ಆಪಲ್ ಮಾಡಿದರುವ 6 ಘೋಷಣೆಗಳನ್ನು ನೀವು ತಿಳಿಯಲೇ ಬೇಕು..!!
ಆಪಲ್ ಹೊಸ ಆಪ್‌ಡೇಟ್ ಸಹ ಬಿಡುಗಡೆ ಮಾಡಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಈ ಹೊಸ ಆರು ಘೋಷಣೆಗಳನ್ನು ಟಿಮ್ ಕುಕ್ ಮಾಡಿದ್ದಾರೆ.
ಆಪಲ್ ವಾರ್ಷಿಕ ಡೆವಲಪರ್ ಕಾನ್ಫರೆನ್ಸನಲ್ಲಿ ತನ್ನ ಬಳಕೆದಾರರಿಗೆ 6 ಹೊಸ ವಿಷಯಗಳನ್ನು ತಿಳಿಸಿದೆ. ಕೆಲವು ಹೊಸ ಪ್ರಾಡೆಕ್ಟ್ ಬಿಡುಗಡೆ ಮಾಡಿದೆ, ಹೊಸ ಆಪ್‌ಡೇಟ್ ಸಹ ರಿಲೀಸ್ ಆಗದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಈ ಹೊಸ ಆರು ಘೋಷಣೆಗಳನ್ನು ಆಪಲ್ ಸಿಇಓ ಟಿಮ್ ಕುಕ್ ಮಾಡಿದ್ದಾರೆ.

ಓದಿರಿ: ಬಂದಿದೆ ಇಂಟೆಲ್ ಕಂಪ್ಯೂಟರ್ ಕಾರ್ಡ್: ನಿಮ್ಮ ಜೇಬಿನಲ್ಲಿ ಇರಿಸಬಹುದಾದ ಕಂಪ್ಯೂಟರ್
ಇಲ್ಲದೇ ಹೊಸ ಐಎಸ್ಓ ಆಪ್‌ಡೇಟ್ ಬಿಡುಗಡೆ ಮಾಡುವುದಾಗಿಯೂ ಇಲ್ಲಿ ತಿಳಿಸಲಾಗಿದ್ದು, ಇದನ್ನು ಆಪಲ್ ಟಿವಿ, ಆಪಲ್ ವಾಚ್ ಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಇದಲ್ಲದೇ ಇನ್ನು ಅನೇಕ ವಿಷಯಗಳ ಕುರಿತ ಮಾಹಿತಿ ಇಲ್ಲಿದೆ.

ಆಪಲ್ ಹೋಮ್ ಹಬ್;
ಆಪಲ್ ಹೋಮ್ ಪೊಡ್ ಎಂಬ ಸ್ಮಾರ್ಟ್ ಸ್ಪೀಕರ್ ಅನ್ನು ಪರಿಚಯ ಮಾಡಿದ್ದು, ಇದು ಗೂಗಲ್ ಹೋಮ್ ಮತ್ತು ಅಮೆಜಾನ್ ಇಕೋ ಗೆ ಸ್ಪರ್ಧೆಯನ್ನು ನೀಡಲಿದೆ. ಇದರಲ್ಲಿ ಆಪಲ್ ಸಿರಿ ಇರಲಿದ್ದು, ನಿಮ್ಮ ಅನಿಸ್ಟೆಂಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ನ್ಯೂಸ್, ಜನರಲ್ ನಾಲೆಡ್ಜ್, ವೆದರ್, ಸ್ಪೋಡ್ಸ್ ಸ್ಕೋರ್‌ಗಳನ್ನು ತಿಳಿಸುವ ಕಾರ್ಯವನ್ನು ಮಾಡಲು ಶಕ್ತವಾಗಿದೆ.

