Home
ಸುದ್ದಿಜಾಲ

ಈ ಜನಪ್ರಿಯ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..1000ರೂ. ಒಳಗೆ ಲಭ್ಯ!

ಸ್ಮಾರ್ಟ್‌ ಡಿವೈಸ್ ಮಾರುಕಟ್ಟೆಯಲ್ಲಿ ಇದೀಗ ಸ್ಮಾರ್ಟ್‌ವಾಚ್‌ಗಳು ಅಧಿಕ ಡಿಮ್ಯಾಂಡ್ ಪಡೆದಿವೆ. ಆ ಪೈಕಿ ಬಜೆಟ್‌ ದರದಲ್ಲಿ ಲಭ್ಯ ಇರುವ ಫೋನ್‌ಗಳು ಹೆಚ್ಚು ಆಕರ್ಷಕ ಎನಿಸಿವೆ. ಫೈರ್‌ಬೋಲ್ಟ್‌ ಸಂಸ್ಥೆಯು ಭಿನ್ನ ಶ್ರೇಣಿಯ ವಾಚ್‌ ಸರಣಿ ಮೂಲಕ ಗ್ರಾಹಕರನ್ನ ಸೆಳೆದಿದೆ. ಆದರೆ ಇದೀಗ ಸಂಸ್ಥೆಯು ಫೈರ್‌ಬೋಲ್ಟ್‌ ನಿಂಜಾ ಫಿಟ್‌ ಸ್ಮಾರ್ಟ್‌ವಾಚ್‌ ಭಾರೀ ರಿಯಾಯಿತಿ ಪಡೆದಿದೆ.

ಹೌದು, ಹಬ್ಬದ ಅಂಗವಾಗಿ ಅಮೆಜಾನ್ ಸಂಸ್ಥೆಯು ಕೆಲವು ವಾಚ್‌ ಡಿವೈಸ್‌ಗಳಿಗೆ ರಿಯಾಯಿತಿ ನೀಡಿದೆ. ಅದೇ ರೀತಿ ಫೈರ್‌ಬೋಲ್ಟ್‌ ನಿಂಜಾ ಫಿಟ್‌ ಸ್ಮಾರ್ಟ್‌ವಾಚ್‌ ಶೇ. 88% ರಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಆಫರ್‌ನಲ್ಲಿ ಈ ಸ್ಮಾರ್ಟ್‌ ವಾಚ್‌ ಅನ್ನು ಗ್ರಾಹಕರು 999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಹೆಚ್ಚುವರಿ ಕೊಡುಗೆಗಳು ಸಹ ದೊರೆಯುತ್ತವೆ.

ಈ ಜನಪ್ರಿಯ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..1000ರೂ. ಒಳಗೆ ಲಭ್ಯ!

ಇನ್ನು ಫೈರ್‌ಬೋಲ್ಟ್‌ ನಿಂಜಾ ಫಿಟ್‌ ಸ್ಮಾರ್ಟ್‌ ವಾಚ್‌ 123 ಸ್ಪೋರ್ಟ್ಸ್‌ ಮೋಡ್‌ಗಳ ಆಯ್ಕೆ ಹೊಂದಿದ್ದು, ರೆಡ್, ಬ್ಲೂ, ಗ್ರೀನ್‌, ಗ್ರೇ, ಬ್ಲ್ಯಾಕ್‌, ಬಿಂಜ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತದೆ. ಇದು ಅಲ್ಟ್ರಾ ತೀನ್ ರಚನೆ ಪಡೆದಿದ್ದು, ತುಂಬಾ ಹಗುರ ಎನಿಸುತ್ತದೆ. ಹಾಗೆಯೇ ಇದು ಹಾರ್ಟ್‌ ರೇಟ್‌ ಟ್ರ್ಯಾಕಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಜೊತೆಗೆ ಸ್ಮಾರ್ಟ್‌ ಎಸ್‌ಎಮ್‌ಎಸ್‌ ಅಲರ್ಟ್‌ ಆಯ್ಕೆ ಯನ್ನು ಒಳಗೊಂಡಿದ್ದು, ಗ್ರಾಹಕರನ್ನು ಮೋಡಿ ಮಾಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ ವಾಚ್‌ನ ಇತರೆ ಫೀಚರ್ಸ್‌ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಈ ಜನಪ್ರಿಯ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..1000ರೂ. ಒಳಗೆ ಲಭ್ಯ!

ಫೀಚರ್ಸ್‌ ಹೀಗಿವೆ

ಫೈರ್‌ಬೋಲ್ಟ್‌ ಕಂಪನಿಯ ನಿಂಜಾ ಫಿಟ್‌ ವಾಚ್ 1.69 ಇಂಚಿನ ಫುಲ್‌ ಟಚ್‌ ಹೆಚ್‌ಡಿ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಸ್ಕ್ರೀನ್‌ ಆಕರ್ಷಕ ಲುಕ್‌ನಲ್ಲಿದೆ. ಡಿಸ್‌ಪ್ಲೇಯು 240 x 280 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದ್ದು, ಈ ಡಿಸ್‌ಪ್ಲೇ ಯ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 218 ppi ಹೊಂದಿದೆ.

