Home
ಸುದ್ದಿಜಾಲ

ಭಾರೀ ಬೆಲೆ ಇಳಿಕೆ!..ಈ ಫೋನಿನಲ್ಲಿ 256GB ಸ್ಟೋರೇಜ್‌, 64MP ಕ್ಯಾಮೆರಾ, 5100mAh ಬ್ಯಾಟರಿ ಇದೆ!

ಲೀಡಿಂಗ್ ಇ ಕಾಮರ್ಸ್‌ ಆಗಿ ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ದೀಪಾವಳಿ ಹಬ್ಬದ ಅಂಗವಾಗಿ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯ ಮಾಡಿದೆ. ಆ ಪೈಕಿ ಪೊಕೊ ಸಂಸ್ಥೆಯು ಪೊಕೊ X6 5G (POCO X6 5G) ಫೋನ್‌ ಸಖತ್ ಡಿಸ್ಕೌಂಟ್‌ ಬೆಲೆ ಪಡೆದುಕೊಂಡಿದೆ. ಅಂದಹಾಗೆ ಈ ಫೋನ್‌ 8GB RAM + 256GB ಹಾಗೂ 12GB RAM + 256GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ.

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ ಆಯೋಜಿಸಿರುವ ದೀಪಾವಳಿ ಮಾರಾಟದಲ್ಲಿ ಪೊಕೊ X6 5G (POCO X6 5G) ಫೋನ್‌ ಶೇ. 32% ರಷ್ಟು ನೇರ ಡಿಸ್ಕೌಂಟ್‌ ದರಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 16,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಪಡೆಯಬಹುದಾಗಿದೆ.

ಭಾರೀ ಬೆಲೆ ಇಳಿಕೆ!..ಈ ಫೋನಿನಲ್ಲಿ 256GB ಸ್ಟೋರೇಜ್‌, 5100mAh ಬ್ಯಾಟರಿ ಇದೆ!

ಅಂದಹಾಗೆ ಪೊಕೊ X6 5G (POCO X6 5G) ಮೊಬೈಲ್‌ 5,100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಒಳಗೊಂಡಿದೆ. ಇದರ ಜೊತೆಗೆ ಈ ಮೊಬೈಲ್‌ ಸ್ನ್ಯಾಪ್‌ಡ್ರ್ಯಾಗನ್ 7 ಜೆನ್‌ 2 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗಾದರೇ ಪೊಕೊ X6 5G (POCO X6 5G) ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೊಕೊ X6 5G - ಫೀಚರ್ಸ್‌ ಮಾಹಿತಿ

ಪೊಕೊ X6 5G ಫೋನ್‌ 6.67 ಇಂಚಿನ ಡಿಸ್‌ಪ್ಲೇ ಸೌಲಭ್ಯವನ್ನು ಹೊಂದಿದ್ದು, ಜೊತೆಗೆ ಅಮೋಲೆಡ್‌ ಮಾದರಿಯ ಸ್ಕ್ರೀನ್ ಪಡೆದಿದೆ. ಈ ಫೋನಿನ ಸ್ಕ್ರೀನ್ 120Hz ರಿಫ್ರೆಸ್‌ ರೇಟ್‌ ಸೌಲಭ್ಯ ಒಳಗೊಂಡಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ ವಿಕ್ಟಾಸ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ಮೊಬೈಲ್‌ ಸ್ನ್ಯಾಪ್‌ಡ್ರ್ಯಾಗನ್ 7 ಜೆನ್‌ 2 ಪ್ರೊಸೆಸರ್‌ ಪವರ್‌ ಪಡೆದಿದ್ದು, ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಹೊಂದಿದೆ.

ಇದರೊಂದಿಗೆ ಪೊಕೊ X6 5G ಫೋನ್‌ 8 GB RAM + 256 GB ಹಾಗೂ 12 GB RAM + 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಸಹ ಪಡೆದಿದೆ. ಈ ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು, ಮುಂಭಾದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸೌಲಭ್ಯ ಕೂಡಾ ಪಡೆದಿದೆ. ಇದರ ಜೊತೆಗೆ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಹಾಗೆಯೇ ಅದಕ್ಕೆ ಸಪೋರ್ಟ್‌ ಆಗಿ 67W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಇದೆ.

ಪೊಕೊ X6 ಪ್ರೊ - ಫೀಚರ್ಸ್‌ ಹೀಗಿವೆ
ಪೊಕೊ X6 ಪ್ರೊ ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ 1220 x 2712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇನ್ನು ಇದರ ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಆಗಿದ್ದು, 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಒದಗಿಸಲಿದೆ. ಅಲ್ಲದೇ ಈ ಫೋನ್‌ ಡಿಸ್‌ಪ್ಲೇಯ ಪಿಕ್ಸೆಲ್‌ ಸಾಂದ್ರತೆ 446 ppi ಆಗಿದೆ.ಇನ್ನು ಪೊಕೊ X6 ಪ್ರೊ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದೆ.

Best Mobiles in India

English summary
Big Price Drop: POCO X6 5G Now available at Lowest Price. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+