Home
ಸುದ್ದಿಜಾಲ

iPhone: ಐಫೋನ್‌ 15 ಪ್ರೊ ಖರೀದಿ ಮೇಲೆ 16,700 ರೂ.ವರೆಗಿನ ದೊಡ್ಡ ರಿಯಾಯಿತಿ! ಎಲ್ಲಿ ಈ ಆಫರ್..

ಐಫೋನ್‌ಗಳು ಸಾಮಾನ್ಯವಾಗಿ ದುಬಾರಿ ಬೆಲೆ ಹೊಂದಿರುತ್ತವೆ. ಅದಾಗ್ಯೂ ಕೆಲವು ಸಂದರ್ಭಗಳಲ್ಲಿ ನೀವು ಈ ಫೋನ್‌ಗಳನ್ನು ಆಫರ್ ಮೂಲಕ ರಿಯಾಯಿತಿ ದರದಲ್ಲಿ ಖರೀದಿ ಮಾಡುಬಹುದಾಗಿದೆ. ಅದರಂತೆ ಈಗ ಐಫೋನ್‌ 15 ಪ್ರೊ (iPhone 15 Pro) ಖರೀದಿ ಮೇಲೆ 16,700 ರೂ.ವರೆಗಿನ ದೊಡ್ಡ ರಿಯಾಯಿತಿ ಸಿಗಲಿದೆ.

ಹೌದು, ಐಫೋನ್ 15 ಪ್ರೊನಲ್ಲಿ ಗಣನೀಯ ರಿಯಾಯಿತಿಯನ್ನು ನೀಡಲಾಗಿದೆ. ಪ್ರೊ ಮಾಡೆಲ್‌ಗಳು ವಿಶೇಷವಾಗಿ 1 ಲಕ್ಷದ ಗಡಿಯನ್ನೂ ದಾಟಿವೆ. ಆದರೆ ನೀವು ಕೆಲವು ಬ್ಯಾಂಕ್‌ ಕಾರ್ಡ್‌ಗಳನ್ನು ಪಡೆಯುವ ಮೂಲಕ ಈ ಬೆಲೆಯನ್ನು ಕಡಿಮೆ ಮಾಡಬಹುದು. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಅನ್ನು ಈ ಆಫರ್ ಬೆಲೆಗೆ ಹೇಗೆ ಖರೀದಿ ಮಾಡುವುದು?, ಎಲ್ಲಿ ಈ ಆಫರ್ ಸಿಗಲಿದೆ, ಫೀಚರ್ಸ್ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ 15 ಪ್ರೊ ಖರೀದಿ ಮೇಲೆ 16,700 ರೂ.ವರೆಗಿನ ದೊಡ್ಡ ರಿಯಾಯಿತಿ!ಎಲ್ಲಿ ಈ ಆಫರ್

ಐಫೋನ್ 15 ಪ್ರೊ ಫೋನ್‌ಗೆ ಆಫರ್: ಐಫೋನ್ 15 ಪ್ರೊ ಅನ್ನು ವಿಜಯ್ ಸೇಲ್ಸ್‌ನಲ್ಲಿ 1,28,200 ರೂಗಳ ಆರಂಭಿಕ ಬೆಲೆಯೊಂದಿಗೆ ಲಿಸ್ಟ್‌ ಮಾಡಲಾಗಿದೆ. ಈ ಫೋನ್‌ನ ಮೂಲ ಬೆಲೆ 1,34,900 ರೂ. ಗಳಾಗಿದೆ. ಇದರೊಂದಿಗೆ ನೀವು 6,700 ರ ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇನ್ನು ICICI ಬ್ಯಾಂಕ್ ಮತ್ತು SBI ಬ್ಯಾಂಕ್ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಹೆಚ್ಚುವರಿ 10,000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು.

ಇದರಿಂದಾಗಿ ಈ ಫೋನ್‌ನ ಪರಿಣಾಮಕಾರಿಯಾಗಿ ಬೆಲೆ 1,18,200 ರೂ. ಗಳಾಗಲಿದೆ. ಇದು ಗಮನಾರ್ಹವಾದ ಕಡಿತವನ್ನು ಪ್ರತಿನಿಧಿಸುತ್ತದೆ ಮತ್ತು ಪ್ರಸ್ತುತ ಐಫೋನ್‌ 15 ಪ್ರೊ ಗೆ ನೀಡಲಾಗುವ ಕಡಿಮೆ ಬೆಲೆಯಾಗಿದೆ. ಈ ಬೆಲೆ 128GB ಸ್ಟೋರೇಜ್ ವೇರಿಯಂಟ್‌ಗೆ ಅನ್ವಯಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಇತರ ಬ್ಯಾಂಕ್ ಕಾರ್ಡ್‌ದಾರರು ವಿಜಯ್ ಸೇಲ್ಸ್‌ನಲ್ಲಿ ಸಾಕಷ್ಟು ಕೊಡುಗೆಗಳನ್ನು ಪಡೆಯಬಹುದಾಗಿದೆ. ಆದರೆ ರಿಯಾಯಿತಿ ಕಡಿಮೆ ಇರಲಿದೆ.

ಐಫೋನ್‌ 15 ಪ್ರೊ ಖರೀದಿ ಮೇಲೆ 16,700 ರೂ.ವರೆಗಿನ ದೊಡ್ಡ ರಿಯಾಯಿತಿ!ಎಲ್ಲಿ ಈ ಆಫರ್

ಹಾಗೆಯೇ ಐಫೋನ್ 15 ಪ್ರೊ ಮ್ಯಾಕ್ಸ್‌ ಅನ್ನು ವಿಜಯ್ ಸೇಲ್ಸ್‌ನಲ್ಲಿ 256GB ವೇರಿಯಂಟ್‌ಗೆ 1,56,900 ರೂ.ಗಳ ರಿಯಾಯಿತಿ ಬೆಲೆ ನಿಗದಿ ಮಾಡಲಾಗಿದೆ. ಐಫೋನ್‌ 15 ಪ್ರೊ ನಂತೆ, ಗ್ರಾಹಕರು ಪ್ರೊ ಮ್ಯಾಕ್ಸ್‌ ಆವೃತ್ತಿಯಲ್ಲಿ 10,000 ರೂ.ಗಳ ಬ್ಯಾಂಕ್ ರಿಯಾಯಿತಿ ಕೊಡುಗೆಗಳನ್ನು ಪಡೆಯಬಹುದು. ಕಡಿತದ ನಂತರ ಈ ಫೋನ್‌ನ ಬೆಲೆ 1,46,900 ರೂ.ಗಳಿಗೆ ಇಳಿಯಲಿದೆ.

ಐಫೋನ್ 15 ಪ್ರೊ ಫೀಚರ್ಸ್‌: ಈ ಸ್ಮಾರ್ಟ್‌ಫೋನ್ LTPO ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಆಯ್ಕೆ ಮತ್ತು HDR10, ಡಾಲ್ಬಿ ವಿಷನ್, 2000 ನಿಟ್ಸ್‌ (HBM) ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 1179 x 2556 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯವನ್ನು ಈ ಡಿಸ್‌ಪ್ಲೇ ಪಡೆದಿದೆ. ಇನ್ನು ಐಓಎಸ್‌ 17, ಪಡೆದಿದೆ. ಐಓಎಸ್‌ 17.4 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಆಪಲ್‌ A17 ಪ್ರೊ (3 nm) ಪ್ರೊಸೆಸರ್‌ನಲ್ಲಿ ಈ ಫೋನ್‌ ಕಾರ್ಯನಿರ್ವಹಿಸಲಿದ್ದು, 128GB 8GB RAM, 256GB 8GB RAM, 512GB 8GB RAM, 1TB 8GB RAM ನ ವಿವಿಧ ಸ್ಟೋರೇಜ್‌ ಆಯ್ಕೆಯಲ್ಲಿ ಈ ಫೋನ್‌ ಲಭ್ಯ ಇದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಕಾಣಬಹುದಾಗಿದ್ದು, 48 MP ಮುಖ್ಯ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗೆಯೇ 12 MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.

ಐಫೋನ್‌ 15 ಪ್ರೊ ಖರೀದಿ ಮೇಲೆ 16,700 ರೂ.ವರೆಗಿನ ದೊಡ್ಡ ರಿಯಾಯಿತಿ!ಎಲ್ಲಿ ಈ ಆಫರ್

ಇನ್ನು ಸ್ಟೀರಿಯೋ ಸ್ಪೀಕರ್‌ ಆಯ್ಕೆ, ವೈ- ಫೈ 802.11 a/b/g/n/ac/6e, ಡ್ಯುಯಲ್-ಬ್ಯಾಂಡ್, ಹಾಟ್‌ಸ್ಪಾಟ್, ಬ್ಲೂಟೂತ್ ಆವೃತ್ತಿ 5.3, A2DP, LE, ಜಿಪಿಎಸ್‌ (L1+L5), GLONASS, GALILEO, BDS, QZSS, NavIC, ಯುಎಸ್‌ಬಿ ಟೈಪ್‌ ಸಿ 3.2 ಜನ್ ಪೋರ್ಟ್, ಸೇರಿದಂತೆ ಅನೇಕ ಆಕರ್ಷಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಈ ಮೂಲಕ ಈ ಫೋನ್‌ ಉತ್ತಮ ಸ್ಮಾರ್ಟ್‌ಫೋನ್‌ ಆಗಿ ಹೊರಹೊಮ್ಮಿದೆ.

Best Mobiles in India

English summary
A substantial discount has been offered on the iPhone 15 Pro. The Pro models especially have crossed the Rs 1 lakh mark. But you can reduce this price by getting some bank cards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+