8GB RAM ನ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಫೋನ್‌ಗೆ ದೊಡ್ಡ ಡಿಸ್ಕೌಂಟ್!
ಸ್ಯಾಮ್‌ಸಂಗ್ ಫೋನ್‌ಗಳು (Samsung phone) ಮಾರುಕಟ್ಟೆಯಲ್ಲಿ ವಿವಿಧ ಆಯ್ಕೆಗಳಲ್ಲಿ ಲಭ್ಯ ಇವೆ. ಅದರಲ್ಲೂ ಇತ್ತೀಚೆಗಷ್ಟೇ ಕೆಲವು ಸುಧಾರಿತ ಫೀಚರ್ಸ್ ಆಯ್ಕೆ ಇರುವ ಫೋನ್‌ಗಳನ್ನು ಸಹ ಅನಾವರಣ ಮಾಡಿದ್ದು, ಈ ನಡುವೆ ಅತ್ಯಂತ ಜನಪ್ರಿಯವಾಗಿದ್ದ 8GB RAM ಆಯ್ಕೆಯ ಫೋನ್‌ಗೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ(Flipkart) ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G (Samsung Galaxy M33 5G-8GB RAM) ಗೆ ಭರ್ಜರಿ ಆಫರ್ ನೀಡಲಾಗಿದೆ. ಈ ಫೋನ್ 120 Hz ನ ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ, ಕ್ವಾಡ್ ರಿಯರ್ ಕ್ಯಾಮೆರಾ ಹಾಗೂ ಸ್ಯಾಮ್‌ಸಂಗ್ ಎಕ್ಸಿನೋಸ್ 1280 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಅಗ್ಗದ ಬೆಲೆಗೆ ಅಂದರೆ ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಬಗ್ಗೆ ತಿಳಿದುಕೊಳ್ಳೋಣ. ಅದರಂತೆ ಈ ಫೋನ್ 6.6 ಇಂಚಿನ TFT LCD ಡಿಸ್‌ಪ್ಲೇ ಹೊಂದಿದ್ದು, 400ppi ಪಿಕ್ಸೆಲ್ ಸಾಂದ್ರತೆ ಜೊತೆಗೆ 1080 x 2408 ಸ್ಕ್ರೀನ್ ರೆಸಲ್ಯೂಶನ್ ಆಯ್ಕೆ ಪಡೆದಿದೆ. ಜೊತೆಗೆ 120 Hz ನ ರಿಫ್ರೆಶ್ ರೇಟ್ ಮತ್ತು 20:9 ಆಕಾರ ಅನುಪಾತದೊಂದಿಗೆ ಕಾಣಿಸಿಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಪ್ರೊಸೆಸರ್ ಮಾಹಿತಿ: ಇದರೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಫೋನ್ ಸ್ಯಾಮ್‌ಸಂಗ್ ಎಕ್ಸಿನೋಸ್ 1280 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 8GB RAM ಮೂಲಕ ವಿಡಿಯೋ ನೋಡುವಾಗ, ಗೇಮ್ ಆಡುವಾಗ ಉತ್ತಮ ಅನುಭವ ನೀಡಲಿದೆ. ಇದರಲ್ಲಿ ಡ್ಯುಯಲ್-ಕೋರ್ ಮತ್ತು ಹೆಕ್ಸಾಕೋರ್ ಆವೃತ್ತಿಗಳೊಂದಿಗೆ ಆಕ್ಟಾ-ಕೋರ್ CPU ಶಕ್ತಿ ಇದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಕ್ಯಾಮೆರಾ ರಚನೆ: ಉಳಿದಂತೆ ಈ ಫೋನ್ ಕ್ವಾಡ್ ಕೋರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು ಅದರಲ್ಲಿ 50 ಮೆಗಾಪಿಕ್ಸೆಲ್‌ನ f/1.8 ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ನ f/2.4 ಮ್ಯಾಕ್ರೋ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ನ f/2.4 ಡೆಪ್ತ್ ಕ್ಯಾಮೆರಾ ಮತ್ತು 5ಮೆಗಾಪಿಕ್ಸೆಲ್‌ನ f/2.2 ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಇದ್ದು, 8 ಮೆಗಾಪಿಕ್ಸೆಲ್‌ನ ರೆಸಲ್ಯೂಶನ್ ಹೊಂದಿರುವ ಸೆಲ್ಫಿ ಕ್ಯಾಮೆರಾ ಮೂಲಕ ಸೆಲ್ಫಿ ಪ್ರಿಯರಿಗೆ ಅಚ್ಚು ಮೆಚ್ಚಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 25W ಫಾಸ್ಟ್ ಚಾರ್ಜಿಂಗ್ ಸಿಸ್ಟಮ್‌ಗೆ ಬೆಂಬಲ ನೀಡಲಿದೆ. ಉಳಿದಂತೆ ಸುಧಾರಿತ ವೈ ಫೈ ಆವೃತ್ತಿ, ಬ್ಲೂಟೂತ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಹಾಗೂ ಭದ್ರತಾ ಫೀಚರ್ಸ್ ಆಯ್ಕೆಯನ್ನು ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಆಫರ್ ವಿವರ: ಇನ್ನು ಪ್ರಮುಖ ವಿಷಯಕ್ಕೆ ಬರುವುದಾದರೆ ಈ ಫೋನ್ 25,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಆದರೆ ನೀವೀಗ 18,989ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಮೊದಲೇ ತಿಳಿಸಿದಂತೆ ಈ ಫೋನ್ ಮೇಲೆ ಬರೋಬ್ಬರಿ 26% ರಿಯಾಯಿತಿ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ಸಹ ಲಭ್ಯ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಗೂ ಆಫರ್: ಇನ್ನು ಮತ್ತೊಂದು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಗೂ ಭರ್ಜರಿ ಆಫರ್ ನೀಡಲಾಗಿದೆ. ಈ ಫೋನ್ 17,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 14,990ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಈ ಫೋನ್ 6.6 ಇಂಚಿನ PLS LCD ಡಿಸ್‌ಪ್ಲೇ ಹೊಂದಿದ್ದು ಇದು ವಾಟರ್‌ಡ್ರಾಪ್ ನಾಚ್ ಶೈಲಿ ಪಡೆದಿದೆ. ಇದರೊಂದಿಗೆ 400ppi ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್ ಪ್ಯಾನೆಲ್ ಹಾಗೂ 1080 x 2408 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, ಸಿನಿಮಾ ವೀಕ್ಷಣೆಗೆ ಹಾಗೂ ಗೇಮ್ ಆಡಲು ಹೊಸ ಅನುಭವವನ್ನೇ ಪಡೆದುಕೊಳ್ಳಬಹುದಾಗಿದೆ.
ಇದರೊಂದಿಗೆ 50MP ಮುಖ್ಯ ಕ್ಯಾಮೆರಾ, 2MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾವನ್ನು ಆಯ್ಕೆ ಪಡೆದಿರುವ ಈ ಫೋನ್, HDR ಮೋಡ್, ಆಟೋ ಫ್ಲ್ಯಾಶ್, ಟಚ್ ಟು ಫೋಕಸ್, HDR ಮೋಡ್ ಮತ್ತು ಎಲ್ಇಡಿ ಫ್ಲ್ಯಾಶ್ ಆಯ್ಕೆಯನ್ನೂ ಸಹ ಹೊಂದಿದೆ. ಇದರ ಜೊತೆಗೆ 13MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.


Click it and Unblock the Notifications








