Motorola phone: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023: ಮೊಟೊರೊಲಾ ಫೋನ್‌ಗಳಿಗೆ ಈ ಪರಿ ಡಿಸ್ಕೌಂಟೇ!..
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಮೊಟೊರೊಲಾ ಫೋನ್‌ಗಳಿಗೆ(Motorola phone) ಹೆಚ್ಚಿನ ಬೇಡಿಕೆ ಇದೆ. ಯಾಕೆಂದರೆ ಈ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಅತ್ಯುತ್ತಮವಾದ ಫೀಚರ್ಸ್ ಅನ್ನು ಹೊಂದಿರಲಿದ್ದು, ದೀರ್ಘ ಬಾಳಿಕೆ ಹಾಗೂ ಉತ್ತಮ ಕಾರ್ಯಕ್ಷಮತೆಯ ಬರವಸೆ ನೀಡುತ್ತವೆ. ಅದರಂತೆ ಈಗ ಈ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಸಿಗಲಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 (Flipkart Big Billion Days 2023) ನಲ್ಲಿ ಮೋಟೋರೋಲಾ ಭಾರತೀಯ ಗ್ರಾಹಕರನ್ನು ಅತ್ಯಾಕರ್ಷಕ ರಿಯಾಯಿತಿಗಳೊಂದಿಗೆ ಸಂತೋಷಪಡಿಸಲು ಮುಂದಾಗಿದೆ. ಪ್ರೀಮಿಯಂ ತಂತ್ರಜ್ಞಾನವನ್ನು ಭಾರತೀಯ ಗ್ರಾಹಕರಿಗೆ ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಮೊಟೊರೊಲಾ ಈ ಎಲ್ಲಾ ಫೋನ್‌ಗಳಿಗೆ ದೊಡ್ಡ ಮಟ್ಟದಲ್ಲಿ ಆಫರ್ ಘೋಷಣೆ ಮಾಡಲಾಗಿದ್ದು, ಯಾವೆಲ್ಲಾ ಫೋನ್‌ಗಳಿಗೆ ಎಷ್ಟು ಡಿಸ್ಕೌಂಟ್ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಮೊಟೊರೊಲಾ ಎಡ್ಜ್ 40 ನಿಯೋ: ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ (Motorola Edge 40 Neo) ವಿಶ್ವದ ಅತ್ಯಂತ ಹಗುರವಾದ IP68-ರೇಟೆಡ್ ಹೊಂದಿರುವ 5G ಸ್ಮಾರ್ಟ್‌ಫೋನ್ ಆಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7030 ಚಿಪ್‌ಸೆಟ್ ಅನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದ್ದು, ಬ್ಯಾಂಕ್ ಕೊಡುಗೆ ಸೇರಿದಂತೆ 19,999 ರೂ.ಗಳಿಗೆ ಇದು ನಿಮಗೆ ದೊರೆಯಲಿದೆ.
ಇನ್ನು ಈ ಫೋನ್ 144Hz ರಿಫ್ರೆಶ್ ರೇಟ್‌ನೊಂದಿಗೆ 6.55 ಇಂಚಿನ ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. OIS ಜೊತೆಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ಪಿಕ್ಸೆಲ್ ನೈಟ್ ವಿಷನ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ, ಮತ್ತು 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆಯುವ ಮೂಲಕ ಅತ್ಯುತ್ತಮ ಕ್ಯಾಮೆರಾ ಫೋನ್ ಎಂದೂ ಸಹ ಎನಿಸಿಕೊಂಡಿದೆ.
ಮೊಟೊ G54 5G: ಈ ಫೋನ್ (Moto G54 5G) ಸಹ ಇಪ್ಪತ್ತು ಸಾವಿರದ ಒಳಗೆ ಲಭ್ಯ ಇರುವ ಫೋನ್‌ಗಳಲ್ಲಿ ಅತ್ಯುತ್ತಮ ಆಯ್ಕೆ ಆಗಿದೆ. ಅಂದರೆ 8GB+128GB ಮತ್ತು 12GB+256GB ರೂಪಾಂತರಗಳಿಗೆ ಕ್ರಮವಾಗಿ 12,999ರೂ. ಮತ್ತು 14,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. 12GB RAM + 256GB ಸ್ಟೋರೇಜ್ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7020 ಆಕ್ಟಾ-ಕೋರ್ ಪ್ರೊಸೆಸರ್, OIS ತಂತ್ರಜ್ಞಾನದೊಂದಿಗೆ 50MP ಶೇಕ್-ಫ್ರೀ ಕ್ಯಾಮೆರಾ ಹಾಗೂ ಇನ್ನಿತರೆ ವಿಶೇಷತೆಗಳನ್ನು ಪಡೆದುಕೊಂಡಿದೆ.
ಮೊಟೊ G84 5G: ಈ ಫೋನ್ (Moto G84 5G) ನಿಮಗೆ ಈ ವಿಶೇಷ ಸೇಲ್‌ನಲ್ಲಿ 16,999 ರೂ.ಗಳಿಗೆ ಲಭ್ಯ ಇರಲಿದೆ. 6.55 ಇಂಚಿನ 120Hz ರಿಫ್ರೆಶ್ ರೇಟ್, 10-ಬಿಟ್ ಕಲರ್ ಡೆಪ್ತ್ ಮತ್ತು 100% DCI-P3 ಬೆಂಬಲದೊಂದಿಗೆ ಪೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 8GB RAM, 128GB ಸ್ಟೋರೇಜ್ ಆಯ್ಕೆ ಹಾಗೂ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಹೊಂದುವ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದೆ.
ಮೊಟೊ G32: ಈ ಫೋನ್ (Moto G32) ನಿಮಗೆ ಅತ್ಯಂತ ಕಡಿಮೆ ದರದಲ್ಲಿ ಲಭ್ಯ ಆಗಲಿದೆ. ಅಂದರೆ 8,999 ರೂ.ಗಳ ಬೆಲೆಯಲ್ಲಿ ಸಿಗಲಿದ್ದು, 6.5 ಇಂಚಿನ ಫುಲ್ ಹೆಚ್‌ಡಿ+ ಡಿಸ್ಪ್ಲೇಯಲ್ಲಿ ವಿನ್ಯಾಸ ಮತ್ತು ದೃಢವಾದ 5,000mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ಯಾಕ್ ಆಗಿದೆ. ಈ ಬೆಲೆ ಶ್ರೇಣಿಯಲ್ಲಿ ಇದು ಅಪರೂಪದ ಫೋನ್ ಎಂದರೆ ತಪ್ಪಾಗಲಾರದು. ಇತರೆ ಬ್ರ್ಯಾಂಡ್‌ನ ಇದೆ ಫೀಚರ್ಸ್ ಹೊಂದಿರುವ ಫೋನ್‌ಗಳು ಹೆಚ್ಚಿನ ಬೆಲೆ ಹೊಂದಿವೆ.
ಮೊಟೊ E13 : ಈ ಫೋನ್ (Moto E13) ನಿಮಗೆ ಇನ್ನೂ ಕಡಿಮೆ ಬೆಲೆಗೆ ಲಭ್ಯ ಇದೆ. ಅಂದರೆ 6,749 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದು. ದೃಢವಾದ 5000mAh ಸಾಮರ್ಥ್ಯದ ಬ್ಯಾಟರಿ ಹಾಗೂ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ ಆಂಡ್ರಾಯ್ಡ್ ಓಎಸ್ 13 ಗೋ ಆವೃತ್ತಿ, ಯುನಿಸಾಕ್ T606 (12 nm) ಪ್ರೊಸೆಸರ್ ಬಲ ಹೊಂದಿದೆ.

ಈ ಫೋನ್‌ಗಳೊಂದಿಗೆ ಮೊಟೊರೊಲಾ ಎಡ್ಜ್ 40 (Motorola Edge 40) ಸ್ಮಾರ್ಟ್‌ಫೋನ್ ಅನ್ನು IP68 ರೇಟಿಂಗ್‌ನೊಂದಿಗೆ ವಿಶ್ವದ ಅತ್ಯಂತ ಸ್ಲಿಮ್ 5G ಸ್ಮಾರ್ಟ್‌ಫೋನ್ ಆಗಿ ಅನಾವರಣಗೊಳಿಸಲು ಸಜ್ಜಾಗಿದೆ. ಮೊಟೊರೊಲಾ ಎಡ್ಜ್ 40, ಅಕ್ಟೋಬರ್ 8 ರಂದು ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ವಿಶೇಷ ಆಫರ್ ಬೆಲೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ಬಲ ಹೊಂದಿರಲಿದ್ದು, ಈ ವಿಭಾಗದ ಮೊದಲ 144Hz 3D ಡಿಸ್‌ಪ್ಲೇ ಯನ್ನು ಹೊಂದರಲಿದೆ.


Click it and Unblock the Notifications








