Subscribe to Gizbot

ಏರ್‌ಟೆಲ್ ಆಡ್‌-ಆನ್‌ ಪ್ಯಾಕ್‌: ಮಿತಿ ಇಲ್ಲದ ಡೇಟಾ..! ಜಿಯೋದಲ್ಲಿಯೂ ಈ ಆಫರ್ ಇಲ್ಲ..!

Written By:

ಸದ್ಯ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋವೊಂದಿಗಿನ ಸ್ಪರ್ಧೆಯಲ್ಲಿ ಸದ್ದು ಮಾಡುತ್ತಿರುವ ಏರ್‌ಟೆಲ್, ನೂತನ ಆಫರ್ ವೊಂದನ್ನು ಲಾಂಚ್ ಮಾಡಿದೆ. ಬಳಕೆದಾರರ ಮನಗೆಲ್ಲಲು ಇದು ಏರ್‌ಟೆಲ್‌ಗೆ ಸಹಾಯಕಾರಿಯಾಗಲಿದೆ. ಜಿಯೋ ಸಹ ಈ ಮಾದರಿಯ ಆಫರ್ ಅನ್ನು ಇದುವರೆಗೂ ನೀಡುವ ಮನಸ್ಸು ಮಾಡಿಲ್ಲ. ಇದೇ ಮೊದಲ ಬಾರಿಗೆ ಜಿಯೋ ಕಾಪಿ ಮಾಡ ಏರ್‌ಟೆಲ್ ತನ್ನದೇ ಹೊಸ ಮಾದರಿಯ ಪ್ಲಾನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಏರ್‌ಟೆಲ್ ಆಡ್‌-ಆನ್‌ ಪ್ಯಾಕ್‌: ಮಿತಿ ಇಲ್ಲದ ಡೇಟಾ..! ಜಿಯೋದಲ್ಲಿಯೂ ಈ ಆಫರ್ ಇಲ್ಲ

ಈಗಾಗಲೇ ಮಾರುಕಟ್ಟೆಯಲ್ಲಿ ಆಡ್ ಆನ್ ಪ್ಯಾಕ್‌ಗಳು ಹೆಚ್ಚು ಬಳಕೆಯಾಗುತ್ತಿದ್ದು, ದಿನಕ್ಕೇ ಒಂದು GB ಡೇಟಾ ಬಳಕೆದಾರರಿಗೆ ಸಾಕಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಡ್ ಆನ್ ಪ್ಲಾನ್ ನೀಡಿದ್ದು, ಇದರಲ್ಲಿ ಬಳಕೆದಾರರಿಗೆ ಇಷ್ಟು ಮಾತ್ರವೇ ಎನ್ನುವ ಡೇಟಾ ಲಿಮಿಟ್ ಇಲ್ಲವೇ ಇಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ರೂ.193 ಪ್ಲಾನ್:

ಏರ್‌ಟೆಲ್ ರೂ.193 ಪ್ಲಾನ್:

ಜಿಯೋ ಮಾರುಕಟ್ಟೆಗೆ ಪರಿಚಯ ಮಾಡಿದ್ದ ಆಡ್ ಅನ್ನು ಪ್ಯಾಕ್‌ಗಳಿಗೆ ಏರ್‌ಟೆಲ್ ಹೊಸ ರೂಪವನ್ನು ನೀಡಿದೆ ಎನ್ನಲಾಗಿದೆ. ಏರ್‌ಟೆಲ್ ರೂ.193ಕ್ಕೆ ಯಾವುದೇ ವ್ಯಾಲಿಡಿಟಿ ಇಲ್ಲದ ಆಡ್ ಆನ್ ಪ್ಯಾಕ್ ನೀಡಿದ್ದು, ಡೇಟಾ ಬಳಕೆಗೂ ಯಾವುದೇ ಲಿಮಿಟ್ ಇಲ್ಲ ಮತ್ತು ಇಷ್ಟೆ ಪ್ರಮಾಣದ ಡೇಟಾ ನೀಡುವುದಾಗಿಯೂ ತಿಳಿಸಿಲ್ಲ.

