇ ಗೂಗಲ್ ಭಾರತವನ್ನು ಟಾರ್ಗೆಟ್ ಮಾಡಿ ಆಪ್ ಗಳನ್ನು ರಚನೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಶಿಯೋಮಿ ಸಹ ಭಾರತಕ್ಕೆ ಗುರಿಯಾಗಿಸಿಕೊಂಡು ಸ್ಮಾರ್ಟ್‌ಫೋನ್‌ಗಳನ್ನು ನಿರ್ಮಿಸುತ್ತಿದ್ದು ಈ ಹಿನ್ನಲೆಯಲ್ಲಿ ಇವೇರಡು ಕಂಪನಿಗಳು ಸೇರಿ ಹೊಸ ಪ್ರಯತ್ನಕ್ಕೆ ಮುಂದಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
It appears that Xiaomi and Google have joined hands to launch a new Android One smartphone, according to the latest report.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot