BHIM ಆಪ್ ಬಳಕೆದಾರರಿಗೆ ಗುಡ್ ನ್ಯೂಸ್! ಭರ್ಜರಿ ಕ್ಯಾಶ್ ಬ್ಯಾಕ್ ಸೌಲಭ್ಯ
ಭಾರತದಲ್ಲಿ ಭೀಮ್ ಆಪ್ (BHIM App) ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಈ ಆಪ್ ತನ್ನದೇ ಆದ ವಿಶೇಷ ಫೀಚರ್ಸ್ ಮೂಲಕ ಬಳಕೆದಾರರಿಗೆ ಸುಲಭ ಆರ್ಥಿಕ ವ್ಯವಹಾರ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅದರಂತೆ ಈಗ ಭೀಮ್ ಆಪ್ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಕಲ್ಪಿಸಿದೆ.
ಹೌದು, ಭೀಮ್ ಪಾವತಿಗಳ ಆಪ್ ಪ್ರಸ್ತುತ 750ರೂ.ಗಳ ವರೆಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು (Cashback Offer) ನೀಡುವುದಾಗಿ ತಿಳಿಸಿದೆ. ಆದರೆ, ಇದಕ್ಕೆ ಸೀಮಿತ ಸಮಯವನ್ನು ನಿಗದಿಪಡಿಸಲಾಗಿದೆ. ಹಾಗಿದ್ರೆ, ಈ ಅಫರ್ ಯಾವಾಗ ಲಭ್ಯ?, ಇದನ್ನು ಕ್ಲೈಮ್ ಮಾಡಿಕೊಳ್ಳುವುದು ಹೇಗೆ?, ಇತರೆ ಬ್ಯಾಂಕ್ ಆಫರ್‌ಗಳು ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭೀಮ್ ಆಪ್: ಭೀಮ್ ಪಾವತಿಗಳ ಆಪ್ ಪ್ರಸ್ತುತ ಕ್ಯಾಶ್‌ಬ್ಯಾಕ್ ಕೊಡುಗೆಗಳೊಂದಿಗೆ ಹೆಚ್ಚಿನ ಬಳಕೆದಾರರನ್ನು ಪ್ಲಾಟ್‌ಫಾರ್ಮ್‌ಗೆ ಆಕರ್ಷಿಸಲು ಮುಂದಾಗಿದೆ. ದೊಡ್ಡ ಮಟ್ಟದ ಬಳಕೆದಾರರ ನೆಲೆಯನ್ನು ಪಡೆಯಲು ಗೂಗಲ್ ಪೇ ಆರಂಭದಲ್ಲಿ ಅನುಸರಿಸಿದ ತಂತ್ರದಂತೆ ಕಂಡುಬಂದಿದೆ. ಇನ್ನು ಕೆಲವು ಷರತ್ತುಗಳನ್ನು ಪೂರೈಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.
ಊಟ ಅಥವಾ ಪ್ರಯಾಣವನ್ನು ಇಷ್ಟಪಡುವ ಜನರಿಗೆ ಭೀಮ್ ಆಪ್ 150 ರೂಪಾಯಿಗಳ ಫ್ಲಾಟ್ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡುತ್ತಿದೆ. ಭೀಮ್ ಆಪ್ ಮೂಲಕ ಆರ್ಡರ್ ಮಾಡಿದ ಆಹಾರ ಮತ್ತು ಪ್ರಯಾಣ ವೆಚ್ಚಗಳಿಗಾಗಿ ಬಳಕೆದಾರರು 100 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಫ್ಲಾಟ್ 30 ರೂಗಳ ಕ್ಯಾಶ್‌ಬ್ಯಾಕ್ ಅನ್ನು ಸ್ವೀಕರಿಸುತ್ತಾರೆ. ಈ ಕೊಡುಗೆಯು ರೈಲ್ವೇ ಟಿಕೆಟ್ ಬುಕಿಂಗ್, ಕ್ಯಾಬ್ ರೈಡ್‌ಗಳು ಮತ್ತು ವ್ಯಾಪಾರಿ ಯುಪಿಐ ಕ್ಯೂಆರ್ ಕೋಡ್ ಮೂಲಕ ಪಾವತಿಸಿದ ರೆಸ್ಟೋರೆಂಟ್ ಬಿಲ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೆಚ್ಚಗಳನ್ನು ಒಳಗೊಂಡಿದೆ.

ಮತ್ತೊಂದು ಆಫರ್ ಏನೆಂದರೆ 600 ಕ್ಯಾಶ್‌ಬ್ಯಾಕ್ ಆಫರ್. ಇದನ್ನು ಭೀಮ್ ಆಪ್‌ಗೆ ಲಿಂಕ್ ಮಾಡುವ ಮೂಲಕ ರೂಪಾಯಿ ಕ್ರೆಡಿಟ್ ಕಾರ್ಡ್‌ದಾರರು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ. ಇದು ಎಲ್ಲಾ ವ್ಯಾಪಾರಿ ಯುಪಿಐ ಪಾವತಿಗಳಲ್ಲಿ 600 ರೂಪಾಯಿಗಳ ಕ್ಯಾಶ್‌ಬ್ಯಾಕ್ ಬಹುಮಾನವನ್ನು ಅನ್‌ಲಾಕ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ಆಫರ್‌ನಲ್ಲಿ ತಲಾ 100 ರೂ.ಗಿಂತ ಹೆಚ್ಚಿನ ಮೊದಲ ಮೂರು ವಹಿವಾಟುಗಳಿಗೆ 100 ರೂ.ಗಳ ಕ್ಯಾಶ್‌ಬ್ಯಾಕ್, ನಂತರ ಪ್ರತಿ ತಿಂಗಳು 200 ಮೀರಿದ 10 ವಹಿವಾಟುಗಳಿಗೆ 30 ರೂ.ಗಳ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಮೂಲಕ ಈ ಎಲ್ಲಾ ವಹಿವಾಟುಗಳನ್ನು ಮಾಡಿದರೆ ಮಾತ್ರ ಈ ಎಲ್ಲಾ ಕೊಡುಗೆಗಳು ಒಟ್ಟಾರೆಯಾಗಿ 600ರೂ.ಗಳ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ.
ಮೇಲೆ ತಿಳಿಸಿದ ಆಫರ್ ಜೊತೆಗೆ, ಉರ್ಜಾ 1 ಶೇಕಡಾ ಪ್ಲ್ಯಾನ್ ಅನ್ನೂ ಸಹ ನೀಡುತ್ತಿದೆ. ಇದು ಬಳಕೆದಾರರಿಗೆ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಸೇರಿದಂತೆ ಎಲ್ಲಾ ಇಂಧನ ಪಾವತಿಗಳ ಮೇಲೆ ಫ್ಲಾಟ್ 1 ಶೇಕಡಾ ಕ್ಯಾಶ್‌ಬ್ಯಾಕ್ ನೀಡುತ್ತದೆ. ಇದರ ಹೊರತಾಗಿ, ವಿದ್ಯುಚ್ಛಕ್ತಿ, ನೀರು ಮತ್ತು ಗ್ಯಾಸ್ ಬಿಲ್‌ಗಳಂತಹ ಯುಟಿಲಿಟಿ ಬಿಲ್ ಪಾವತಿಗಳ ಮೇಲೂ ಆಫರ್ ಲಭ್ಯ ಇರಲಿದೆ. ಆದರೆ, ವಹಿವಾಟಿನ ಮೊತ್ತವು 100 ರೂ. ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು.

ಸೀಮಿತ ಅವಧಿ: ಇನ್ನು ಭೀಮ್ ಆಪ್‌ನಲ್ಲಿನ ಈ ಕ್ಯಾಶ್‌ಬ್ಯಾಕ್ ಆಫರ್‌ಗಳು ಮಾರ್ಚ್ 31, 2024 ರವರೆಗೆ ಮಾತ್ರ ಲಭ್ಯವಿರುತ್ತವೆ. ಇದರರ್ಥ ಜನರು ಭೀಮ್ ಆಪ್ ಅನ್ನು ಬಳಕೆ ಮಾಡಿಕೊಂಡು ಮೇಲೆ ತಿಳಿಸಿದ ಎಲ್ಲಾ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಕ್ಲೈಮ್ ಮಾಡಲು 7 ವಾರಗಳಿಗಿಂತ ಹೆಚ್ಚು ಸಮಯವನ್ನು ಪಡೆದಿದ್ದಾರೆ. ಹಾಗಿದ್ರೆ ತಡ ಯಾಕೆ ನಿಮ್ಮ ಬಳಿ ಈ ಆಪ್ ಇದ್ದರೆ ಈಗಲೇ ಈ ಸೌಲಭ್ಯ ಪಡೆದುಕೊಳ್ಳಿ.


Click it and Unblock the Notifications








