ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ (1)ಗೆ ಭರ್ಜರಿ ಡಿಸ್ಕೌಂಟ್; ಕೈಗೆಟಕುವ ದರದಲ್ಲಿ ಖರೀದಿಸಿ!
ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಲು ಇದು ಸುವರ್ಣಾವಕಾಶ ಎಂದೇ ಹೇಳಬಹುದು. ಯಾಕೆಂದರೆ, ರೆಡ್ಮಿ, ಆಪಲ್, ಒಪ್ಪೋ ಸೇರಿದಂತೆ ವಿವಿಧ ಕಂಪೆನಿಗಳು ತಮ್ಮ ಫೋನ್‌ಗಳಿಗೆ ಭಾರೀ ರಿಯಾಯಿತಿ ಘೋಷಣೆ ಮಾಡಿವೆ. ಇದರ ಸಾಲಿನಲ್ಲಿ ಈಗ ನಥಿಂಗ್ ಫೋನ್ ಸಹ ಇದೆ.
ಹೌದು, ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶೇಷ ಶೈಲಿಯಲ್ಲಿ ಗುರುತಿಸಿಕೊಂಡಿರುವ ನಥಿಂಗ್ ಫೋನ್‌ಗಳನ್ನು ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಸಕಾಲ ಎನ್ನಬಹುದು. ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇ ಸೇಲ್ ಮೂಲಕ ನಥಿಂಗ್ ಫೋನ್ ಅನ್ನು ಕೇವಲ 7,000ರೂ. ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಮತ್ಯಾಕೆ ತಡ ಈ ಫೋನ್ ಅನ್ನು ಇಷ್ಟೊಂದು ಅಗ್ಗದ ದರದಲ್ಲಿ ಹೇಗೆ ಖರೀದಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ನಾಳೆಗೆ ಎಂದರೆ ಮಾರ್ಚ್ 15 ಕ್ಕೆ ಕೊನೆಯಾಗುತ್ತಿದ್ದು, ಇದರ ನಡುವೆಯೇ ನೀವು ಹಲವಾರು ಸ್ಮಾರ್ಟ್ ಡಿವೈಸ್‌ಗಳನ್ನು ಅಗ್ಗದ ದರದಲ್ಲಿ ಖರಿದಿ ಮಾಡಬಹುದು. ಹಾಗೆಯೇ ನಥಿಂಗ್ ಫೋನ್ (2) ಘೋಷಣೆ ಬಗ್ಗೆ ಈಗಾಗಲೇ ಹಲವು ಮಾಹಿತಿ ಟೆಕ್ ವಲಯದಲ್ಲಿದ್ದು, ಇದರ ನಡುವೆ ನಥಿಂಗ್ ಫೋನ್ (1) ಸಹ ಭಾರೀ ರಿಯಾಯಿತಿ ಪಡೆಯುವ ಮೂಲ ಸದ್ದು ಮಾಡಲು ಮುಂದಾಗಿದೆ. ಅದಕ್ಕೂ ಮೊದಲು ಈ ಫೋನ್‌ನ ಕೆಲವು ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸೋಣ.
ನಥಿಂಗ್ ಫೋನ್ (1) ಫೋನ್ 6.55 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಪ್ಯಾಕ್ ಆಗಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ಇನ್ ಡಿಸ್‌ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್ ಹೊಂದಿದೆ.
ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 778G+ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಆಧಾರಿತ ನಥಿಂಗ್ ಓಎಸ್ ರನ್ ಮಾಡಲಿದೆ. ಇನ್ನುಳಿದಂತೆ ಈ ಫೋನ್ 12GB RAM ಹಾಗೂ 256GB ಇಂಟರ್ ಸ್ಟೋರೇಜ್ ಸೇರಿದಂತೆ ಮೂರು ವೇರಿಯಂಟ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಿದೆ.

ನಥಿಂಗ್ ಫೋನ್ (1) ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿರುವ 50MP ಪ್ರಾಥಮಿಕ ಸೆನ್ಸರ್ ಮತ್ತು 50MP ಅಲ್ಟ್ರಾ ವೈಡ್ ಸೆನ್ಸರ್ ಅತ್ಯುದ್ಭುತ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿ. ಹಾಗೆಯೇ ಸೆಲ್ಫಿ ಉದ್ದೇಶಕ್ಕೆ 16MP ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಇನ್ನುಳಿದಂತೆ ಈ ವಿಶೇಷ ಫೋನ್ 4,500 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಈ ಫೋನ್ ಸದ್ಯಕ್ಕೆ ಮೂರು ವೇರಿಯಂಟ್‌ನಲ್ಲಿ ಲಭ್ಯವಾಗುತ್ತಿದ್ದು, ನೀವು ಇದನ್ನು ಈ ಫ್ಲಿಪ್‌ಕಾರ್ಟ್ ವಿಶೇಷ ಸೇಲ್‌ನಲ್ಲಿ ಅಗ್ಗದ ದರದಲ್ಲಿ ಖರೀದಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
ನಥಿಂಗ್ ಫೋನ್ (1) ಮೂರು ವೇರಿಯಂಟ್‌ನಲ್ಲಿ ಕಂಡುಬರಲಿದ್ದು, ಇದರಲ್ಲಿ 8GB/128GB ನ ವೇರಿಯಂಟ್ ಫೋನ್ 32,999ರೂ. ಗಳು, 8GB/256GB ವೇರಿಯಂಟ್‌ಗೆ 35,999 ರೂ. ಗಳು ಹಾಗೂ 12GB/256GB ವೇರಿಯಂಟ್‌ಗೆ 38,999ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಅದಾಗ್ಯೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗಳಿಗೆ ಇನ್ನೂ ಕಡಿಮೆ ಬೆಲೆ ನಿಗದಿ ಮಾಡಲಾಗಿದೆ. ಹೀಗಾಗಿಯೇ ನೀವು 7,500ರೂ.ಗಳಿಗೆ ಖರೀದಿ ಮಾಡಬಹುದು.

ನಥಿಂಗ್ ಫೋನ್ (1) ಫೋನ್‌ನ ಸಾಮಾನ್ಯ ವೇರಿಯಂಟ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 9,500 ರೂ.ಗಳ ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ 28,499ರೂ. ಗಳ ಬೆಲೆ ಪಟ್ಟಿ ಪಡೆದಿರುವ ಫೋನ್ ಅನ್ನು ಗ್ರಾಹಕರು ಅಮೆರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ 27,499 ರೂ. ಗಳಲ್ಲಿ ಫೋನ್ ಲಭ್ಯವಾಗಲಿದೆ.
ಈ ಎಲ್ಲಾ ಆಫರ್‌ನೊಂದಿಗೆ ವಿನಿಮಯ ಆಫರ್ ಅನ್ನು ಸಹ ನೀಡಲಾಗಿದ್ದು, ನಿಮ್ಮ ಹಳೆಯ ಫೋನ್ ಅನ್ನು ಸೇಲ್ ಮಾಡುವ ಮೂಲಕ ಈ ಹೊಸ ಫೋನ್ ಮೇಲೆ ಬರೋಬ್ಬರಿ 20,000ರೂ. ಗಳ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಕಾರಣಕ್ಕೆ ನಥಿಂಗ್ ಫೋನ್ (1) 7,499 ರೂ. ಗಳಿಗೆ ಸಿಗಲಿದೆ. ಆದರೆ, ನೀವು ಸೇಲ್ ಮಾಡುವ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿ ಇದ್ದರೆ ಮಾತ್ರ ಇಷ್ಟು ರಿಯಾಯಿತಿ ಲಭ್ಯವಾಗಲಿದೆ.


Click it and Unblock the Notifications








