ಬಂದಿದೆ ಇಂಟೆಲ್ ಕಂಪ್ಯೂಟರ್ ಕಾರ್ಡ್: ನಿಮ್ಮ ಜೇಬಿನಲ್ಲಿ ಇರಿಸಬಹುದಾದ ಕಂಪ್ಯೂಟರ್

Written By:

ಸ್ಮಾರ್ಟ್‌ಫೋನ್ ಬಂದ ಮೇಲೆ ಕಂಪ್ಯೂಟರ್ ಬಳಕೆಯನ್ನು ಕಡಿಮೆ ಮಾಡಿದೆ. ಅದರಲ್ಲೂ ಇಂದಿನ ಸ್ಮಾರ್ಟ್‌ಫೋನ್ ಕ್ಯಾಮೆರಾ ಮಾದರಿಯಲ್ಲೂ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿಯೇ ಜನ ಕಂಪ್ಯೂಟರ್ ಇಲ್ಲವೇ ಲ್ಯಾಪ್‌ಟಾಪ್ ಗಳಿಗಿಂತಲೂ ಹೆಚ್ಚಿನ ಹಣವನ್ನು ಸ್ಮಾರ್ಟ್‌ಫೋನಿನ ಮೇಲೆ ಹಾಕುತ್ತಿದ್ದಾರೆ. ಆದರೆ ಇದನ್ನು ಬದಲಾಯಿಸುವ ಕಾಲವೂ ಹತ್ತಿರವಾಗಿದೆ. ಇದಕ್ಕಾಗಿಯೇ ಇಂಟೆಲ್ ಕ್ರೆಡಿಟ್ ಕಾರ್ಡಿನ ಸೈಜಿನ ಕಂಪ್ಯೂಟರ್ ನಿರ್ಮಾಣ ಮಾಡಿದೆ.

ಬಂದಿದೆ ಇಂಟೆಲ್ ಕಂಪ್ಯೂಟರ್ ಕಾರ್ಡ್: ನಿಮ್ಮ ಜೇಬಿನಲ್ಲಿ ಇರಿಸಬಹುದಾದ ಕಂಪ್ಯೂಟರ್


ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..?

ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುವಂತಹ ಪಾಕೆಟ್ ಕಂಪ್ಯೂಟರ್ ಅನ್ನು ಇಂಟೆಲ್ ನಿರ್ಮಾಣ ಮಾಡಿದ್ದು, ಇದನ್ನು ಇಂಟೆಲ್ ಕಂಪ್ಯೂಟರ್ ಕಾರ್ಡ್ ಎಂದು ಕರೆಯಲಾಗಿದೆ. ಇದು ವಿಶ್ದದ ಅತೀ ಸಣ್ಣ ಕಂಪ್ಯೂಟರ್ ಎಂದು ಕರೆಯಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಕಾರ್ಡ್ ಮಾದರಿಯಲ್ಲಿ ಕಾರ್ಯ ನಿರ್ವಹಣೆ:

ಸ್ಮಾರ್ಟ್‌ಕಾರ್ಡ್ ಮಾದರಿಯಲ್ಲಿ ಕಾರ್ಯ ನಿರ್ವಹಣೆ:

ನೀವು ಸೆಟಪ್ ಬಾಕ್ಸ್ ಬಳಕೆ ಮಾಡುತ್ತಿದ್ದರೆ ಈ ಸ್ಮಾರ್ಟ್‌ಕಾರ್ಡ್ ಬಗ್ಗೆ ತಿಳಿದಿರುತ್ತದೆ. ಇಂಟೆಲ್ ಬಿಡುಗಡೆ ಮಾಡಲು ಹೊರಟಿರುವ ಈ ಕಾರ್ಡ್ ಕಂಪ್ಯೂಟರ್ ಸಹ ಅದೇ ಮಾದರಿಯಲ್ಲಿ ಇರಲಿದೆ. ಇದನ್ನು ನೀವು ಎಲ್ಲಿ ಬೇಕಾದರು ಬಳಕೆ ಮಾಡಬಹುದಾಗಿದೆ.

ಇದರಲ್ಲಿದೆ 4G RAM:

ಇದರಲ್ಲಿದೆ 4G RAM:

ಇಂಟೆಲ್ ಪಾಕೆಟ್ PCಯಲ್ಲಿ ಇಂಟೆಲ್ 4GB RAM ಅಳವಡಿಸಿದ್ದು, 128GB ಫ್ಲಾಷ್ ಸ್ಟೋರೆಜ್ ನೀಡಲಾಗಿದೆ. ವೈಫೈ ಮತ್ತು ಬ್ಲೂಟೂತ್ ಸಂಪರ್ಕವನ್ನು ಇದರಲ್ಲಿ ಪಡೆಯಬಹುದಾಗಿದೆ. ಇಲ್ಲದೇ 95mm ಉದ್ದವಿದ್ದು, 55mm ಅಗಲವಿದೆ. ಅಲ್ಲದೇ 5mm ದಪ್ಪ ಇದೆ.

USB ಪೋರ್ಟ್, HDMI ಪೋರ್ಟ್ ಇರರಲಿದೆ:

USB ಪೋರ್ಟ್, HDMI ಪೋರ್ಟ್ ಇರರಲಿದೆ:

ಪಾಕೆಟ್ ಪಿಸಿಯಲ್ಲಿಯೂ ಇಂಟೆಲ್ USB ಪೋರ್ಟ್, HDMI ಪೋರ್ಟ್ ಅಳವಡಿಸಿದೆ. ಇದರ ಜೊತೆಗೆ ಡಿಸ್‌ಪ್ಲೇ ಪೋರ್ಟ್ ಸಹ ನೀಡಿದೆ. ಇದೊಂದು ಕಾರ್ಡ್ ಅನ್ನು ನೀವು ಯಾವುದೇ ಡಿಸ್‌ಪ್ಲೇಯೊಂದಿಗೆ ಕನೆಕ್ಟ್ ಮಾಡಿಕೊಂಡು ಬಳಸಬಹುದಾಗಿದೆ.

ಬೆಲೆ ಎಷ್ಟು;

ಬೆಲೆ ಎಷ್ಟು;

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಈ ಪಾಕೆಟ್ ಕಂಪ್ಯೂಟರ್ ಬೆಲೆ 10 ಸಾವಿರದಿಂದ 30 ಸಾವಿರದ ಒಳಗೆ ಇರಲಿದೆ ಎನ್ನಲಾಗಿದೆ. ಶೀಘ್ರವೇ ಈ ಕಂಪ್ಯೂಟರ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಹೇಗಿದೆ ಪ್ಯಾಕೆಟ್ ಕಂಪ್ಯೂಟರ್:

ಸದ್ಯ ಇಂಟೆಲ್ ಬಿಡುಗಡೆ ಮಾಡಲು ಸಿದ್ಧವಾಗಿರುವ ಇಂಟೆಲ್ ಕಂಪ್ಯೂಟರ್ ಕಾರ್ಡ್ ಹೇಗಿದೆ ಎಂಬುದನ್ನು ನೀವೇ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Enter the Intel Compute Card. It’s not only neat but happens to be the world’s tinniest computer. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot