Home
ಸುದ್ದಿಜಾಲ

ಹಬ್ಬದ ಅಂಗವಾಗಿ ರೆಡ್ಮಿಯ ಈ ಫೋನಿಗೆ ಭರ್ಜರಿ ಬೆಲೆ ಇಳಿಕೆ!..ಅಗ್ಗದ ಬೆಲೆ ಲಭ್ಯ!

ಲೀಡಿಂಗ್‌ ಇ ಕಾಮರ್ಸ್‌ ತಾಣ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ದಸರಾ ಹಬ್ಬದ ಅಂಗವಾಗಿ ಬಿಗ್ ದಸರಾ ಸೇಲ್‌ ಆಯೋಜಿಸಿದ್ದು, ಈ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಈ ಮಾರಾಟದಲ್ಲಿ ಬಹುತೇಕ ಎಲ್ಲ ಮೊಬೈಲ್‌ ಸಂಸ್ಥೆಗಳ ಫೋನ್‌ಗಳಿಗೆ ಆಕರ್ಷಕ ಕೊಡುಗೆ ಲಭ್ಯ ಮಾಡಿದೆ. ಅದರಲ್ಲಿಯೂ ರೆಡ್ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಸಖತ್ ಆಫರ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನಲ್ಲಿ ದಸರಾ ಸೇಲ್ ಚಾಲ್ತಿ ಇದ್ದು, ರೆಡ್ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಶೇ. 39% ರಷ್ಟು ಬೊಂಬಾಟ್ ಡಿಸ್ಕೌಂಟ್‌ ನಲ್ಲಿ ಕಾಣಿಸಿಕೊಂಡಿದ್ದು, 128 GB ಸ್ಟೋರೇಜ್‌ ವೇರಿಯಂಟ್‌ ಫೋನ್‌ 10,249ರೂ. ಗಳ ದರದಲ್ಲಿ ಲಭ್ಯ ಇದೆ. ಇದರ ಜೊತೆಗೆ ಗ್ರಾಹಕರಿಗೆ ಕೆಲವು ಆಯ್ದ ಬ್ಯಾಂಕ್ ಡಿಸ್ಕೌಂಟ್‌, ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಾಗುತ್ತವೆ. ಒಟ್ಟಾರೇ ಎಲ್ಲ ಕೊಡುಗೆ ಸೇರಿ ಗ್ರಾಹಕರು 9,249ರೂ. ಗಳಲ್ಲಿ ಖರೀದಿಗೆ ಅವಕಾಶ ಇದೆ.

ಹಬ್ಬದ ಅಂಗವಾಗಿ ರೆಡ್ಮಿಯ ಈ ಫೋನಿಗೆ ಭರ್ಜರಿ ಬೆಲೆ ಇಳಿಕೆ!..ಅಗ್ಗದ ಬೆಲೆ ಲಭ್ಯ!

ಇನ್ನು ರೆಡ್ಮಿಯ ಈ ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 18W ಫಾಸ್ಟ್‌ ಚಾರ್ಜಿಂಗ್ ಆಯ್ಕೆ ಅನ್ನು ಸಪೋರ್ಟ್‌ ಮಾಡುತ್ತದೆ. ಇನ್ನು ಈ ಮೊಬೈಲ್‌ ಗ್ರೀನ್‌ ಮತ್ತು ಪರ್ಪಲ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ದೊರೆಯುತ್ತದೆ. ಹಾಗಾದರೆ ರೆಡ್ಮಿ 11 ಪ್ರೈಮ್‌ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಹಾಗೂ ರಚನೆ ಮಾಹಿತಿ

ರೆಡ್ಮಿ 11 ಪ್ರೈಮ್‌ 6.58 ಇಂಚಿನ ಡಿಸ್ಪ್ಲೇ ಅನ್ನು ಪಡೆದುಕೊಂಡಿದ್ದು, ಇದರ ಡಿಸ್‌ಪ್ಲೇಯು 1080 x 2408 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 20:9 ಆಕಾರ ಅನುಪಾತ ಪಡೆದಿದ್ದು, ಇದರೊಂದಿಗೆ 401ppi ಪಿಕ್ಸೆಲ್ ಸಾಂದ್ರತೆ ಹಾಗೂ 90Hz ನ ರಿಫ್ರೆಶ್ ರೇಟ್‌ ಕೂಡಾ ಒಳಗೊಂಡಿದೆ. ಡಿಸ್‌ಪ್ಲೇ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಹೋಲ್ ಆಯ್ಕೆ ಇದ್ದು, ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಹಬ್ಬದ ಅಂಗವಾಗಿ ರೆಡ್ಮಿಯ ಈ ಫೋನಿಗೆ ಭರ್ಜರಿ ಬೆಲೆ ಇಳಿಕೆ!..ಅಗ್ಗದ ಬೆಲೆ ಲಭ್ಯ!

ಪ್ರೊಸೆಸರ್‌ ಪವರ್‌ ಹಾಗೂ ಮೆಮೊರಿ

ರೆಡ್ಮಿ 11 ಪ್ರೈಮ್ ಈ ಫೋನ್ ಆಂತರಿಕ ಕಾರ್ಯಾಚರಣೆಗಳ ನಡೆಸಲು ಕಾರ್ಟೆಕ್ಸ್ A76 ಮತ್ತು ಕಾರ್ಟೆಕ್ಸ್ A55 ವಿನ್ಯಾಸಗಳೊಂದಿಗೆ ಆಕ್ಟಾ-ಕೋರ್ CPU ಕೆಲಸ ಮಾಡುತ್ತದೆ. ಅಲ್ಲದೇ ಇದು ಮೀಡಿಯಾ ಟೆಕ್ ಹಿಲಿಯೋ G99 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್ ಒಳಗೊಂಡಿದ್ದು, ಆಂಡ್ರಾಯ್ಡ್‌ 12 ಓಎಸ್ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಇದರ ಜೊತೆಗೆ ಮಾಲಿ-G57 MP2 GPU ಆಯ್ಕೆ ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ

ರೆಡ್ಮಿ ಸಂಸ್ಥೆಯ ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ (Triple rear camera) ರಚನೆ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ನ ವೈಡ್-ಆಂಗಲ್ ಪಡೆದಿದೆ. ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ನ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ 8 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಕೂಡಾ ನೀಡಲಾಗಿದೆ.

ಹಬ್ಬದ ಅಂಗವಾಗಿ ರೆಡ್ಮಿಯ ಈ ಫೋನಿಗೆ ಭರ್ಜರಿ ಬೆಲೆ ಇಳಿಕೆ!..ಅಗ್ಗದ ಬೆಲೆ ಲಭ್ಯ!

ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ ಹಾಗೂ ಇತರೆ

ರೆಡ್ಮಿ ಸಂಸ್ಥೆಯ ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯ ಕೂಡಾ ಒಳಹೊಂಡಿದೆ. ಅದಲ್ಲದೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇತ್ತೀಚಿನ ಅಗತ್ಯ ಆಯ್ಕೆಗಳನ್ನು ಸಹ ಇದು ಪಡೆದುಕೊಂಡಿದೆ.

Best Mobiles in India

English summary
Big price down on REDMI 11 Prime mobile on flipkart dussehra sale. check offer price, specifications and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+