Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಜೊತೆ ಉಚಿತ ಅಮೆಜಾನ್ ಪ್ರೈಮ್!

ದೇಶದ ಟೆಲಿಕಾಂ ವಲಯದಲ್ಲಿ ಲೀಡಿಂಗ್ ಸರದಾರ ಜಿಯೋಗೆ ತೀವ್ರ ಪೈಪೋಟಿ ನೀಡುತ್ತಿರುವ ಟೆಲಿಕಾಂ ಅಂದರೇ ಅದು ಭಾರ್ತಿ ಏರ್‌ಟೆಲ್‌ ಆಗಿದೆ. ಏರ್‌ಟೆಲ್‌ ಸಂಸ್ಥೆಯು ತನ್ನ ಚಂದಾದಾರರಿಗೆ ಈಗಾಗಲೆ ಹಲವು ಉಚಿತ ಕರೆ ಹಾಗೂ ಅಧಿಕ ಡೇಟಾ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಕೆಲವೊಂದು ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಮನರಂಜನೆಯ ಸೌಲಭ್ಯ ಒದಗಿಸಿದೆ. ಅದೆನಂತೀರಾ?

ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್‌

ಹೌದು, ಏರ್‌ಟೆಲ್ ಟೆಲಿಕಾಂ ತನ್ನ ಕೆಲ ಆಯ್ದ ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಉಚಿತ ಅಮೆಜಾನ್ ಪ್ರೈಮ್ ಸೇವೆಯನ್ನು ನೀಡುತ್ತಿದೆ. ಸದ್ಯದ ಲಾಕ್‌ಡೌನ್‌ ಅವಧಿಗೆ ಉಚಿತ ವಿಡಿಯೊ ಸ್ಟ್ರೀಮಿಂಗ್ ಆಪ್‌ಗಳ ಸೌಲಭ್ಯ ಒಳಗೊಂಡ ಪ್ಲ್ಯಾನ್‌ಗಳು ಚಂದಾದಾರಿರಿಗೆ ಅನುಕೂಲಕರ ಎಂದು ಹೇಳಬಹುದು. ಏರ್‌ಟೆಲ್‌ನ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಚಂದಾದಾರರಿಗೆ ಅಮೆಜಾನ್ ಪ್ರೈಮ್ ಸೌಲಭ್ಯವನ್ನು ಒದಗಿಸುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಏರ್‌ಟೆಲ್‌ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ನ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್‌ ಅಮೆಜಾನ್‌ ಪ್ರೈಮ್‌ನ ಒಂದು ತಿಂಗಳ ಚಂದಾದಾರಿಕೆ ಸಿಗಲಿದ್ದು, ಏರ್‌ಟೆಲ್‌ನ Wynk Music ಸೇವೆ ಸಹ ದೊರೆಯುತ್ತದೆ. ಇದರೊಂದಿಗೆ ಹೆಲೊಟೂನ್ಸ್, ಶಾ ಅಕಾಡೆಮಿ ಆನ್‌ಲೈನ್ ಕೋರ್ಸ್‌ಗಳು ಮತ್ತು 150 ರೂ. ಫಾಸ್ಟ್‌ಟ್ಯಾಗ್ ಕ್ಯಾಶ್-ಬ್ಯಾಕ್ ಸಹ ಸಿಗಲಿದೆ.