ಫೈರ್‌ಬೋಲ್ಟ್‌ ಕಂಪನಿಯ ಈ ವಾಚ್‌ ಲಿಥೀಯಂ ಬ್ಯಾಟರಿ ಪಡೆದಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡುವ ಸಾಮರ್ಥ್ಯ ಒಳಗೊಂಡಿದೆ. ಇನ್ನು ಸ್ಟ್ಯಾಂಡ್‌ಬೈ ಟೈಮ್‌ 1.31 ತಿಂಗಳು ಆಗಿದ್ದು, ಇದಲ್ಲದೇ ಈ ಸ್ಮಾರ್ಟ್‌ ವಾಚ್‌ ಬ್ಲೂಟೂತ್ ಕರೆ ಮಾಡುವ ಸೌಲಭ್ಯ ಸಹ ಪಡೆದಿದೆ. ಈ ಸಾಧನವು ಆಂಡ್ರಾಯ್ಡ್‌ ಮತ್ತು ಐಓಎಸ್‌ ಗೂ ಸಪೋರ್ಟ್‌ ಪಡೆದಿದೆ.

ಈ ಜನಪ್ರಿಯ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..1000ರೂ. ಒಳಗೆ ಲಭ್ಯ!

ಪ್ರಮುಖ ಫೀಚರ್ಸ್‌ಗಳು ಹೀಗಿವೆ

ಫೈರ್‌ಬೋಲ್ಟ್‌ ಕಂಪನಿಯ ನಿಂಜಾ ಫಿಟ್‌ ವಾಚ್‌ ಹಾರ್ಟ್‌ ರೇಟ್‌ ಮಾನಿಟರಿಂಗ್, SpO2 ಮಾನಿಟರ್, ಕ್ಯಾಲೋರಿ ಕೌಂಟ್‌, ಸ್ಟೆಪ್‌ ಕೌಂಟ್‌, ಸ್ಲಿಪ್‌ ಮಾನಿಟರ್ ನಂತಹ ಕೆಲವು ಅಗತ್ಯ ಸೇವೆ ಹಾಗೂ ಆಯ್ಕೆಗಳ ಕೂಡಾ ಇದು ಪಡೆದಿದೆ. ಇದರ ಜೊತೆಗೆ ಅಲಾರಾಂ ಕ್ಲಾಕ್, ಸ್ಟಾಪ್‌ವಾಚ್‌, ಟೈಮರ್‌ ಹಾಗೂ ರಿಮೈಂಡರ್‌ ಸೌಲಭ್ಯಗಳು ಇವೆ. ಹಾಗೆಯೇ ಈ ವಾಚ್‌ ತೆಳುವಾದ ರಚನೆ ಹೊಂದಿದ್ದು, ಸ್ಟೈಲಿಶ್‌ ಲುಕ್‌ ಹೊಂದಿದೆ.

ಅಲ್ಲದೇ ಫೈರ್‌ಬೋಲ್ಟ್‌ ಕಂಪನಿಯ ನಿಂಜಾ ಫಿಟ್‌ ವಾಚ್ ಫೇಸ್‌ಗಳಲ್ಲಿ ಅನಿಯಮಿತ ವಾಗಿ ಕಸ್ಟಮೈಸ್ ಹೊಂದಿದ್ದು ಮತ್ತು ಆಪ್‌ ಮೂಲಕ ಬಹು ವಾಚ್ ಫೇಸ್‌ಗಳು, ಇನ್‌ಬಿಲ್ಟ್‌ ಸೋಶೀಯಲ್ ಮೀಡಿಯಾ ನೋಟಿಫೀಕೇಶನ್ ಆಯ್ಕೆ ಇದೆ. ಸುಮಾರು 100 ಕ್ಕೂ ಅಧಿಕ ವಾಚ್‌ಫೇಸ್‌ಗಳ ಆಯ್ಕೆ ಬಳಕೆದಾರರಿಗೆ ಲಭ್ಯ. ಸ್ಮಾರ್ಟ್‌ವಾಚ್‌ ಮೂಲಕ ಫೋನಿನ ಕ್ಯಾಮೆರಾ, ಮ್ಯೂಸಿಕ್‌ ಕಂಟ್ರೋಲ್‌ ಆಯ್ಕೆಗಳು ಕೂಡಾ ಇವೆ. ವಾಕ್‌, ಡ್ರಿಂಕ್‌ ವಾಟರ್‌ ನಂತಹ ರಿಮೈಂಡರ್‌ಗಳ ಆಯ್ಕೆ ಪಡೆದಿದೆ.

Best Mobiles in India

English summary
big price cut on Fire-Boltt Ninja Fit smartwatch in India. price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+