Home
ಸುದ್ದಿಜಾಲ

iPhone: ಐಫೋನ್ 16 ನಲ್ಲಿ ಆಪಲ್‌ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು

ಐಫೋನ್‌ಗಳು (iPhones) ಇಂದು ಹೆಚ್ಚು ಸೇಲ್‌ ಆಗುತ್ತಿರುವ ಆಗುತ್ತಲೇ ಇರುವ ಫೋನ್‌ಗಳಾಗಿವೆ. ಈ ಫೋನ್‌ಗಳು ದುಬಾರಿಯಾದರೂ ಸಹ ಬೆಲೆಗೆ ತಕ್ಕ ಫೀಚರ್ಸ್‌ ಆಯ್ಕೆ ಪಡೆಯುವುದರಿಂದ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ಇನ್ನೂ ಸಹ ಐಫೋನ್ 15 (iPhone 15) ಬಗ್ಗೆ ಕ್ರೇಜ್ ಕಡಿಮೆ ಆಗಿಲ್ಲ. ಅದಾಗಲೇ ಐಫೋನ್ 16 (iPhone 16) ಬಗ್ಗೆ ಸಾಕಷ್ಟು ಮಾಹಿತಿ ಲೀಕ್‌ ಆಗಿವೆ.

ಹೌದು, ಐಫೋನ್ 16 ಬಗ್ಗೆ ಸಾಕಷ್ಟು ವರದಿಗಳನ್ನು ನಾವು ಕಾಣಬಹುದು. ಆದರೂ ಆಪಲ್‌ ಕೊನೆಯವರೆಗೂ ಏನನ್ನೂ ಬಿಟ್ಟುಕೊಡುವುದಿಲ್ಲ. ಆದರೆ ನಿರಾಶೆಯನ್ನಂತೂ ಮಾಡುವುದೇ ಇಲ್ಲ. ಈ ಕಾರಣಕ್ಕೆ ಮುಂದಿನ ಸರಣಿಯ ಫೋನ್ ಬಗ್ಗೆ ಸಾಕಷ್ಟು ಕುತೂಹಲ ಗ್ರಾಹಕರಿಗೆ ಇದೆ. ಈ ನಡುವೆ ಐಫೋನ್ 16 ಹೊಸ ವಿನ್ಯಾಸ, ಲಂಬ ಕ್ಯಾಮೆರಾ ಲೇಔಟ್, ವೇಗವಾದ ಚಿಪ್‌, ಪ್ರೊ ಮಾದರಿಗಳಲ್ಲಿ ದೊಡ್ಡ ಡಿಸ್‌ಪ್ಲೇ iOS 18 ನಲ್ಲಿ ಎಐ ಫೀಚರ್ಸ್‌ ಸೇರಿದಂತೆ ಅನೇಕ ಫೀಚರ್ಸ್‌ ಅನ್ನು ಇವುಗಳಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಹಾಗಿದ್ರೆ, ಬನ್ನಿ ಐಫೋನ್ 16 ನಲ್ಲಿ ಆಪಲ್‌ನಿಂದ ನಿರೀಕ್ಷಿಸಬಹುದಾದ ಪ್ರಮುಖ ಐದು ದೊಡ್ಡ ನವೀಕರಣ ಯಾವುವು ಅನ್ನೋದನ್ನು ನೋಡೋಣ.

ಐಫೋನ್ 16 ನಲ್ಲಿ ಆಪಲ್‌ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!