ವ್ಯಾಲಿಡಿಟಿ ಹೇಗೆ..?

ವ್ಯಾಲಿಡಿಟಿ ಹೇಗೆ..?

ಏರ್‌ಟೆಲ್ ಬಳಕೆದಾರರು ಈಗಾಗಲೇ ರೀಚಾರ್ಜ್ ಮಾಡಿಸಿಕೊಂಡಿರುವ ಪ್ಲಾನ್ ವ್ಯಾಲಿಡಿಟಿ ಇರುವವರೆಗೂ ಈ ಆಡ್ ಆನ್ ಪ್ಲಾನ್ ಚಾಲನೆಯಲ್ಲಿ ಇರಲಿದೆ. ಅಲ್ಲದೇ ಪ್ರತಿ ದಿನವು ಒಂದು GB ಡೇಟಾವನ್ನು ಬಳಕೆ ನೀಡಲಿದೆ ಎನ್ನಲಾಗಿದೆ.

ಹೆಚ್ಚಿನ ಲಾಭ:

ಹೆಚ್ಚಿನ ಲಾಭ:

ಜಿಯೋ ತನ್ನ ಆಡ್ ಆನ್ ಪ್ಯಾಕ್‌ಗಳಲ್ಲಿ ಕೇವಲ ಇಷ್ಟೆ ಡೇಟಾ ನೀಡುವುದಾಗಿ ಘೋಷಣೆ ಮಾಡುವುದಲ್ಲದೇ, ವ್ಯಾಲಿಡಿಟಿಯನ್ನು ನಿಗಧಿ ಮಾಡಿದೆ. ಆದರೆ ಏರ್‌ಟೆಲ್ ಇದಕ್ಕೆ ವಿರುದ್ಧವಾಗಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ರೂ.49 ಪ್ಲಾನ್:

ರೂ.49 ಪ್ಲಾನ್:

ಇದಲ್ಲದೇ ಇನ್ನೊಂದು ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ರೂ.49ಕ್ಕೆ ಏರ್‌ಟೆಲ್ ಯಾವುದೇ ವ್ಯಾಲಿಡಿಟಿ ಇಲ್ಲದೇ ಸದ್ಯದ ಪ್ಲಾನ್ ಅವಧಿಯ ವರೆಗೂ 1GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ.

ಜಿಯೋದಲ್ಲಿಯೂ ಇಲ್ಲ:

ಜಿಯೋದಲ್ಲಿಯೂ ಇಲ್ಲ:

ಜಿಯೋ ರೂ.11 ರಿಂದ ರೂ.101ರ ವರೆಗೂ ಪ್ಲಾನ್‌ಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಹೆಚ್ಚು ಎಂದರೆ ಬಳಕೆದಾರರಿಗೆ 6GB ಡೇಟಾ ದೊರೆಯಲಿರದೆ. ಆದರೆ ಏರ್‌ಟೆಲ್ ನೀಡಿರುವ ಪ್ಲಾನ್‌ನಲ್ಲಿ ಬಳಕೆದಾರರು 90 GB ವರೆಗೂ ಡೇಟಾವನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ಓದಿರಿ: ವಿಶ್ವದ ಮೊದಲ ಆಂಡ್ರಾಯ್ಡ್ ಎಲೆಕ್ಟ್ರಾನಿಕ್ ಸ್ಮಾರ್ಟ್ ಸ್ಕೂಟರ್: ಒಂದೇ ಚಾರ್ಜ್‌ನಲ್ಲಿ ಎಷ್ಟು ಮೈಲೆಜ್..?

English summary
Bharti Airtel’s Rs 193 and Rs 49 Prepaid Data Add-On Packs Explained. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot