ಐಫೋನ್12 ಗೆ ಬೊಂಬಾಟ್ ಡಿಸ್ಕೌಂಟ್; ಆಫರ್ ಬೆಲೆ, ಫೀಚರ್ಸ್ ತಿಳಿಯಿರಿ!
ಪ್ರಮುಖ ಸ್ಮಾರ್ಟ್‌ಫೋನ್‌ಗಳ ಮೇಲೆ ಇ-ಕಾಮರ್ಸ್ ತಾಣಗಳು ಭರ್ಜರಿ ಆಫರ್ ಘೋಷಣೆ ಮಾಡುತ್ತಿದ್ದು, ಇದರ ನಡುವೆ ದುಬಾರಿ ಬೆಲೆಯ ಆಫಲ್ ಫೋನ್‌ಗಳಿಗೂ ಆಕರ್ಷಕ ಆಫರ್ ಘೋಷಣೆ ಮಾಡಲಾಗಿದೆ. ಈ ಮೂಲಕ ಡಿಸ್ಕೌಂಟ್ ಬೆಲೆಯಲ್ಲಿ ಐಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಹೌದು, ಈಗಾಗಲೇ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ವಿವಿಧ ಫೋನ್‌ಗಳಿಗೆ ಆಫರ್ ಘೋಷಣೆ ಮಾಡಲಾಗಿದ್ದು, ಇದೀಗ ಆಪಲ್ ಐಫೋನ್ 12 ಫೋನ್‌ಗೂ ಆಕರ್ಷಕ ರಿಯಾಯಿತಿ ನೀಡಲಾಗಿದೆ. ಈ ಫೋನ್ 60,000 ರೂ. ಗಳ ಮೂಲ ಬೆಲೆ ಹೊಂದಿದೆ. ಆದರೆ, ಈಗ ಇದರ ಅರ್ಧ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಹಾಗಿದ್ರೆ, ಈ ಫೋನ್ ಖರೀದಿ ಮಾಡಲು ಏನೆಲ್ಲಾ ಆಫರ್ ಇದೆ? ಎಂಬುದನ್ನು ವಿವರಿಸಿದ್ದೇವೆ ಓದಿರಿ.

ಐಫೋನ್ 12 ಗೆ ಭರ್ಜರಿ ಡಿಸ್ಕೌಂಟ್: ಅಮೆಜಾನ್‌ನಲ್ಲಿ ಈ ಫೋನ್‌ಗೆ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಈ ರಿಯಾಯಿತಿಯು ದೀರ್ಘಕಾಲದವರೆಗೆ ಲಭ್ಯವಿರುವುದಿಲ್ಲ ಎಂಬುದನ್ನು ಗಮನಿಸುವುದು ಅತಿಮುಖ್ಯ. ಆದ್ದರಿಂದ ನೀವು ಐಫೋನ್12 ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದು ಪರಿಪೂರ್ಣ ಸಮಯವಾಗಿದೆ. ಈ ಮೂಲಕ ಫೋನ್ ಅನ್ನು ನೀವು ಕೇವಲ 34,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.
ಅಮೆಜಾನ್‌ನಲ್ಲಿರುವ ಆಫರ್ ಏನು?: ಅಮೆಜಾನ್ ಈ ಫೋನ್‌ನ 64GB ವೇರಿಯಂಟ್‌ಗೆ 53,999 ರೂ. ಗಳನ್ನು ನಿಗದಿ ಮಾಡಲಾಗಿದ್ದು, ಈ ಮೂಲಕ 5,901 ರೂ. ಗಳ ಬೆಲೆ ಕಡಿತದೊಂದಿಗೆ ಈ ಫೋನ್ ಕಾಣಿಸಿಕೊಂಡಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ವಿನಿಮಯ ಆಫರ್ ಬಳಕೆ ಮಾಡಿಕೊಳ್ಳಬಹುದು.
ಐಫೋನ್ 12 ಕ್ಕೆ ವಿನಿಮಯ ಆಫರ್: ಈ ಫೋನ್ ಖರೀದಿಸಲು ಅಮೆಜಾನ್ ವಿನಿಮಯ ಆಫರ್ ನೀಡಲಾಗಿದ್ದು, ಇದರಲ್ಲಿ ನೀವು 19,000 ರೂ. ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಆಫರ್ ನಿಮ್ಮ ಪ್ರದೇಶದಲ್ಲಿ ಇದೆಯೇ ಎಂದು ಒಮ್ಮೆ ಪಿನ್‌ಕೋಡ್ ನಮೂದಿಸುವ ಮೂಲಕ ಚೆಕ್ ಮಾಡಿಕೊಳ್ಳಿ. ಅದರಲ್ಲೂ ನಿಮ್ಮ ಫೋನ್ ಸುಸ್ಥಿತಿಯಲ್ಲಿ ಇದ್ದರೆ ಮಾತ್ರ ಇಷ್ಟು ಪ್ರಮಾಣದ ರಿಯಾಯಿತಿ ಸಿಗಲಿದೆ ಎಂಬುದು ಗೊತ್ತಿರಲಿ.

ಐಫೋನ್ 12 ಗೆ ಬ್ಯಾಂಕ್ ಆಫರ್: ಅಮೆಜಾನ್ ಈ ಫೋನ್ ಖರೀದಿಯ ಮೇಲೆ ಯಾವುದೇ ಬ್ಯಾಂಕ್ ಕಾರ್ಡ್‌ಗಳ ಮೇಲೆ ಕೊಡುಗೆ ನೀಡಿಲ್ಲ. ಆದರೆ, ನೀವು ಈ ಫೋನ್ ಅನ್ನು ಇಎಮ್‌ಐ ಮೂಲಕ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಅದೂ ಸಹ ಹೆಚ್ಚುವರಿ ಬಡ್ಡಿಯ ಹೊರೆ ಇಲ್ಲದೆ. ಇದರೊಂದಿಗೆ ನೀವು ಈ ಫೋನ್ ಖರೀದಿಯಲ್ಲಿ ಸ್ಪಾಟಿಫೈ ಚಂದಾದಾರಿಕೆಯನ್ನು ಆರು ತಿಂಗಳವರೆಗೆ ಪಡೆದುಕೊಳ್ಳಬಹುದಾಗಿದೆ.
ಐಫೋನ್ 12 ಪ್ರಮುಖ ಫೀಚರ್ಸ್: ಐಫೋನ್ 12 6.ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಇದು 1170 x 2532 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರೊಂದಿಗೆ ಬಯೋನಿಕ್ A14 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 4 GB RAM ಹಾಗೂ 64 GB ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದೆ. ಬೇಸರ ಏನೆಂದರೆ ಇದರಲ್ಲಿ ನಿಮಗೆ ಹೆಚ್ಚುವರಿ ಸ್ಟೋರೇಜ್‌ಗೆ ಅವಕಾಶ ನೀಡಿಲ್ಲ.

ಇನ್ನುಳಿದಂತೆ ಓಐಎಸ್ ಬೆಂಬಲದ 12 ಮೆಗಾಪಿಕ್ಸೆಲ್ + 12 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಹೊಂದಿದ್ದು, 4K @ 24 fps UHD ಸಾಮರ್ಥ್ಯದಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಜೊತೆಗೆ ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಕ್ಯಾಮರಾ ಆಯ್ಕೆ ನೀಡಲಾಗಿದ್ದು, ಇನ್ನುಳಿದಂತೆ ಕನೆಕ್ಟಿವಿಟಿ ವಿಚಾರದಲ್ಲಿ ಈ ಫೋನ್ 4G, 5G, VoLTE ಬ್ಲೂಟೂತ್ ಆವೃತ್ತಿ v5.0, ವೈ-ಫೈ, ಎನ್‌ಎಫ್‌ಸಿ ಆಯ್ಕೆಯನ್ನು ಪಡೆದುಕೊಂಡಿದೆ.


Click it and Unblock the Notifications