ವಿನ್ಯಾಸ : ಐಫೋನ್ 16 ನ ದೊಡ್ಡ ಲೀಕ್‌ ಎಂದರೆ ಅದುವೇ ಕ್ಯಾಮೆರಾ ಬಂಪ್. ಈ ಫೋನ್‌ಗಳಲ್ಲಿ ಕ್ಯಾಮೆರಾಗಳನ್ನು ಇತ್ತೀಚಿನ ಐಫೋನ್‌ಗಳಂತೆ ಅಡ್ಡಲಾಗಿ ಇರಿಸುವ ಬದಲಾಗಿ ಲಂಬವಾಗಿ ಜೋಡಿಸಲಾಗಿರುತ್ತದೆ ಎನ್ನಲಾಗಿದೆ. ಅಂದರೆ ಐಫೋನ್ X ನಂತೆಯೇ ಕ್ಯಾಮರಾ ವಿನ್ಯಾಸವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಇದರ ಐಫೋನ್ 16 ಪ್ರೊ (iPhone 16 Pro) ಎರಡು ಹೊಸ ಬಣ್ಣದಲ್ಲೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅವುಗಳೆಂದರೆ ಡೆಸರ್ಟ್ ಟೈಟಾನಿಯಂ ಮತ್ತು ಟೈಟಾನಿಯಂ ಗ್ರೇ.

ಇತರೆ ವಿಷಯಕ್ಕೆ ಬಂದರೆ ಐಫೋನ್ 16 ಪ್ರೊ 6.3 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್‌ಪ್ಲೇ ಹೊಂದಿರುತ್ತದೆ ಎನ್ನಲಾಗಿದೆ. ಜೊತೆಗೆ ಸಾಮಾನ್ಯ ಐಫೋನ್ 16 ವೇರಿಯಂಟ್‌ ಐಫೋನ್ 15 ಗಾತ್ರದಂತೆಯೇ ಇರಲಿದೆ ಎಂದು ಹೇಳಲಾಗಿದೆ. ಉಳಿದಂತೆ ಎಲ್ಲಾ ನಾಲ್ಕು ಐಫೋನ್ 16 ಮಾದರಿಗಳು ಹೊಸ ಬಟನ್ ಆಯ್ಕೆ ಪಡೆಯಲಿವೆ ಎಂದು ನಿರೀಕ್ಷೆ ಮಾಡಲಾಗಿದ್ದು, ಈ ಬಟನ್‌ಗಳು ಡಿವೈಸ್‌ನ ಕೆಳಗೆ ಬಲಭಾಗದಲ್ಲಿ ಇರಲಿವೆಯಂತೆ. ಅಲ್ಲದೆ ಲೀಕ್‌ ಮಾಹಿತಿ ಪ್ರಕಾರ ಈ ಐಫೋನ್ 16 OLED ಪ್ಯಾನೆಲ್‌ ಆಯ್ಕೆ ಪಡೆಯಲಿದ್ದು, ಉತ್ತಮ ಬ್ರೈಟ್‌ನೆಸ್‌ಗಾಗಿ ಮೈಕ್ರೋ-ಲೆನ್ಸ್ ತಂತ್ರಜ್ಞಾನವನ್ನು ಬಳಕೆ ಮಾಡಬಹುದು ಎಂದು ವರದಿಗಳಿಂದ ತಿಳಿದುಬಂದಿದೆ.

ಐಫೋನ್ 16 ನಲ್ಲಿ ಆಪಲ್‌ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!

iOS 18: iOS 18 ಐಫೋನ್‌ ಮತ್ತು ಐಪ್ಯಾಡ್‌ಗೆ ದೊಡ್ಡ ಬದಲಾವಣೆಗಳನ್ನು ತರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇದು ಹೊಸ ಉತ್ಪಾದಕ ಎಐ ಫೀಚರ್ಸ್‌, ಸಿರಿಯಲ್ಲಿ ಸುಧಾರಣೆಗಳು ಮತ್ತು ಇತರ ಹೊಸ ಫೀಚರ್ಸ್‌ ಅನ್ನು ನೀಡಲಿದೆ. ಈ ಸಂಬಂಧ ಮ್ಯಾಕ್‌ರೂಮರ್ಸ್‌ ವರದಿ ಮಾಡಿದ್ದು, iOS 18 ಎಲ್ಲಾ ಐಫೋನ್‌ಗಳಿಗೆ ಹೊಸ ಎಲ್‌ಎಲ್‌ಎಮ್‌ ಫೀಚರ್ಸ್‌ ಆಯ್ಕೆಯನ್ನು ನೀಡಲಿದೆ ಎಂದೂ ಸಹ ಉಲ್ಲೇಖಿಸಿದೆ.