ಏರ್‌ಟೆಲ್‌ 499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ 499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ನ 499ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಚಂದಾದಾರರಿಗೆ ಒಂದು ವರ್ಷದ ಉಚಿತ ಪ್ರವೇಶ ಅಮೆಜಾನ್ ಪ್ರೈಮ್ ಆಕ್ಸಸ್‌ ಮಾಡಬಹುದಾಗಿದೆ. ಇದರೊಂದಿಗೆ ಈ ಯೋಜನೆಯಲ್ಲಿ 100 ಎಸ್‌ಎಂಎಸ್ ಮತ್ತು ಅನಿಯಮಿತ ಕರೆ ಸೌಲಭ್ಯಗಳು ಲಭ್ಯ ಇರುತ್ತವೆ. ಅಲ್ಲದೇ ಪ್ರತಿ ತಿಂಗಳು 75GB ಡೇಟಾವನ್ನು ಸಹ ದೊರೆಯುತ್ತದೆ. ಇದರ ಜೊತೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅನ್ನು ಉಚಿತವಾಗಿ, ಜಗ್ಗರ್‌ನಾಟ್ ಬುಕ್ಸ್, ವಿಂಕ್ ಪ್ರೀಮಿಯಂ, Zee5, ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ.

ಇತರೆ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಇತರೆ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ನ ಜನಪ್ರಿಯ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳಾದ 749ರೂ, 999ರೂ ಮತ್ತು 1,599ರೂ. ಪ್ಲ್ಯಾನ್‌ಗಳಲ್ಲಿಯೂ ಅಮೆಜಾನ್ ಪ್ರೈಮ್ ಸೇವೆ ಲಭ್ಯವಿವೆ. ಈ ಯೋಜನೆಗಳಲ್ಲಿ ಚಂದಾದಾರರಿಗೆ ಒಂದು ವರ್ಷದವರೆಗೆ ಅಮೆಜಾನ್ ಪ್ರೈಮ್ ಸೌಲಭ್ಯ ದೊರೆಯುತ್ತದೆ. ಏರ್‌ಟೆಲ್‌ನ ಇನ್ನು ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಉಚಿತ ಇನ್ಶೂರೆನ್ಸ್‍ ಸೌಲಭ್ಯವನ್ನು ಹೊಂದಿವೆ ಆ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 179ರೂ. ಪ್ಲ್ಯಾನ್

ಏರ್‌ಟೆಲ್ 179ರೂ. ಪ್ಲ್ಯಾನ್

ಏರ್‌ಟೆಲ್‌ನ ನೂತನ 179ರೂ. ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ಅನಿಯಮಿತ ಕರೆಗಳ ಸೌಲಭ್ಯ ಇದೆ. ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್ಎಮ್ಎಸ್‌ ಹಾಗೂ 2GB ಡಾಟಾ 4G/3G/2G ಪ್ರಯೋಜನವನ್ನು ಒಳಗೊಂಡಿದೆ. ಇದರೊಂದಿಗೆ ಭಾರ್ತಿ ಆಕ್ಸಾ ಲೈಫ್‌ ಇನ್ಶೂರೆನ್ಸ್‌ನಿಂದ ಟರ್ಮ್ ಲೈಫ್ ಇನ್ಶೂರೆನ್ಸ್‍ ಸೌಲಭ್ಯ ಸಹ ಪಡೆದಿದೆ.

ಏರ್‌ಟೆಲ್‌ 279ರೂ. ಪ್ಲ್ಯಾನ್

ಏರ್‌ಟೆಲ್‌ 279ರೂ. ಪ್ಲ್ಯಾನ್

ಏರ್‌ಟೆಲ್‌ ಸಂಸ್ಥೆಯ 279ರೂ. ಪ್ಲ್ಯಾನ್ ಸಹ ಲೈಫ್‌ ಇನ್ಶೂರೆನ್ಸ್‌ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 6GB (4G/3G/2G ) ಡಾಟಾ ಹಾಗೂ 900 ಎಸ್‌ಎಮ್‌ಎಸ್‌ಗಳು ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಇದರೊಂದಿಗೆ 4ಲಕ್ಷದ ಟರ್ಮ್ ಲೈಫ್‌ ಇನ್ಶೂರೆನ್ಸ್‍ ಸೌಲಭ್ಯ ಸಿಗಲಿದೆ.

Best Mobiles in India

English summary
Airtel recharge plans of Rs 349 comes with a free Amazon Prime Subscription.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+