ಆಪಲ್ ಟಿವಿಯಲ್ಲಿ ಅಮೆಜಾನ್:
ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಪಲ್ ಟಿವಿಯಲ್ಲಿ ಆಮೆಜಾನ್ ಪ್ರೈಮ್ ವಿಡಿಯೋಗಳು ಪ್ಲೇ ಯಾಗಲಿದೆ. ಈ ಕುರಿತಂತೆ ಎರಡು ಕಂಪನಿಗಳ ನಡುವೆ ಒಪ್ಪಂದವಾಗಿದೆ. ಹೀಗಾಗಿ ಆಪಲ್ ಸೆಟಪ್ ಬಾಕ್ಸಿನಲ್ಲಿ ಅಮೆಜಾನ್ ವಿಡಿಯೋಗಳು ಶೀಘ್ರವೇ ಪ್ಲೇಯಾಗಲಿದೆ.

ಆಪಲ್ ವಾಚ್‌ಗೆ ಹೊಸ ಆಪ್‌ಡೇಟ್:
ಆಪಲ್ ತನ್ನ ಸ್ಮಾರ್ಟ್‌ವಾಚ್ ಗಳಲ್ಲಿ ಸಿರಿಯನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ. ಇದು 27*7 ಅಸಿಸ್ಟೆಂಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಗೂಗಲ್ ನೌ ಮತ್ತು ಪೇಸ್‌ಬುಕ್ ಫಿಡ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಆಪಲ್ ಮ್ಯೂಸಿಕ್ ಸಹ ಇದರಲ್ಲಿ ಇರಲಿದೆ.

ಆಪಲ್ ಹೊಸ ಮ್ಯಾಕ್ ಆಪರೇಟಿಂಗ್ ಸಿಸ್ಟಮ್:
ಆಪಲ್ ಮುಂದಿನ ತಲೆ ಮಾರಿನ ಆಪರೇಟಿಂಗ್ ಸಿಸ್ಟಮ್ ಅನ್ನು ಬಿಡುಗಡೆ ಮಾಡಿದೆ ಇದಕ್ಕೆ ಹೈ ಸಿಯೆರಾ ಎಂದು ಕರೆದಿದೆ. ಇದು ಈಗಾಗಲೇ ಬಳಕೆಯಲ್ಲಿರುವ ಸಿಯೆರಾ ಸಿಸ್ಟಮ್ ಗಳಿಗೆ ಆಪ್ ಡೇಡ್ ಸಹ ದೊರೆಯಲಿದೆ. ಇದು ಮ್ಯಾಕ್ ಬಳಕೆದಾರಿಗೆ ಹೊಸ ಅನುಭವವನ್ನು ನೀಡಲಿದೆ.

ಐಎಸ್ಓ 11ಗೆ ಹೊಸ ವಿನ್ಯಾಸ:
ಆಂಡ್ರಾಯ್ಡ ಹೊಸ ಹೊಸ ಆಪ್‌ಡೇಟ್ ನೀಡುತ್ತಿರುವ ಹಿನ್ನಲೆಯಲ್ಲಿ ಐಎಸ್ಓ ಆಪ್‌ಡೇಟ್ ಮಾಡಲು ಆಪಲ್ ನಿರ್ಧರಿಸಿದ್ದು, ಇದಕ್ಕಾಗಿ ಐಎಸ್ಓ 11ಗೆ ಹೊಸ ವಿನ್ಯಾಸ ಮಾಡಲಾಗಿದೆ. ಇದಕ್ಕಾಗಿ ಹೊಸ ಹೊಸ ಆಯ್ಕೆಗಳನ್ನು ನೀಡಿದೆ. ಆಪಲ್ ಪ್ಲೇ, ಸಿರಿ, ಜಿಪಿಎಸ್ ಗಳನ್ನು ಉತ್ತಮ ಪಡಿಸಿದೆ.

ಹೊಸ ಐಪ್ಯಾಡ್ ಮಾಡಲ್‌ಗಳು ಲಭ್ಯ:
ಆಪಲ್ ತನ್ನ ಐಪ್ಯಾಡ್ ಮಾಡಲ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ. ಇದಕ್ಕಾಗಿ ಹೊಸ ಹೊಸ ಮಾಡಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 10.5 ಇಂಚಿನ ಮತ್ತು 12.9 ಇಂಚಿನ ಪ್ಯಾಡ್‌ಗಳನ್ನು ಲಾಂಚ್ ಮಾಡಿದೆ.


Click it and Unblock the Notifications








