Home
ಸುದ್ದಿಜಾಲ

ನೋಕಿಯಾ X30 5G ಫೋನಿಗೆ ಜಬರ್ದಸ್ತ್‌ ಡಿಸ್ಕೌಂಟ್‌!..ಅಚ್ಚರಿ ಮೂಡಿಸಿದ ಆಫರ್‌ ಬೆಲೆ!

ಹಬ್ಬದ ಅಂಗವಾಗಿ ಅಮೆಜಾನ್ ಸಂಸ್ಥೆಯು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್‌ ಆಯೋಜಿಸಿದೆ. ಈ ಮಾರಾಟ ಮೇಳದಲ್ಲಿ ಬಹುತೇಕ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ನೋಕಿಯಾ X30 5G ಸ್ಮಾರ್ಟ್‌ಫೋನ್‌ ಕೂಡಾ ಬೊಂಬಾಟ್‌ ರಿಯಯಾತಿ ಪಡೆದಿದೆ.

ಹೌದು, ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಸಂಸ್ಥೆಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್‌ ನಲ್ಲಿ ನೋಕಿಯಾ X30 5G ಸ್ಮಾರ್ಟ್‌ಫೋನ್‌ ಶೇ. 33% ರಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿದೆ. ಈ ಪೋನಿನ 8 + 256 GB ವೇರಿಯಂಟ್‌ 54,99 9ರೂ. ಪ್ರೈಸ್‌ಟ್ಯಾಗ್‌ ಪಡೆದಿದ್ದು, ಆಫರ್‌ನಲ್ಲಿ 36,999ರೂ. ಗಳ ದರದಲ್ಲಿ ಖರೀದಿಗೆ ಲಭ್ಯ.

ನೋಕಿಯಾ X30 5G ಫೋನಿಗೆ ಜಬರ್ದಸ್ತ್‌ ಡಿಸ್ಕೌಂಟ್‌!..ಅಚ್ಚರಿ ಮೂಡಿಸಿದ ಆಫರ್‌ ಬೆಲೆ

ಅಂದಹಾಗೆ ನೋಕಿಯಾ X30 5G ಫೋನ್‌ ಆಕ್ಟಾ ಕೋರ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಇದ್ದು, ಜೊತೆಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ 4,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಹಾಗಾದರೇ ನೋಕಿಯಾ X30 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಮೋಲೆಡ್‌ ಡಿಸ್‌ಪ್ಲೇ ರಚನೆ

ಈ ಮೊಬೈಲ್‌ 6.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಜೊತೆಗೆ ಡಿಸ್‌ಪ್ಲೇ 700 ನಿಟ್ಸ್‌ ಬ್ರೈಟ್‌ನೆಸ್‌ ಮತ್ತು ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದ್ದು, 20:9 ಡಿಸ್‌ಪ್ಲೇ ರಚನೆಯ ಅನುಪಾತವನ್ನು ಹೊಂದಿರಲಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಹೊಂದಿದೆ.

ಪ್ರೊಸೆಸರ್‌ ಪವರ್‌ ಯಾವುದು

ನೋಕಿಯಾದ ಈ ಮೊಬೈಲ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಔಟ್ ಬಾಕ್ಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಸ್ಮಾರ್ಟ್‌ಫೋನ್ ಮೂರು ವರ್ಷಗಳ ಓಎಸ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಮಾಸಿಕ ಭದ್ರತಾ ಪ್ಯಾಚ್‌ಗಳನ್ನು ಸ್ವೀಕರಿಸುವ ಭರವಸೆ ಇದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ.

ನೋಕಿಯಾ X30 5G ಫೋನಿಗೆ ಜಬರ್ದಸ್ತ್‌ ಡಿಸ್ಕೌಂಟ್‌!..ಅಚ್ಚರಿ ಮೂಡಿಸಿದ ಆಫರ್‌ ಬೆಲೆ

ಕ್ಯಾಮೆರಾ ಸೆನ್ಸಾರ್‌ ರಚನೆ ಹೇಗಿದೆ

ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಬರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ ಹಾಗೂ ಇತರೆ

ಈ ಫೋನ್‌ 4,200 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 33W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿದೆ. ಇನ್ನು ಫೋನ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದ್ದು, ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಸಹ ಹೊಂದಿದೆ.

ಮೆಮೊರಿ ಆಯ್ಕೆ ಹಾಗೂ ಕಲರ್‌ ಮಾಹಿತಿ

ನೋಕಿಯಾದ ಈ ಮೊಬೈಲ್‌ 8 + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಬ್ಲೂ ಕಲರ್‌ ವೇರಿಯಂಟ್‌ನಲ್ಲಿ ಲಭ್ಯ. ಸದ್ಯ ಅಮೆಜಾನ್‌ ತಾಣದಲ್ಲಿ ಆಫರ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
big price drop on nokia X30 5G on amazon great indian festival 2023 sale live. check out all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+