ಜನರೇಟಿವ್ ಎಐ: ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ ಎಐ (Generative AI). ಎಐ ಬಳಸುವ ಬಗ್ಗೆ ಓಪನ್‌ಎಐ ಜೊತೆಗೆ ಆಪಲ್ ಮಾತನಾಡುತ್ತಿದೆ ಎನ್ನಲಾಗಿದೆ. ಇದನ್ನು iOS 18 ನೊಂದಿಗೆ ನೀಡಲಿದೆ ಎಂದು ತಿಳಿದುಬಂದಿದ್ದು, ಇದರೊಂದಿಗೆ ಆಪರೇಟಿಂಗ್ ಸಿಸ್ಟಮ್‌ನಾದ್ಯಂತ ಆಪಲ್‌ ಕೆಲವು ದೊಡ್ಡ ಎಐ ಸುಧಾರಣೆಗಳನ್ನು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಜೊತೆಗೆ ಈ ಫೋನ್‌ಗಳು ಹೊಸ A18 ಚಿಪ್ ಅನ್ನು ಪಡೆಯುತ್ತವೆ ಎಂದು ತಿಳಿದುಬಂದಿದೆ.

ಈ ವಿಶೇಷ ಚಿಪ್‌ಗಳನ್ನು 3 ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದ್ದು, ಫೋನ್‌ಗಳಲ್ಲಿನ ಕೆಲಸಗಳನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಪ್ರಸ್ತುತ, ಐಫೋನ್‌ 15 ಪ್ರೊ ಮಾದರಿಗಳು A17 ಪ್ರೊ ಚಿಪ್ ಅನ್ನು ಹೊಂದಿವೆ, ಆದರೆ ಸಾಮಾನ್ಯ ಐಫೋನ್‌ 15 ವೇರಿಯಂಟ್‌ ಹಳೆಯ A16 ಚಿಪ್ ತಂತ್ರಜ್ಞಾನವನ್ನೇ ಬಳಕೆ ಮಾಡಿಕೊಂಡು ಬರುತ್ತಿವೆ ಅನ್ನೋದನ್ನು ಈ ವೇಳೆ ಗಮನಿಸಬಹುದು.

ಐಫೋನ್ 16 ನಲ್ಲಿ ಆಪಲ್‌ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!

ಕ್ಯಾಮೆರಾ: ಮೊದಲೇ ತಿಳಿಸಿದಂತೆ ಈ ಐಫೋನ್‌ 16 ವೇರಿಯಂಟ್‌ ಐಫೋನ್‌ 12 (iPhone 12) ನಂತಹ ಲಂಬ ಕ್ಯಾಮೆರಾ ವಿನ್ಯಾಸವನ್ನು ಪಡೆಯಬಹುದು ಎನ್ನಲಾಗಿದ್ದು, ಐಫೋನ್‌ 16 ಪ್ರೊ ಮಾದರಿಗಳು ತೀಕ್ಷ್ಣವಾದ ಕಡಿಮೆ-ಬೆಳಕಿನ ಫೋಟೋಗಳಿಗಾಗಿ ಉತ್ತಮ 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಆಯ್ಕೆ ಹೊಂದಿರಲಿವೆ ಎಂದು ಹೇಳಲಾಗಿದೆ. ಜೊತೆಗೆ ಐಫೋನ್‌ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ಎರಡೂ 5x ಟೆಲಿಫೋಟೋ ಲೆನ್ಸ್ ಆಯ್ಕೆ ಪಡೆದಿರಲಿವೆ ಎನ್ನಲಾಗಿದೆ.

Best Mobiles in India

English summary
iPhone 16 may have new design, vertical camera layout, faster chip, bigger display on Pro models and AI features on iOS 18.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+